Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಸಿಟಿ ಸ್ಥಳೀಯ ಸಮನ್ವಯ ಸಮಿತಿಯಿಂದ ವ್ಯಕ್ತಿತ್ವ ವಿಕಸ; ಮತ್ತು ಸಾರ್ವಜನಿಕ ಭಾಷಣ; ಕಾರ್ಯಾಗಾರ

ದೇವಾಡಿಗ ಸಂಘ ಮುಂಬಯಿ: ಸಿಟಿ ಸ್ಥಳೀಯ ಸಮನ್ವಯ ಸಮಿತಿಯಿಂದ ವ್ಯಕ್ತಿತ್ವ ವಿಕಸ; ಮತ್ತು ಸಾರ್ವಜನಿಕ ಭಾಷಣ; ಕಾರ್ಯಾಗಾರ

ಮುಂಬಯಿ, ಫೆ.೨೫: ದೇವಾಡಿಗ ಸಂಘ ಮುಂಬಯಿ ಇದರ ಸಿಟಿ ಸ್ಥಳೀಯ ಸಮನ್ವಯ ಸಮಿತಿಯ ವತಿಯಿಂದ, ಕಾರ್ಯಾಧ್ಯಕ್ಷ ಶ್ರೀ ಭಾಲಚಂದ್ರ ದೇವಾಡಿಗರ ನೇತೃತ್ವದಲ್ಲಿ ;ವ್ಯಕ್ತಿತ್ವ ವಿಕಸನ; ಮತ್ತು ;ಸಾರ್ವಜನಿಕ ಭಾಷಣ; ಕಾರ್ಯಾಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಾಗಾರವು ಇಂದು ಇಲ್ಲಿಯ ದಾದರ್ ಪೂರ್ವದ ಸಂಘದ ದೇವಾಡಿಗ ಸೆಂಟರ್ ಇಲ್ಲಿ ಜರಗಿತು .

ಸಮಿತಿಯ ಪರವಾಗಿ ಕುಮಾರಿ ಪೂರ್ವಿ ದೇವಾಡಿಗ ಇವರು ಆತ್ಮೀಯ ಸ್ವಾಗತ ನೀಡಿ ಬಳಿಕ ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

ಖ್ಯಾತ ತರಬೇತುದಾರರಾದ ಶ್ರೀ ಹೇಮನಾಥ ದೇವಾಡಿಗ ಮತ್ತು ಕೊರ್ಪೊರೇಟ್ ಮಾನವ ಸಂಪನ್ಮೂಲ ಅಧಿಕಾರಿ ಕುಮಾರಿ ಪ್ರಿಯಾ ಜಯಕರ್ ದೇವಾಡಿಗರು ಕಾರ್ಯಾಗಾರದ ಪ್ರಮುಖ ವಕ್ತಾರರಾಗಿದ್ದರು ಮತ್ತು ಭಾಗವಹಿಸಿದವರಿಗೆ ಉತ್ತಮ ಸಲಹೆ ನೀಡಿ ವೈಯುಕ್ತಿಕವಾಗಿ ನಾವು ನಮ್ಮನ್ನು ಯಾವ ಯಾವ ಸಂದರ್ಭಗಳಲ್ಲಿ ಹೇಗೆ ಪ್ರದರ್ಶಿಸಬೇಕು ಎಂದು ವಿವರಿಸಿ ಸೇರಿದವರ ಗಮನ ಸೆಳೆದರು. ಶ್ರೀ ಭಾಲಚಂದ್ರ ದೇವಾಡಿಗ ಇವರು ಇಬ್ಬರನ್ನೂ ಗೌರವದಿಂದ ಸ್ವಾಗತ ನೀಡಿದರು.

ಕಾರ್ಯಗಾರದ ಪ್ರಥಮಾರ್ಧದಲ್ಲಿ ಶ್ರೀ ಹೇಮನಾಥ ದೇವಾಡಿಗ ಅವರು ವ್ಯಕ್ತಿತ್ವ ವಿಕಸನದ ಸಂವಾದದ ಮೂಲಕ ಸಭಿಕರನ್ನು ಆಕರ್ಷಿಸಿದರು. ಇಂದಿನ ಯುವಕರು ಉದ್ಯೋಗ ನಿಮಿತ್ತ ಬೇರೆ ಬೇರೆ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ ಅವರು ಹೇಗೆ ತಮ್ಮನ್ನು ಪ್ರದರ್ಶಿಸ ಬೇಕು, ಅಥವಾ ಬೇರೆ ಕಾರ್ಯಕ್ರಮಗಳು ನಡೆಯುವಲ್ಲಿ ಭಾಗವಹಿಸುವಾಗ ಅವರ ಉಡುಪು, ತೊಡಿಗೆ, ಮಾತುಗಳು ಹೇಗಿರಬೇಕು, ಮಾತನಾಡುವ ಧ್ವನಿ ಹೀಗೆಲ್ಲಾ ಅನೇಕ ತರಹದ ಕುರುಹುಗಳನ್ನು ವಿವರಿಸಿ ಪ್ರಾತ್ಯಕ್ಷತೆ ನೀಡಿದರು. ನಿರಂತರ ಸ್ವ-ಸುಧಾರಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ತಮ್ಮನ್ನು ಪ್ರಸ್ತುತವಾಗಿರಲು ಪ್ರತಿಯೊಬ್ಬರು ಹೇಗಿರಬೇಕು ಎಂದು ಹೇಳುತ್ತಾ ಮತ್ತು ಸ್ಲೈಡ್ ಶೋ ಮುಖಾಂತರ ವಿವರಣೆ ನೀಡಿದರು .

ಕಾರ್ಯಾಗಾರದ ದ್ವಿತೀಯಾರ್ಧವು ಕುಮಾರಿ ಪ್ರಿಯಾ ಜಯಕರ್ ದೇವಾಡಿಗ ಅವರ ;ಸಾರ್ವಜನಿಕ ಭಾಷಣ; ಕಲೆಯ ಮನಮೋಹಕ ಒಳನೋಟಗಳೊಂದಿಗೆ ಅದರ ಗುಟ್ಟನ್ನು ವಿವರಿಸಿದರು. ವೇದಿಕೆಯ ಮೇಲೆ ಭಾಷಣ ಮಾಡುವಾಗ ತಮ್ಮ ಆತ್ಮವಿಶ್ವಾಸದಿಂದ, ಧೈರ್ಯದಿಂದ ವೇದಿಕೆಯನ್ನು ಕಮಾಂಡ್ ಮಾಡುವುದು ಹೇಗೆ ಎಂದು ಅಮೂಲ್ಯವಾದ ಸಲಹೆಗಳು ಮತ್ತು ತಂತ್ರಗಳನ್ನು ವಿವರಿಸಿ ಹೇಳಿದರು. ಪ್ರಾಮುಖ್ಯವಾಗಿ ವೇದಿಕೆಯ ಮೇಲೆ ವಿಷಯ ಮಂಡಿಸುವವರು ನಿಯೋಜಿತ ವಿಷಯಗಳ ಕುರಿತು ತಮ್ಮ ಹೊಸ ಕೌಶಲ್ಯಗಳನ್ನು ಹೇಗೆ ಪ್ರದರ್ಶಿಸುವುದು, ಸಹಯೋಗವನ್ನು ಬೆಳೆಸುವುದು, ಸಭಿಕರನ್ನು ಹೇಗೆ ಆಕರ್ಷಿಸುವುದು, ಅಲ್ಲದೆ ನೌಕರಿ ನಿಮಿತ್ತ ವಿವಿಧ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುವ ಮುನ್ನ ನಡೆಯುವ ಇಂಟರ್ವ್ಯೂ ಹೋಗುವಾಗ ನಮ್ಮ ತಯಾರಿ ಹೇಗೆ ಇರಬೇಕು ಮೊದಲಾದ ವಿಷಯಗಳನ್ನು ಕುಮಾರಿ ಪ್ರಿಯಾ ಜಯಕರ್ ದೇವಾಡಿಗ ಇವರು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

ಒಟ್ಟಿನಲ್ಲಿ ಈ ಕಾರ್ಯಾಗಾರವು ವ್ಯಕ್ತಿಗಳ ವೈಯುಕ್ತಿಕ ಬೆಳವಣಿಗೆ ಮತ್ತು ಪರಿಣಾಮಕಾರಿ ಸಂವಹನದ ಕಡೆಗೆ ಸಶಕ್ತಗೊಳಿಸುವ ಪ್ರಯತ್ಮವೆಂದರು .ಈ ಕಾರ್ಯಾಗಾರದ ಕೊನೆಯಲ್ಲಿ ಪ್ರಶ್ನೋತ್ತರ ಸಂದರ್ಭದಲ್ಲಿ ಉಪಸ್ಥಿತ ಶ್ರೋತೃಗಳು ಕೇಳಿದ ಪ್ರಶ್ನೆಗಳಿಗೆ ಶ್ರೀ ಹೇಮನಾಥ ದೇವಾಡಿಗ ಮತ್ತು ಕುಮಾರಿ ಪ್ರಿಯಾ ಜಯಕರ್ ದೇವಾಡಿಗ ಇವರು ಸಮರ್ಥವಾಗಿ ಉತ್ತರ ನೀಡಿದರು.
ಈ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ, ಪ್ರಥಮ ಮಹಿಳೆ ಪ್ರಮೀಳಾ ಪ್ರವೀಣ್ ದೇವಾಡಿಗ, ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ಎಸ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಜೆ ಮೊಯ್ಲಿ, ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್ ದಾಸ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಪ್ರಭಾಕರ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ಹೇಮನಾಥ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಪ್ರಮೀಳಾ ವಿ ಶೇರಿಗಾರ್ ಕಾರ್ಯದರ್ಶಿಗಳಾದ ಸುಜಯ ವಿ ದೇವಾಡಿಗ ಸಂಘದ ಸಮಿತಿ ಸದಸ್ಯರಾದ ಶ್ರೀ ಸುಧಾಕರ ಎಲ್ಲೂರು, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಶ್ರೀಮತಿ ಗೀತಾ ದೇವಾಡಿಗ, ಸಿಟಿ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ದೇವಾಡಿಗ ಯುವ ವಿಭಾಗದ ಹಂಗಾಮಿ ಕಾರ್ಯಾಧ್ಯಕ್ಷ ಶ್ರೀ ರಾಕೇಶ್ ದೇವಾಡಿಗ ಸಂಘದ ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರು, ಯುವ ಸದಸ್ಯರು ಮತ್ತು ಸಂಘದ ಸದಸ್ಯರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಯುವ ತಂಡಗಳ ಗುಂಪು ಆಯೋಜಿಸ ಕೌಶಲ್ಯ ಪರೀಕ್ಷೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಅಲ್ಲದೆ ಇಂದಿನ ಯುವಕರಿಗೆ ಬಹಳ ಉಪಯುಕ್ತವಾದ ಈ ಕಾರ್ಯಾಗಾರವನ್ನು ಆಯೋಜಿಸಿದ ಸಿಟಿ ಸ್ಥಳೀಯ ಸಮನ್ವಯ ಸಮಿತಿ ವಿಶೇಷವಾಗಿ ಕಾರ್ಯಾಧ್ಯಕ್ಷ ಶ್ರೀ ಭಾಲಚಂದ್ರ ದೇವಾಡಿಗ ಮತ್ತು ಅವರ ಸಂಪೂರ್ಣ ಸಮಿತಿಯನ್ನು ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಅಭಿನಂದಿಸಿದರು. ಶ್ರೀ ನರೇಶ್ ದೇವಾಡಿಗ ಇವರು ಯುವಕರಿಗೆ ಉತ್ತಮ ಸಲಹೆ ನೀಡಿದರು. ಶ್ರೀ ಹೆಚ್. ಮೋಹನ್ ದಾಸ್ ಇವರು ತಮ್ಮ ಕೌಶಲ್ಯ ಪೂರ್ಣ ಮತ್ತು ವಿದ್ವತ್ಪೂರ್ಣ ಭಾಷಾ ತಂತ್ರಗಳ ಬಗ್ಗೆ ಯುವಕರನ್ನು ಪ್ರಶ್ನಿಸಿ ಈ ಕಾರ್ಯಾಗಾರಕ್ಕೆ ಮತ್ತಷ್ಟು ಮೆರಗು ನೀಡಿದರು.

ಶ್ರೀಮತಿ ಸುರೇಖಾ ಹೇಮನಾಥ ದೇವಾಡಿಗ ಇವರು ಬಹುಮಾನ ಮತ್ತು ಮ್ಯಾನೆಜ್ಮೆಂಟ್ ಪುಸ್ತಕಗಳನ್ನು ವಿತರಿಸಿದರು. ಚಹಾ ತಿಂಡಿಗಳನ್ನು ಬಾಲಚಂದ್ರ ದೇವಾಡಿಗ ಪ್ರಾಯೋಜಿಸಿದ್ದರು ಮತ್ತು ಪ್ರೀತಿ ಭೋಜನವನ್ನು ಶ್ರೀ ಈಶ್ವರ ದೇವಾಡಿಗ ರು ಪ್ರಾಯೋಜಿಸಿದ್ದರು. ಕಾರ್ಯಕ್ರಕ್ಕೆ ಬೇಕಾಗುವ ಸ್ಲೈಡ್ ಷೋ ಮತ್ತು ಇತರ ತಾಂತ್ರಿಕ ಬೆಂಬಲವನ್ನು ಶ್ರೀ ನಿತೇಶ್ ದೇವಾಡಿಗ ಇವರು ನೀಡಿದರು ಮತ್ತು ಸಂಘದ ಕಚೇರಿ ವ್ಯವಸ್ಥಾಪಕ ಶ್ರೀ ಶಂಭು ದೇವಾಡಿಗ ಇವರು ಸಭಾಂಗಣದ ವ್ಯವಸ್ಥೆಯನ್ನು ನಿರ್ವಹಿಸಿದರು. ಕೊನೆಯಲ್ಲಿ ಬಾಲಚಂದ್ರ ದೇವಾಡಿಗರು ಧನ್ಯವಾದ ನೀಡಿದರು .