Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ಫುಟ್ಬಾಲ್ ಪಂದ್ಯ

ದೇವಾಡಿಗ ಸಂಘ ಮುಂಬಯಿ: ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ಫುಟ್ಬಾಲ್ ಪಂದ್ಯ

ಡೊಂಬಿವಲಿ, ಫೆ. 4: ದೇವಾಡಿಗ ಸಂಘ ಮುಂಬಯಿ ಇದರ ಡೊಂಬಿವಲಿ ವಲಯದ (ದೀವಾ ದಿಂದ ಕರ್ಜತ್-ಕಸಾರ) ಕಾರ್ಯಧ್ಯಕ್ಷರಾದ ಶ್ರೀ ಅಶೋಕ್ ದೇವಾಡಿಗ,ಉಪ ಕಾರ್ಯಧ್ಯಕ್ಷರಾದ ಶ್ರೀಮಾನ್ ಸುರೇಶ್ ದೇವಾಡಿಗರ ಮತ್ತು ಕಮಿಟಿ ಸದಸ್ಯರ ಬೆಂಬಲದಿಂದ ಯುವ ವಿಭಾಗದ ಕಾರ್ಯಾಧ್ಯಕ್ಷರ ನೇತೃತ್ವಲ್ಲಿ ಹಾಗೂ 10 ಸಮನ್ವಯ ಸಮಿತಿಗಳು ಮತ್ತು ಯುವ ಸಂಘಟನೆಯ 10 ತಂಡದೊಂದಿಗೆ ಡೊಂಬಿವಲಿ ಪಲವ ಟರ್ಫ್ ಫುಟ್ಬಲ್ ಸ್ಟೇಡಿಯಂ ಇಲ್ಲಿ ಫುಟ್ಬಾಲ್ ಪಂದ್ಯವನ್ನು ಆಯೋಜಿಸಲಾಯಿತು. ಈ ಪಂದ್ಯದಲ್ಲಿ ಯುವಕರು ಹಿರಿಯರು ಸೇರಿ ಸಂಘದ ಹತ್ತೂ ಪ್ರಾದೇಶಿಕ ಸಮಿತಿಗಳು ಪಾಲ್ಗೊಂಡರು.

ಈ ಪಂದ್ಯವನ್ನು ಮುಂಜಾನೆ ೯.೦೦ ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾದ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಪಟು ಹಾಗೂ ಯೋಗ ಪಟು ಶ್ರೀಮತಿ ಜಯಂತಿ ಮಾಧವ ದೇವಾಡಿಗ ಇವರು ಚಾಂಪಿಯನ್ಸ್ ಟ್ರೋಫಿಯನ್ನು ಬಹಿರಂಗಪಡಿಸುವುದರ ಮೂಲಕ ಪಂದ್ಯವನ್ನು ಉದ್ಘಾಟಿಸಿದರು ಮತ್ತು ಸಂಘದ ಕ್ರೀಡಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ.ರಘು ಮೊಯಿಲಿ ಇವರು ಶ್ರೀ ಅಶೋಕ್ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಈ ಪಂದ್ಯಕ್ಕೆ ಚಾಲನೆ ನೀಡಿದರು. ಈ ಸಮಯದಲ್ಲಿ ಸಂಘದ ವ್ಯವಸ್ಥಾಪಕ ಮಂಡಳಿ ಸದಸ್ಯರು, ಪ್ರಾದೇಶಿಕ ಸಮಿತಿಗಳ ವ್ಯವಸ್ಥಾಪಕ ಮಂಡಳಿ ಸದಸ್ಯರು ಮತ್ತು ಸಂಘದ ಸದಸ್ಯರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡರು.

ಈ ಪಂದ್ಯದ ಬಗ್ಗೆ ಪ್ರತಿಕ್ರಯಿಸಿದ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಈ ಪಂದ್ಯದ ಆಯೋಜನೆಯನ್ನು ಬಹಳವಾಗಿ ಮೆಚ್ಚಿಕೊಂಡು ತುಂಬಾ ಶಿಸ್ತುಬದ್ಧ ಆಯೋಜನೆ ಮತ್ತು ವ್ಯವಸ್ಥಾಪನೆ ಎಂದು ಕೊಂಡಾಡಿದರು. ಅಲ್ಲದೆ ಡೊಂಬಿವಲಿ ಸಮಿತಿಯು ತನ್ನ ಐದು ತಂಡಗಳನ್ನು ನಿರ್ಮಿಸಿ ಪಾಲ್ಗೊಂಡಿದ್ದಕ್ಕೆ ಡೊಂಬಿವಲಿ ಶಾಂತಿಯನ್ನು ಅಭಿನಂದಿಸಿದರು. ಸಂಘದ ಕ್ರೀಡಾ ಪಂದ್ಯಗಳಲ್ಲಿ ಎಲ್ಲಾ ಯುವಕರು ಭಾಗವಹಿಸುತ್ತಾರೆ ಆದರೆ ಅವರು ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಸಂಘದ ಶತಮಾನೋತ್ಸವ ಬಹಳ ಸಮೀಪಿಸುತ್ತಿದ್ದು ಅದರ ಆಯೋಜನೆಯಲ್ಲಿ ಮುಂದಾಳುತ್ವವನ್ನು ವಹಿಸಬೇಕು ಎಂದು ಹೇಳಿದರು.ಮಿರಾರೋಡ್ ವಿಭಾಗದ ಯುವ ವಿಭಾಗದ ಉತ್ತಮ್ ದೇವಾಡಿಗ ಇವರು ಈ ಸಂದರ್ಭದಲ್ಲಿ ಮಾತನಾಡಿ ಸಂಘದ ಯುವ ಸದಸ್ಯರಲ್ಲಿ ತುಂಬಾ ಟ್ಯಾಲೆಂಟ್ ಇದ್ದು ಇಂದು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಅವರಿಗೆ ಸಹಕರಿಸಿ ಅವರ ಟ್ಯಾಲೆಂಟ್ ಇನ್ನೂ ಬೆಳೆಯಲು ಇಂತಹ ಪಂದ್ಯಗಳನ್ನು ಆಚರಿಸಬೇಕು ಎಂದು ಹೇಳಿದರು. ಚೆಂಬೂರ್ ತಂಡದ ಕ್ಯಾಪ್ಟನ್ ಶ್ರೀ ಗೌರವ್ ದೇವಾಡಿಗ ತನ್ನ ಮನೋಗತವನ್ನು ವ್ಯಕ್ತಪಡಿಸುತ್ತಾ ಪಂದ್ಯದ ಯಶಸ್ವಿಗಾಗಿ ಕೆಲಸಮಾಡಿದ ಎಲ್ಲರನ್ನು ಅಭಿನಂದಿಸಿದರು. ಇನ್ನೋರ್ವ ಹಿರಿಯ ಕ್ರೀಡಾ ಪಟು ಹಾಗೂ BARC ಫುಟ್ಬಾಲ್ ತಂಡದಲ್ಲಿ ಆಡಿ ಪ್ರತಿನಿಧಿಸಿ ನಿವೃತ್ತ ಹೊಂದಿದ ಶ್ರೀ ದಿನಕರ್ ದೇವಾಡಿಗರು ಮಾತನಾಡುತ್ತಾ ಯುವ ಕ್ರೀಡಾಪಟುಗಳು ಮುಂದೆಬಂದು ಇನಿತಹ ಪಂದ್ಯಾವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೇಳಿಕೊಂಡರು.

ಬಳಿಕ ಬಹುಮಾನ ವಿತರಣೆ ಕಾರ್ಯಕ್ರಮವು ಸಂಜೆ ೫.೦೦ ಗಂಟೆಗೆ ನಡೆಯಿತು. ಬಹುಮಾನ ವಿತರಣೆಯ ನಿರೂಪಣೆಯನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾಡಿದರು. ಈ ಸಂದರ್ಭದಲ್ಲಿ ಈ ಪಂದ್ಯದ ಮುಖ್ಯ ಪ್ರಾಯೋಜಕವನ್ನು ಮಾಡಿದ್ದಕ್ಕಾಗಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರನ್ನು ಗೌರವಿಸಲಾಯಿತು. ಅಲ್ಲದೆ ಪಂದ್ಯಕ್ಕಾಗಿ ಪ್ರಾಯೋಜಕತ್ವ ನೀಡಿದ ಶ್ರೀ ವಿಜಯ್ ದೇವಾಡಿಗ ಶ್ರೀ ಕೃಷ್ಣ ದೇವಾಡಿಗ ಅಲ್ಲದೆ ಪಂದ್ಯದ ಮುಖ್ಯ ರೂವಾರಿಗಳಾದ ವಿನೀಶ್ ದೇವಾಡಿಗ ಮತ್ತು ಅಭಿಜಿತ್ ದೇವಾಡಿಗ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಅಲ್ಲದೆ ಯುವ ವಿಭಾಗದ ಉತ್ತೆಜ್ ದೇವಾಡಿಗ, ರಾಕೇಶ್ ಮೊಯಿಲಿ, ಹರೀಶ್ ದೇವಾಡಿಗ ಇವರು ಎಲ್ಲಾ ಪ್ರಾದೇಶಿಕ ಸಮಿತಿಗಳನ್ನು ಒಟ್ಟುಗೂಡಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಪಂದ್ಯವನ್ನು ಯಾವುದೇ ಗೊಂದಲವಿಲ್ಲದೆ ನಿಉಂತ್ರಿಸಿ ನಿರ್ಣಯ ನೀಡಿದ ರೆಫ್ರೀಗಳನ್ನೂಗೌವರವಿಸಲಾಯಿತು.

ಬಳಿಕ ನಡೆದ ಬಹುಮಾನ ವಿತರಣೆಯಲ್ಲಿ "ಮ್ಯಾನ್ ಆಫ್ ದಿ ಮ್ಯಾಚ್ ಫಾರ್ ಲೇಡೀಸ್ ಫೈನಲ್ಸ್" ಬಹುಮಾನವನ್ನು ಡಾ. ಪ್ರೀತಿ ದೇವಾಡಿಗ ಇವರಿಗೆ ಫೈನಲ್ಸ್ ನಲ್ಲಿ ಉತ್ತಮ ಡಿಫೆನ್ಸ್ ನೀಡಿದಕ್ಕಾಗಿ ನೀಡಲಾಯಿತು. "ಮ್ಯಾನ್ ಆಫ್ ದಿ ಮ್ಯಾಚ್" ಬಹುಮಾನವನ್ನು ಉತ್ತಮ ಪ್ರದರ್ಶನ ನೀಡಿದ ಶ್ರೀ ಗೌರವ ದೇವಾಡಿಗ ಇವರಿಗೆ ನೀಡಲಾಯಿತು. ಇನಾಗುರಲ್ ಮ್ಯಾಚ್ ಪಂದ್ಯದ ಮಹಿಳಾ ತಂಡದ ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನವನ್ನುಕೃತಿಕಾ ದೇವಾಡಿಗ ಇವರು ಪಡೆದು ಪಡೆದುಕೊಂಡರು. ಡೊಂಬಿವಲಿ ಮಹಿಳಾ ತಂಡವು ಪಂದ್ಯದ ಮಹಿಳಾ ವಿಜೇತ ಬಹುಮಾನ ಪಡೆಯಿತು. ವೈಯುಯಕ್ತಿಕ ಬಹುಮಾನಗಳಲ್ಲಿ ಬೆಸ್ಟ್ ಗೋಲ್ ಕೀಪರ್ ಬಹುಮಾನವನ್ನು ಶ್ರೀ ದಿನಕರ್ ದೇವಾಡಿಗ ಇವರು ಪಡೆದರು. ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಬಹುಮಾನವನ್ನು ಷ್ಪರ್ಷ್ ದೇವಾಡಿಗ ಇವರು ಪಡೆದರು. ಪಂದ್ಯದ ಎರಡನೇ ಬಹುಮಾನವನ್ನು ಚೆಮ್ಬುರ್-ಭಾಂಡುಪ್ ತಂಡ ಪಡೆಯಿತು. ಈ ಬಹುಮಾನವನ್ನು ಶ್ರೀ ರಾಮಣ್ಣ ದೇವಾಡಿಗ ಮತ್ತು ಇತರರಿಂದ ಬಹುಮಾನ ವಿತರಣೆ ಮಾಡಲಾಯಿತು.

ಪಂದ್ಯದ ಪ್ರಥಮ ಬಹುಮಾನವನ್ನು ಮೀರಾರೋಡ್ ತಂಡ ಪಡೆಯಿತು. ಈ ಬಹುಮಾನವನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಮತ್ತು ಇತರರು ಹಸ್ತಾಂತರಿಸಿದರು. ಈ ಪಂದ್ಯದಲ್ಲಿ ವಿಜೇತ ತಂಡಗಳ ಎಲ್ಲಾ ಕ್ರೀಡಾಪಟುಗಳಿಗೆ ಪದಕ ನೀಡಿ ಗೌರವಿಸಿದರು ಡೊಂಬಿವಲಿ ವಲಯದ ಕಾರ್ಯದರ್ಶಿ ಶ್ರೀ ವಿಜಯ್ ದೇವಾಡಿಗ ಇವರು ಈ ಪಂದ್ಯದಲ್ಲಿ ಬೆಳಿಗ್ಗೆಯಿಂದ ಆಟದ ಕೊನೆಯ ವರೆಗೆ ಸಹಕರಿಸಿದ ಸಂಘದ ಉಪಾಧ್ಯಕ್ಷರು, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ವಿಶ್ವನಾಥ ದೇವಾಡಿಗರು ,ಎಲ್ಲಾ ಕಮಿಟಿ ಸದಸ್ಯರು,ಸಂಘದ 10 ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷರು ಸಮಿತಿ ಸದಸ್ಯರು ಮತ್ತುಎಲ್ಲಾ ಸದಸ್ಯ ಬಾಂಧವರಿಗೆ ವಲಯದ ಪರವಾಗಿ ಧನ್ಯವಾದ ನೀಡಿದರು. ಶ್ರೀ ವಿಜಯ ದೇವಾಡಿಗ ಮತ್ತು ಶ್ರೀ ಜಯತಾಕ್ಷಿ ದೇವಾಡಿಗ ಇವರು ನಗದು ಬಹುಮಾನವನ್ನು ವಿಜಯ ದೇವಾಡಿಗರ ತಾಯಿ ದಿವಂಗತ ಸುಮತಿ ದೇವಾಡಿಗ ಇವರ ಸ್ಮರಣಾರ್ಥ ನೀಡಿದರು.

ವೇದಿಕೆಯಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿಯರಾದ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿ ಶ್ರೀ ಸುರೇಶ್ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಎಲ್ಲೂರು, ಪ್ರಾದೇಶಿಕ ಸಮಿತಿಗಳ ಸಮನ್ವಯಕರು ಶ್ರೀ ಜಯ ಎಲ್ ದೇವಾಡಿಗ, ಸಾಂಸ್ಕ್ರತಿಕ ಚಟುವಟಿಕೆಗಳ ಪ್ರಮುಖೆ ಶ್ರೀಮತಿ ಪೂರ್ಣಿಮಾ ದೇವಾಡಿಗ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರು ಶ್ರೀ ಮೋಹನದಾಸ್ ಗುಜರನ್ ಉಪಾಧ್ಯಕ್ಷರುಗಳಾದ ಶ್ರೀಮತಿ ಶುಭ ದೇವಾಡಿಗ ಶ್ರೀ ವಿಜಯ್ ದೇವಾಡಿಗ, ಸಮಿತಿ ಸದಸ್ಯರಾದ ಶ್ರೀಮತಿ ಜಯಂತಿ ಆರ್. ಮೊಯ್ಲಿ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಟ್ಟು ಈ ಪಂದ್ಯದ ರಿಸಲ್ಟ್ ಈ ಕೆಳಗಿನಂತಿವೆ:
ವಿಜೇತರು: ಮಿರಾರೋಡ್ ಪ್ರಾದೇಶಿಕ ಸಮಿತಿ;
ರನ್ನರ್ಸ್ ಅಪ್- ಚೆಂಬೂರ್- ಭಾಂಡೂಪ್ ಪ್ರಾದೇಶಿಕ ಸಮಿತಿ;
ಮಹಿಳೆಯರು ಮತ್ತು 15 ವರ್ಷದೊಳಗಿನವರು:
ವಿಜೇತರು: ಡೊಂಬಿವಲಿ ಪ್ರಾದೇಶಿಕ ಸಮಿತಿ;
ಪಂದ್ಯಾವಳಿಯ ಪುರುಷ ವಿಜೇತರು - ಶ್ರೀ ಸ್ಪರ್ಶ್ ಗುಜ್ರಾನ್ ಮತ್ತು ಮಹಿಳಾ ವಿಜೇತರು: ಕೃತಿಕಾ ದೇವಾಡಿಗ, ಪ್ರಮೇಶ್ ದೇವಾಡಿಗ
ಚಿನ್ನದ ಕೈಗವಸು: ಶ್ರೀ ದಿನಕರ ದೇವಾಡಿಗ;
ಗೋಲ್ಡನ್ ಬೂಟ್ಸ್- ರೋಹನ್ ದೇವಾಡಿಗ
ತೀರ್ಪುಗಾರರು: ಶ್ರೀ ಚಂದ್ರೇಶ್, ಶ್ರೀ ಮದನ್, ಶ್ರೀ ವಿಕ್ಕಿ, ಶ್ರೀ ಕೃಷ್ಣ ಮತ್ತು ಶ್ರೀ ಅರುಣ್.
ಸ್ಕೋರರ್ಸ್ -: ಶ್ರೀ ವಿಜಯ್ ದೇವಾಡಿಗ ಮತ್ತು ಶ್ರೀ ಗುರುರಾಜ್ ದೇವಾಡಿಗ;
ಕಾಮೆಂಟರಿ :- ಶ್ರೀ ವಿಘ್ನೇಶ್ ದೇವಾಡಿಗ, ಶ್ರೀ ಕೃಷ್ಣ ದೇವಾಡಿಗ ಮತ್ತು ಶ್ರೀ ದೀಕ್ಷಿತ್ ದೇವಾಡಿಗ.
ಈ ಪಂದ್ಯದ ಯಶಸ್ವಿಗಾಗಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ದೇವಾಡಿಗ ಉಪಾಧ್ಯಕ್ಷರಾದ ಸುರೇಶ್ ದೇವಾಡಿಗ; ಕಾರ್ಯದರ್ಶಿವಿಜಯ್ ದೇವಾಡಿಗ; ಜೊತೆ ಕಾರ್ಯದರ್ಶಿ ಶ್ರೀ ಕೃಷ್ಣ ದೇವಾಡಿಗ, ಖಜಾಂಚಿ ಶ್ರೀ ಜಯಂತ್ ದೇವಾಡಿಗ; ಜೊತೆ ಖಜಾಂಚಿ ಶ್ರೀ ದಿನೇಶ್ ದೇವಾಡಿಗ, ಯುವ ಅಧ್ಯಕ್ಷ ಶ್ರೀ ಚೇತನ್ ದೇವಾಡಿಗ, ಯುವ ಉಪಾಧ್ಯಕ್ಷ, ಶ್ರೀ ಅಭಿಜಿತ್ ದೇವಾಡಿಗ, ಯುವ ಉಪಾಧ್ಯಕ್ಷ, ನಿಶಾ ದೇವಾಡಿಗ, ಯುವ ಕಾರ್ಯದರ್ಶಿ, ಶ್ರೀ ವಿನೀಶ್ ದೇವಾಡಿಗ, ಜೊತೆ ಯುವ ಕಾರ್ಯದರ್ಶಿ ಶ್ರೀ ಕಾರ್ತಿಕ್ ದೇವಾಡಿಗ ಮೊದಲಾದವರು ಸಹಕರಿಸಿದರು