Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: 55ನೇ ವಾರ್ಷಿಕ ಕ್ರೀಡಾ ಮಹೋತ್ಸವ, ಸಮಾಜ ಬೆಳೆಯುತ್ತಿದ್ದಂತೆ ಜವಾಬ್ದಾರಿ ಹೆಚ್ಚಾಗುತ್ತಿದೆ- ಧರ್ಮಪಾಲ ದೇವಾಡಿಗ

ದೇವಾಡಿಗ ಸಂಘ ಮುಂಬಯಿ: 55ನೇ ವಾರ್ಷಿಕ ಕ್ರೀಡಾ ಮಹೋತ್ಸವ
ಸಮಾಜ ಬೆಳೆಯುತ್ತಿದ್ದಂತೆ ಜವಾಬ್ದಾರಿ ಹೆಚ್ಚಾಗುತ್ತಿದೆ- ಧರ್ಮಪಾಲ ದೇವಾಡಿಗ

ಮುಂಬಯಿ, ಡಿ.31: ದೇವಾಡಿಗ ಸಂಘ ಮುಂಬಯಿ ಇದರ ಸದಸ್ಯರಲ್ಲಿ ಕ್ರಿಯಾಶಕ್ತಿ ಎದ್ದು ಕಾಣುತ್ತಿದೆ. ಇಂದಿನ ಕ್ರೀಡಾ ಮಹೋತ್ಸವ ನೋಡುವಾಗ ಪ್ರತಿಯೊಬ್ಬರಿಗೂ ಬಹಳ ಉತ್ತೇಜನ ದೊರಕುತ್ತಿದೆ. ದಿವಂಗತ ಎಸ್.ಪಿ. ಸಾಲಿಯಾನ್, ಎಸ್.ಇ. ಅಡಿಯಾರ್ ಇವರು ಪ್ರಾರಂಭಿಸಿದ ಈ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಸತತವಾಗಿ 55ನೇ ಕ್ರೀಡಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಸಂತೋಷ ತಂದಿದೆ. ಹಾಗೆಯೇ ಸಮಾಜ ಬಾಂಧವರಲ್ಲಿ ಜವಾಬ್ದಾರಿಯೂ ಹೆಚ್ಚಾಗುತ್ತಿದೆ. ಎಂದು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಇವರು ಹೇಳಿದರು.

ದೇವಾಡಿಗ ಸಂಘ ಮುಂಬಯಿ ಇದರ ೫೫ನೇ ವಾರ್ಷಿಕ ಕ್ರೀಡಾ ಸ್ಪರ್ಧೆಯು ರವಿವಾರ, ಡಿಸೆಂಬರ್ ೩೧ರಂದು ಚರ್ಚ್ ಗೇಟ್ ರೈಲ್ವೆ ಸ್ಟೇಷನ್ ಬಳಿಯ ಮುಂಬಯಿ ಯೂನಿವರ್ಸಿಟಿ ಸ್ಪೋರ್ಟ್ಸ್ ಪೆವಿಲಿಯನ್, ಮರೀನ್ ಲೈನ್ಸ್ (ಪಶ್ಚಿಮ), ಇಲ್ಲಿ ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಇದರ ನೇತೃತ್ವದಲ್ಲಿ ಬಹಳ ಸಡಗರದಿಂದ ಜರಗಿತು. ಈ ಕ್ರೀಡಾ ಮಹೋತ್ಸವವನ್ನು ಶ್ರೀ ಧರ್ಮಪಾಲ ದೇವಾಡಿಗರು ಉದ್ಘಾಟಿಸಿ ನೀಡಿದ ಶುಭ ಸಂದೇಶದಲ್ಲಿ ಮೇಲಿನ ಮಾತುಗಳನ್ನು ಹೇಳಿದರು. ಅವರೊಂದಿಗೆ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್ ದೇವಾಡಿಗ ಇವರು ರಿಬಿನ್ ಕಟ್ ಮಾಡುವುದರ ಮೂಲಕ ಮತ್ತು ಸಂಘದ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜನಿ ಮೊಯ್ಲಿ ಇವರ ಪ್ರಾರ್ಥನೆಯೊಂದಿಗೆ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಅವರೊಂದಿಗೆ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಜೆ. ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿಯರಾದ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿಗಳಾದ ಶ್ರೀಮತಿ ಸುರೇಖಾ ದೇವಾಡಿಗ ಮತ್ತು ಶ್ರೀ ಸುರೇಶ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಹೆಚ್. ಮೋಹನದಾಸ್, ಶ್ರೀ ರವಿ ಎಸ್. ದೇವಾಡಿಗ ಹಾಗೂ ಶ್ರೀ ಶ್ರೀನಿವಾಸ್ ಕರ್ಮರನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ರಾಕೇಶ್ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಎಲ್ಲೂರು, ವೈದ್ಯಕೀಯ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಸುಂದರ್ ಮೊಯ್ಲಿ, ಇಂಟರ್ನಲ್ ಆಡಿಟರ್ ಶ್ರೀ ಜಗದೀಶ್ ದೇವಾಡಿಗ, ಪ್ರಾದೇಶಿಕ ಸಮಿತಿಗಳ ಸಮನ್ವಯಕರು ಶ್ರೀ ಜಯ ಎಲ್ ದೇವಾಡಿಗ, ಜನ ಸಂಪರ್ಕ ಪ್ರತಿನಿಧಿ ಶ್ರೀ ಪ್ರಭಾಕರ್ ದೇವಾಡಿಗ, ಸಾಂಸ್ಕ್ರತಿಕ ಚಟುವಟಿಕೆಗಳ ಪ್ರಮುಖೆ ಶ್ರೀಮತಿ ಪೂರ್ಣಿಮಾ ದೇವಾಡಿಗ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರು ಶ್ರೀ ಮೋಹನದಾಸ್ ಗುಜರನ್ ಉಪಾಧ್ಯಕ್ಷರುಗಳಾದ ಶ್ರೀಮತಿ ಶುಭ ದೇವಾಡಿಗ ಶ್ರೀ ವಿಜಯ್ ದೇವಾಡಿಗ, ಸಮಿತಿ ಸದಸ್ಯರಾದ ಶ್ರೀಮತಿ ಜಯಂತಿ ಆರ್. ಮೊಯ್ಲಿ, ಗೀತಾ ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷರು ಇವರೂ ಉಪಸ್ಥಿತರಿದ್ದರು. ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷರು ಮತ್ತು ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಇದರ ಪ್ರಮುಖರು, ಶ್ರೀ ಮೋಹನದಾಸ್ ಗುಜರನ್ ಇವರು ಎಲ್ಲರಿಗೂ ಹೂಗುಚ್ಛ ನೀಡಿ ಸ್ವಾಗತಿಸಿದರು. ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಎಲ್ಲೂರು ನಿರೂಪಿಸಿದರು,

ಶ್ರೀ ಧರ್ಮಪಾಲ್ ದೇವಾಡಿಗರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಇತ್ತೀಚಿನ ದಿನಗಳಲ್ಲಿ ದೇವಾಡಿಗ ಭಾಂಧವರು ಪ್ರಗತಿಪಥದಲ್ಲಿರುವುದು ತೋರಿಬರುತ್ತಿದೆ. ಕ್ರೀಡೆಯಲ್ಲಿ ಬಹುಮಾನ ಪಡೆಯಬೇಕು ಆದರೂ ಭಾಗವಹಿಸುವುದು ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕು. ಅಲ್ಲದೆ ಸಂಘದ ಶತಮಾನೋತ್ಸವದ ಆಚರಣೆ ಸಮೀಪಿಸುತ್ತಿದೆ. ಈಗಿನ ವ್ಯವಸ್ಥಾಪಕ ಮಂಡಳಿಗೆ ಇದರ ದೊಡ್ಡ ಜವಾಬ್ದಾರಿ ಇದೆ. ಇದಕ್ಕಾಗಿ ಎಲ್ಲರೂ ಮುಂದೆ ಬಂದು ಸಹಕರಿಸಬೇಕು ಎಂದು ಹೇಳಿ ಕ್ರೀಡಾ ಮಹೋತ್ಸವಕ್ಕೆ ಶುಭ ಕೋರಿದರು.

ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಮಾತನಾಡಿ ಕೊರೋನಾ ಕಾಲದ ಸಂದರ್ಭದಲ್ಲಿ ಕ್ರೀಡಾ ಮಹೋತ್ಸವ ಮಾಡಲು ಸಾಧ್ಯವಾಗಲಿಲ್ಲ. ಆದರೂ ಸದಸ್ಯರು ಮತ್ತು ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಬಹಳ ಮುತುವರ್ಜಿಯಿಂದ ಈ ಕ್ರೀಡಾ ಮಹೋತ್ಸವ ಆಚರಿಸಿದ್ದುದಕ್ಕೆ ಅಭಿನಂದಿಸಿದರು. ರಿಲಯನ್ಸ್ ಫೌಂಡೇಶನ್ ಇವರು ಕ್ರೀಡಾ ಮಹೋತ್ಸವವನ್ನು ಪ್ರಾಯೋಜಿಸಿದ್ದಕ್ಕಾಗಿ, ಧನ್ಯವಾದ ಗೈದರು. ಅಲ್ಲದೆ ಕ್ರೀಡೆಯು ವ್ಯಕ್ತಿಯ ಶಿಸ್ತು ಮತ್ತು ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಇನ್ನು ಬರುವ ಶತಮಾನೋತ್ಸವದ ಆಚರಣೆಗೆ ನಾವೆಲ್ಲರೂ ತಯಾರಾಗಿರಬೇಕೆಂದು ಹೇಳಿ ಎಲ್ಲರಿಗೂ ಶುಭ ಕೋರಿದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹೆಚ್. ಮೋಹನದಾಸ್ ಮಾತನಾಡಿ, ವರ್ಷದ ಕೊನೆಯ ದಿನ ಎಲ್ಲರೂ ಹೊಸವರ್ಷದ ಆಚರಣೆಯ ಬಗ್ಗೆ ತಯಾರಿ ನಡೆಸುತ್ತಿದ್ದರೂ ಸದಸ್ಯರು ಅಪೇಕ್ಷೆಗೆ ಮೀರಿ ಬಂದು ಈ ಕ್ರೀಡಾ ಮಹೋತ್ಸವಲ್ಲಿ ಭಾಗವಿಸುತ್ತಿದ್ದಕ್ಕಾಗಿ ಎಲ್ಲರಿಗೂ ಮನಪೂರ್ವಕ ಅಭಿನಂದಿಸಿದರು. ಕ್ರೀಡೆಯ ಹಂಬಲ ನಮ್ಮಲ್ಲಿ ಹೆಚ್ಚು ಹೆಚ್ಚು ಬೆಳೆದು ಬರುವ ಮುಂದಿನ ವರ್ಷದ ಸಂಘದ ಶತಮಾನೋತ್ಸವದ ಆಚರಣೆಯಲ್ಲಿ ಇಂಟೆರ್ ಸಂಘಗಳ ಕ್ರೀಡಾ ಮಹೋತ್ಸವವನ್ನು ಆಚರಿಸಬೇಕಾಗಿದ್ದು, ಸಂಘದ ಸದಸ್ಯರು ಅದಕ್ಕಾಗಿ ತಡಮಾಡದೆ ಸಜ್ಜಾಗಿರಬೇಕು ಎಂದು ಹೇಳಿ ಎಲ್ಲಾಕ್ರೀಡಾ ಪ್ರೇಮಿಗಳಿಗೆ ಶುಭ ಕೋರಿದರು.

ಆರಂಭದಲ್ಲಿ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ತಂಡಗಳಿಂದ ಪಥ ಸಂಚಲನ ನಡೆಯಿತು. ಮತ್ತು ಮಾನವಂದನೆ ನಡೆಯಿತು. ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರು ಹಾಗೂ ಸಂಘದ ಮಾಜಿ ಅಧ್ಯಕ್ಷರು ಶ್ರೀ ಧರ್ಮಪಾಲ ದೇವಾಡಿಗ, ಶ್ರೀ ಪ್ರವೀಣ್ ಎನ್ ದೇವಾಡಿಗ ಇವರು ಸದಸ್ಯ ತಂಡಗಳ ಮಾನವಂದನೆಯನ್ನು ಸ್ವೀಕರಿಸಿದರು ಮತ್ತು ಎಲ್ಲಾ ತಂಡಗಳಿಗೆ ಶುಭ ಕೋರಿದರು.

ರಿಲಯನ್ಸ್ ಫೌಂಡೇಶನ್ ಇವರು ಈ ಕ್ರೀಡಾ ಮಹೋತ್ಸವವನ್ನು ಪ್ರಾಯೋಜಿಸಿದ್ದರು. ಅಲ್ಲದೆ ಲಲಿತಾ ಸತೀಶ್ ಕಣ್ವತೀರ್ಥ ಫೌಂಡೇಶನ್ ಮತ್ತು ಶ್ರೀಮತಿ ಮುತ್ತು ಜಗ್ಗು ದೇವಾಡಿಗ ಮತ್ತು ಕುಟುಂಬ ಮಲಾಡ್ ಇವರು ಕೆಲವು ವಿಜೇತರಿಗೆ ವಿಶೇಷ ನಗದು ಬಹುಮಾನಗಳನ್ನು ಪ್ರಾಯೋಜಿಸಿದ್ದರು.

ಈ ಕ್ರೀಡಾ ಸ್ಪರ್ಧೆಯಲ್ಲಿ ವಿವಿಧ ಹಂತದ ವಯಸ್ಸಿಗನುಗುಣವಾಗಿ ಮಕ್ಕಳು ಸೇರಿದಂತೆ ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಹಂತದ ಓಟ, ರಿಲೇ, ಲಾಂಗ್ ಜಂಪ್, ಶಾಟ್ ಪುಟ್, ವೇಗದ ನಡಿಗೆ, ಹಗ್ಗ ಜಗ್ಗಾಟ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಸ್ಪರ್ಧೆಯ ಆರಂಭದಲ್ಲಿ ಉಪಹಾರ, ಮಧ್ಯಂತರದಲ್ಲಿ ಭೋಜನ ಮತ್ತು ಸಂಜೆ ಚಹಾದ ವ್ಯವಸ್ಥೆ ಮಾಡಲಾಗಿತ್ತು. ಮತ್ತು ಸಂಘದ ಎಲ್ಲಾ ಸದಸ್ಯರು ಕ್ರೀಡಾ ಸ್ಪರ್ಧೆಗಳನ್ನು ಕ್ರೀಡಾ ಮಹೋತ್ಸವದಂತೆ ಆನಂದಿಸಿದರು.

ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯು ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆಯಿತು ಮತ್ತು ಡೊಂಬಿವಲಿ ಪ್ರಾದೇಶಿಕ ಸಮಿತಿಯು ಚಾಂಪಿಯನ್ ಟ್ರೋಫಿ ಪಡೆಯಿತು. ವಿಜೇತರಾದ ಎಲ್ಲಾ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ಮೆಡಲ್, ಬಹುಮಾನ, ನಗದು ಬಹುಮಾನ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ, ಜಿಲ್ಲಾ, ರಾಜ್ಯ ಮತ್ತು ರಾಷ್ಟೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಯಶಸ್ಸನ್ನು ಸಾಧಿಸಿದ ಮಕ್ಕಳನ್ನು ಗೌರವಿಸಲಾಯಿತು.

ಈ ಕ್ರೀಡಾ ಮಹೋತ್ಸವವನ್ನು ಕ್ರೀಡಾ ರೆಫ್ರಿಗಳಾದ ಶ್ರೀ ಜಯ ದೇವಾಡಿಗ, ಶ್ರೀ ರಘು ದೇವಾಡಿಗ, ಶ್ರೀಮತಿ ಹೇಮಾವತಿ ದೇವಾಡಿಗ, ಶ್ರೀಮತಿ ಜಯಂತಿ ದೇವಾಡಿಗ, ಶ್ರೀ ಸುರೇಶ್ ದೇವಾಡಿಗ ಮೊದಲಾದವರು ಚಾಕ ಚಕ್ಯತೆಯಿಂದ ನಿಭಾಯಿಸಿದರು. ಮತ್ತು ಎಲ್ಲಾ ಸದಸ್ಯರು ಸಹಕರಿಸಿದರು.

55ನೇ ಕ್ರೀಡಾಕೂಟದಲ್ಲಿ ವೈಯಕ್ತಿಕ "ಅತ್ಯುತ್ತಮ ಅಥ್ಲೀಟ್" ಪ್ರಶಸ್ತಿಯನ್ನು ಪಡೆದ ವಿವರ ಈ ಕೆಳಗಿನಂತಿವೆ:
1. ಹದಿನಾರು ವರ್ಷದೊಳಗಿನ ಹುಡುಗರು: ಅಮೆಯ್ ತೋಳಾರ್ - ಸಿಟಿ ಎಲ್‌ಸಿಸಿ, ಹುಡುಗಿಯರು: ತಾಶಿ ಎಸ್ ಮೊಯಿಲಿ- ಥಾಣೆ ಎಲ್‌ಸಿಸಿ.
DSMASM2023 2.ಇಪ್ಪತ್ತೆರಡು ವರ್ಷದೊಳಗಿನವರು, ಹುಡುಗರು: ಅಕ್ಷಿತ್ ಶ್ರೀಯಾನ್- ಜೋಗೇಶ್ವರಿ ಎಲ್‌ಸಿಸಿ, ಸ್ಪರ್ಶ ಗುಜರನ್- ಮೀರಾ ರೋಡ್ ಎಲ್‌ಸಿಸಿ. ಹುಡುಗಿಯರು: ಸ್ಫೂರ್ತಿ ಮೊಯಿಲಿ- ನವಿ ಮುಂಬೈ ಎಲ್‌ಸಿಸಿ.
DSMASM2023 3. ಮೂವತ್ತು ವರ್ಷದೊಳಗಿನವರು, ಹುಡುಗರು: ನಿತೀಶ್ ದೇವಾಡಿಗ- ಜೋಗೇಶ್ವರಿ ಎಲ್‌ಸಿಸಿ, ಹುಡುಗಿಯರು: ಕೃತಿಕಾ ದೇವಾಡಿಗ- ಚೆಂಬೂರು ಎಲ್‌ಸಿಸಿ.
DSMASM2023 4. ನಲವತ್ತು ವರ್ಷದೊಳಗಿನ ಪುರುಷರು: ಚೇತನ್ ದೇವಾಡಿಗ ಡೊಂಬಿವಲಿ ಎಲ್‌ಸಿಸಿ, ಮತ್ತು ಮಹಿಳೆಯರು: ಗೀತಾ ಜಿ. ದೇವಾಡಿಗ ಡೊಂಬಿವಲಿ ಎಲ್‌ಸಿಸಿ.
DSMASM2023 ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ, ಚಿನ್ನದ ಮಹಿಳೆ ಜಯಂತಿ ಎಂ ದೇವಾಡಿಗ ಇವರಿಗೆ ಸತ್ಕರಿಸಲಾಯಿತು ಹಾಗು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೂ ಸತ್ಕರಿಸಲಾಯಿತು.