Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು ವಲಯದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.

ದೇವಾಡಿಗ ಸಂಘ ಮುಂಬಯಿ: ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು ವಲಯದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.

ಸಂಘದ ಶತಮಾನೋತ್ಸವದ ಆಚರಣೆಯಲ್ಲಿ ಸರ್ವರ ಉಪಸ್ಥಿತಿ ಅತ್ಯಗತ್ಯ - ನಿರ್ಮಲಾ ಆರ್. ದೇವಾಡಿಗ

ಮುಂಬಯಿ, ಮಾ. 24- ದೇವಾಡಿಗ ಸಂಘ ಮುಂಬಯಿ, ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು ವಲಯವು ಮಾ. 13 ರ ಆದಿತ್ಯವಾರ ಸಂಜೆ ನವಮರ್ಗ ಮಿತ್ರಮಂಡಲ, ಡಾ. ಕಲ್ಯಾಡಿಯಾ ಕ್ಲಿನಿಕ್ ನ ಹಿಂದುಗಡೆ, ತಿಲಕ್ ನಗರ ಚೆಂಬೂರು, ಮುಂಬಯಿ ಇಲ್ಲಿ ವಲಯದ ಮಹಿಳಾ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಜರುಗಿತು.

ಅಂದಿನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಲಯದ ಕಾರ್ಯಾಧ್ಯಕ್ಷ ಯಶವಂತ ಎಮ್. ದೇವಾಡಿಗರು ವಹಿಸಿದರೆ, ಸಮಾರಂಭದ ಮುಖ್ಯ ಅತಿಥಿಯಾಗಿ ದೇವಾಡಿಗ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜಿನಿ ಆರ್. ಮೊಯಿಲಿ ವಹಿಸಿದ್ದರು. ಅತಿಥಿಗಳಾಗಿ ಪುಷ್ಪ ಎಸ್. ರಾವ್ (ಮಾಲಕಿ: ಸೀತಾ ಬುಕ್ಸ್ ಪೀರಿಯೊಡಿಕಲ್ಸ್ ಪ್ರೈವೇಟ್ ಲಿಮಿಟೆಡ್), ಡಾ. ರೇಖಾ ಸಿ ದೇವಾಡಿಗ (ಚೀಫ್ ಮೆಡಿಕಲ್‌ ಆಫೀಸರ್‌ ಮುಂಬಯಿ), ಉಮಾವತಿ ಜೆ. ಗುಜರನ್ (ಖ್ಯಾತ ಸಮಾಜ ಸೇವಕಿ ಬೊರಿವಿಲಿ), ವಲಯದ ಕಾರ್ಯಾಧ್ಯಕ್ಷೆ ನಿರ್ಮಲಾ ಆರ್. ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಶೋಭಾ ಡಿ. ದೇವಾಡಿಗ, ಕಾರ್ಯದರ್ಶಿ ಶಕುಂತಳಾ ಟಿ. ದೇವಾಡಿಗ ಹಾಗೂ ಕೋಶಾಧಿಕಾರಿ ಹೇಮಲತಾ ಎಲ್. ಶೇರಿಗಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಕಿತಾ ಯೋಗೇಶ್ ಗುಜರನ್ ಪ್ರಾರ್ಥನೆಯೊಂದಿಗೆ ವೇದಿಕೆಯ ಅತಿಥಿ ಗಣ್ಯರು ದೀಪ ಪ್ರಜ್ವಲನೆಯನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ಯಶವಂತ ಎಂ. ದೇವಾಡಿಗ ಅತಿಥಿ ಗಣ್ಯರನ್ನು ಸ್ವಾಗತಿಸಿದರೆ, ವಲಯದ ಗೌರವ ಕಾರ್ಯದರ್ಶಿ ಸುಧಾಕರ ಎಲ್ಲೂರು ಅತಿಥಿಗಳನ್ನು ಪರಿಚಯಿಸಿ ಗೌರವಿಸಿದರು. ವಲಯದ ಮಹಿಳಾ ಕಾರ್ಯಾಧ್ಯಕ್ಷೆ ನಿರ್ಮಲಾ ಆರ್‌. ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕೊರೋನಾ ಮಹಾಮಾರಿಯ ಕಷ್ಟದ ಪರಿಸ್ಥಿತಿಯಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗದಿದ್ದರೂ ವಲಯದ ಸರ್ವ ಸದಸ್ಯರ ಸಂಪರ್ಕದಲ್ಲಿದ್ದು ಮಾತೃ ಸಂಘದಿಂದ ಸಹಾಯ ಧನವನ್ನು ವಿತರಿಸುವಲ್ಲಿ ಹಾಗೂ ದಿನನಿತ್ಯದ ವಸ್ತುಗಳನ್ನು ಪೂರೈಸುವಲ್ಲಿ ನಮ್ಮ ಸಮಿತಿಯು ಮಹತ್ತರವಾದ ಪಾತ್ರವನ್ನು ವಹಿಸಿದೆ. ವಲಯದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಸಹಕರಿಸಿದುದನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಸಂಘದ ಶತಮಾನೋತ್ಸವದ ಆಚರಣೆಯಲ್ಲಿ ಸರ್ವರ ಉಪಸ್ಥಿತಿ ಅತ್ಯಗತ್ಯ ಎಂದರು ಹಾಗೂ ಮುಂಬರುವ ಕಾರ್ಯಕ್ರಮಗಳಲ್ಲಿ ಎಲ್ಲಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ದೇವಾಡಿಗ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ರಂಜಿನಿ ಆರ್. ಮೊಯಿಲಿ ಮಾತನಾಡುತ್ತಾ, ಚೆಂಬೂರು ವಲಯವು ಪ್ರತಿಷ್ಟಿತ ವಲಯಗಳಲ್ಲಿ ಒಂದಾಗಿದ್ದು ವಲಯದ ಸದಸ್ಯರಿಗೆ ಶೈಕ್ಷಣಿಕ, ವೈದ್ಯಕೀಯ ಮತ್ತು ಇನ್ನಿತರ ಆರ್ಥಿಕ ಸಹಾಯ ಹಸ್ತದಲ್ಲಿ ಚೆಂಬೂರು ವಲಯವು ಮುಂಚೂಣಿಯಲ್ಲಿದೆ ಎಂದರು. ತುಳು ಒರಿಪಾಲೆ - ತುಳು ಬುಲೆಪಾಲೆ ತುಳು ಭಾಷೆಯನ್ನು ಮನೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾತನಾಡಬೇಕೆಂಬ ಸಲಹೆಯನ್ನು ನೀಡಿದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಸಂಘವನ್ನು ಬಲಪಡಿಸಬಹುದೆಂಬ ಸಲಹೆಯನ್ನು ನೀಡಿದರು.

ಅತಿಥಿ ಡಾ. ರೇಖಾ ಸಿ. ದೇವಾಡಿಗ ಮಾತನಾಡುತ್ತಾ, ಮೇಲು-ಕೀಲು, ನಮ್ಮ ವರು ಹಾಗೂ ಇತರರು ಯಾರೆಂಬುದನ್ನು ಕೊರೊನಾ ನಮಗೆ ಒಳ್ಳೆಯ ಪಾಠ ಕಲಿಸಿದೆ. ಎಲ್ಲರೂ ತುಳು ಭಾಷೆಯನ್ನು ಕಲಿಯಲು ಸಲಹೆ ನೀಡಿದರು. ಅತಿಥಿ ಪುಷ್ಪ ಎಸ್. ರಾವ್ ತಮ್ಮ ಅನಿಸಿಕೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ - ಕೊಡಬೇಕು, ದೇವರ ಧ್ಯಾನ ಹಾಗೂ ಸತ್ಕರ್ಮಗಳನ್ನು ಮಾಡಬೇಕು. ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕೆಂಬ ಸಲಹೆ ನೀಡಿದರು. ಅತಿಥಿ ಸಮಾಜ ಸೇವಕಿ ಉಮಾವತಿ ಜೆ. ಗುಜರನ್ ಮಾತನಾಡುತ್ತಾ ಯಾವುದೇ ಒಂದು ಕೆಲಸವನ್ನು ಮಾಡುವಾಗ ಅದರಲ್ಲಿ ಮನಸ್ಸು, ಶ್ರದ್ಧೆ ಇರಬೇಕು ಆಗ ತಾನೇ ಆ ಕೆಲಸವು ಯಶಸ್ವಿಯಾಗುತ್ತದೆ. ಮನಸ್ಸಿದ್ದರೆ ಮಾರ್ಗವಿದೆ ಎಂಬ ಮಾತನ್ನು ನೆನಪಿಸಿದರು. ನಮ್ಮನ್ನು ಹಗಲಿರುಳು ಕಾಯುವ ನಮ್ಮ ದೇಶದ ಸೈನಿಕರಿಗಾಗಿ ಹಾಗೂ ಅವರ ಪರಿವಾರಕ್ಕೆ ಮೊದಲು ನಾವು ಪ್ರಾರ್ಥನೆ ಮಾಡಬೇಕು. ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡಬೇಕು. ಏಕೆಂದರೆ ಇಂದು ನಾವು ಇತರರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬನ ರೂಪದಲ್ಲಿ ಬರುತ್ತಾನೆ ಎಂಬ ಮಾತನ್ನು ಈ ಸಂದರ್ಭದಲ್ಲಿ ನುಡಿದರು. ತಪ್ಪು ಮಾಡಿದ ವ್ಯಕ್ತಿಯ ತಪ್ಪನ್ನು ತಿಳಿದು ಸುಮ್ಮನಿರಬಾರದು, ಏಕೆಂದರೆ ತಿಳಿದೂ ಸುಮ್ಮನಿದ್ದಲ್ಲಿ ಇನ್ನೊಂದು ತಪ್ಪನ್ನು ನಾವು ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಯಶವಂತ ಯಂ. ದೇವಾಡಿಗ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ, ನಿಮ್ಮೆಲ್ಲರ ಸಹಕಾರದಿಂದ ಎಂತಹ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಉಪಸ್ಥಿತರಿರಬೇಕೆಂದು ವಿನಂತಿಸಿದರು.

ಅಂದು ವಲಯ 1ರ ಸಾಧಕಿಯರಿಗೆ ಗಣ್ಯರ ಸಮ್ಮಖದಲ್ಲಿ ಗೌರವಾರ್ಪಣೆ ಮಾಡಲಾಯಿತು. ಅಂತಾರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್' ಖ್ಯಾತಿಯ ಜಯಂತಿ ಎಂ. ದೇವಾಡಿಗ, ಕ್ರೀಡಾರಂಗದ ಯುವ ಪ್ರತಿಭೆ ಕೃತಿಕಾ ಡಿ. ದೇವಾಡಿಗ, ಸಾಂಸ್ಕೃತಿಕ ರಂಗದ ಯುವ ಪ್ರತಿಭೆ ರಕ್ಷಿತಾ ಎಲ್. ಶೇರಿಗಾರ್, ಮಾರ್ಶಿಯಲ್ ಆರ್ಟ್ಸ್ ಮತ್ತು ಟೈಂಡೆಯ ಗೋಲ್ಡ್ ಮೆಡಲ್ ವಿಜೇತ ದ್ರುವ್ ಕೃಷ್ಣ ದೇವಾಡಿಗ ಅವರಗಳನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಸಂಗೀತ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ನಿತಾ, ಮಹಶ್ರೀ, ಚಾನ್ಸಿ, ಕಿರಣ, ಹಿತಾಕ್ಷಿ ಮತ್ತು ಭೂಮಿ ಮೊದಲಾದವರು ಭಾಗವಹಿಸಿದರು. ಇದರ ಮೇಲ್ವಿಚಾರಕರಾಗಿ ಜಯಂತಿ ದೇವಾಡಿಗ ಮತ್ತು ಕೃತಿಕಾ ದೇವಾಡಿಗರು ಸಹಕರಿಸಿದರು. ದೇವಾಡಿಗ ಸಂಘದ ಜೊತೆ ಕಾರ್ಯದರ್ಶಿಗಳಾದ ಮಾಲತಿ ಜೆ. ಮೊಯಿಲಿ ಮತ್ತು ಜಯ ಎಲ್. ದೇವಾಡಿಗ, ಜೊತೆ ಕೋಶಾಧಿಕಾರಿ ಸುರೇಖಾ ಹೆಚ್. ದೇವಾಡಿಗ, ಹಿರಿಯ ಸದಸ್ಯ ನವಿಮುಂಬಯಿಯ ಪಿ.ವಿ.ಎಸ್ ಮೊಯಿಲಿ, ಹೇಮನಾಥ್ ಎನ್. ದೇವಾಡಿಗ, ಸುರೇಶ್ ಎಸ್. ರಾವ್, ಡಾ. ವೀಣಾ ಎನ್. ಉಳ್ಳಾಲ್, ನವೀನ್ ಉಳ್ಳಾಲ್, ಬೊರಿವಿಲಿ ವಲಯದ ಕಾರ್ಯಾಧ್ಯಕ್ಷ ಭಾಸ್ಕರ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಕುಸುಮಾ ದೇವಾಡಿಗ, ಲಕ್ಷ್ಮೀ ಜಿ. ದೇವಾಡಿಗ, ವನಿತಾ ದೇವಾಡಿಗ, ನವಿ ಮುಂಬಯಿಯ ವಲಯದ ಕಾರ್ಯಾಧ್ಯಕ್ಷೆ ಲತಾ ಆನಂದ್ ಶೇರಿಗಾರ್‌ ಅವರಿಗೆ ವೇದಿಕೆ ಗೌರವವನ್ನು ನೀಡಲಾಯಿತು.

ಗಣೇಶ್ ಶೇರಿಗಾರ್, ಅಶೋಕ್ ಟಿ. ದೇವಾಡಿಗ ಮತ್ತು ಸದಾಶಿವ ಮೊಯಿಲಿಯವರಿಗೆ ವೇದಿಕೆಯಲ್ಲಿ ಗೌರವವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಯಶಸ್ವಿಗೆ ತಿಮ್ಮ ಎಸ್. ದೇವಾಡಿಗ, ದಿನಕರ ಡಿ. ದೇವಾಡಿಗ, ಸತೀಶ್ ದೇವಾಡಿಗ, ದಯಾನಂದ ಎಂ. ದೇವಾಡಿಗ, ರಾಮಣ್ಣ ಬಿ. ದೇವಾಡಿಗ, ನಾರಾಯಣ ದೇವಾಡಿಗ, ವೆಂಕಟೇಶ ದೇವಾಡಿಗ, ಶೇಖರ ದೇವಾಡಿಗ, ಯೋಗೇಶ್ ಗುಜರನ್, ಯಶವಂತ ಎಂ. ದೇವಾಡಿಗ, ಚಂದ್ರಾವತಿ ಆರ್. ದೇವಾಡಿಗ, ಹೇಮಲತಾ ಎಲ್, ಶೇರಿಗಾರ್‌, ಶಕುಂತಳಾ ಟಿ. ದೇವಾಡಿಗ, ಲತಾ ಎನ್. ದೇವಾಡಿಗ, ತನುಜಾ ವೈ, ದೇವಾಡಿಗ, ದಿವ್ಯಾ ಎಲ್. ದೇವಾಡಿಗ, ಭಾರತಿ ದೇವಾಡಿಗ, ಜಯಶ್ರೀ ದೇವಾಡಿಗ, ಶೋಭಾ ಡಿ. ದೇವಾಡಿಗ, ಕಾಂತಿ ಎಸ್. ದೇವಾಡಿಗ ಯಶೋದಾ ಎಸ್. ದೇವಾಡಿಗ, ಸುಮತಿ ಡಿ. ದೇವಾಡಿಗ, ಜಯಂತಿ ಎಂ ದೇವಾಡಿಗ, ಸೌಮ್ಯ ಎಸ್. ದೇವಾಡಿಗ, ಕೃತಿಕಾ ಡಿ. ದೇವಾಡಿಗ ಮೊದಲಾದವರು ಸಹಕರಿಸಿದರು. ವಲಯದ ಗೌರವ ಕಾರ್ಯದರ್ಶಿ ಸುಧಾಕರ ಎಲ್ಲೂರವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗೈದರು.