Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು ವಲಯದವರಿಂದ ಭಜನಾ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬಯಿ : ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು ವಲಯದವರಿಂದ ಭಜನಾ ಕಾರ್ಯಕ್ರಮ

ಮುಂಬಯಿ, ಸೆ. 21- ದೇವಾಡಿಗ ಸಂಘ ಇದರ ಪ್ರಾದೇಶಿಕ ಸಮನ್ವಯ ಸಮಿತಿ ಚೆಂಬೂರು ವಲಯವು ಸೆ. 14 ರ ಮಂಗಳವಾರ ಸಂಜೆ ನವದುರ್ಗ ಮಿತ್ರ ಮಂಡಲ, ತಿಲಕ್ ನಗರ ಚೆಂಬೂರು ಇಲ್ಲಿ ತನ್ನ ಈ ವರ್ಷದ ಶ್ರಾವಣ ಮಾಸದ ಚೊಚ್ಚಲ ಕಾರ್ಯಕ್ರಮವಾಗಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಿತು.

ಭಕ್ತಿಮಯ ಭಜನಾ ಕಾರ್ಯಕ್ರಮದಲ್ಲಿ ಸುಮಾರು 45 ಮಂದಿ ಭಾಗವಹಿಸಿದ್ದು, ಪ್ರಸಾದ ವಿತರಣೆಯ ನಂತರ ಸಭಾ ಕಾರ್ಯಕ್ರಮ ನಡೆಯಿತು.ತ ಎಲ್ ದೇವಾಡಿಗರ ಮದುವೆಯ ವಾರ್ಷಿಕೋತ್ಸವದ ದಿನಾಚರಣೆಯನ್ನು ಆಚರಿಸಲಾಯಿತು.

ಅಧ್ಯಕ್ಷ ಸ್ಥಾನವನ್ನು ವಲಯದ ಕಾರ್ಯಾಧ್ಯಕ್ಷ ಯಶವಂತ ಎಂ. ದೇವಾಡಿಗ ವಹಿಸಿದ್ದು, ವೇದಿಕೆಯಲ್ಲಿ ಮಹಿಳಾ ಕಾರ್ಯಾಧ್ಯಕ್ಷೆ ನಿರ್ಮಲಾ ಆರ್‌. ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಶೋಭಾ ಡಿ. ದೇವಾಡಿಗ, ಕಾರ್ಯದರ್ಶಿ ಶಕುಂತಳಾ ಟಿ. ದೇವಾಡಿಗ ಹಾಗೂ ಕೋಶಾಧಿಕಾರಿ ಹೇಮಲತಾ ಎಲ್. ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು. ವಲಯದ ಕಾರ್ಯದರ್ಶಿ ಸುಧಾಕರ್‌ ಎಲ್ಲೂರು ಮಾತನಾಡುತ್ತಾ, ನಮ್ಮ ಸಂಘವು 2025 ರಲ್ಲಿ ಶತಮಾನೋತ್ಸವವನ್ನು ಆಚರಿಸುವ ಬಗ್ಗೆ ತಿಳಿಸಿದರು. ಶತಮಾನತೋವವು ಅರ್ಥಪೂರ್ಣವಾಗಿ ನಡೆಯಬೇಕಾದರೆ ನಮ್ಮ ಸಮಾಜದ ಉಪಸ್ಥಿತಿ ಹಾಗೂ ಸಹಕಾರ ಅಗತ್ಯವಾಗಿದೆ ಹಾಗೂ ವಲಯದ ಕೈಪಿಡಿಯನ್ನು ಮಾಡುವ ಯೋಜನೆಯ ಬಗ್ಗೆ ತಿಳಿಸಿದರು. ಇದರಿಂದಾಗಿ ಎಲ್ಲಾ ಸದಸ್ಯರು ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ ಎಂದರು.

ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಆರ್ಥಿಕ ಸಹಾಯ, ವೈದ್ಯಕೀಯ ಸಹಾಯ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯವನ್ನು ನೀಡುವ ಬಗ್ಗೆ ಮಾತನಾಡಿದರು.

ಮಾಜಿ ಕಾರ್ಯಾಧ್ಯಕ್ಷ ರಾಮಣ್ಣ ಬಿ. ದೇವಾಡಿಗ ಮಾತನಾಡುತ್ತಾ, ನಮ್ಮಲ್ಲಿ ಶುದ್ಧವಾದ ಭಾವನೆ, ನಿರ್ಮಲವಾದ ಮನಸ್ಸು ಹಾಗೂ ಬೇರೆಯವರ ಸುಖ - ದುಃಖಗಳಿಗೆ ಸ್ಪಂದಿಸಬೇಕು. ನಮ್ಮ ಮಾತೃ ಸಂಘವು 2025 ರಲ್ಲಿ ಶತಮಾನೋತ್ಸವ ವರುಷವನ್ನು ಆಚರಿಸಲು ನಾವೆಲ್ಲರೂ ಒಂದಾಗಿ ಸಂಪೂರ್ಣ ಸಹಾಯ ಮತ್ತು ಸಹಕಾರ ನೀಡಬೇಕು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು ಎಂದರು. ಮಹಿಳಾ ಕಾರ್ಯಾಧ್ಯಕ್ಷೆ ನಿರ್ಮಲಾ ಆರ್. ದೇವಾಡಿಗ ಮಾತನಾಡುತ್ತಾ, ಒಳ್ಳೆಯ ಕೆಲಸವನ್ನು ಮಾಡುವಾಗ ದೇವರ ಪೂಜೆ ಮಾಡುವುದು ನಮ್ಮವರ ವಾಡಿಕೆ. ಇಂದಿನ ಭಜನಾ ಕಾರ್ಯಕ್ರಮದ ಮುಖೇನ ಮುಂದಿನ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿ ನಡೆಯಲಿ ಹಾಗೂ ಉಪಸ್ಥಿತ ಸದಸ್ಯೆಯರಿಗೆ ಧನ್ಯವಾದ ನೀಡಿದರು. ಉಪ ಕಾರ್ಯಾಧ್ಯಕ್ಷ ಶೋಭಾ ಡಿ. ದೇವಾಡಿಗ, ಕಾರ್ಯದರ್ಶಿ ಶಕುಂತಳಾ ಟಿ. ದೇವಾಡಿಗ ಹಾಗೂ ಕೋಶಾಧಿಕಾರಿ ಹೇಮಲತಾ ಎಲ್. ಶೇರಿಗಾರ್ ವೇದಿಕೆಯಲ್ಲಿ ಸಂದರ್ಭೋಚಿತವಾಗಿ ಮಾತನಾಡಿದರು.

ದೇವಾಡಿಗ ಮಾತ ಸಂಘದ ಜೊತೆ ಕಾರ್ಯದರ್ಶಿ ಮಾಲತಿ ಜೆ. ಮೊಲಿ ಮಾತನಾಡುತ್ತಾ, ಚೆಂಬೂರು ವಲಯದ ಯಾವುದೇ ಕಾರ್ಯಕ್ರಮಗಳು ಉಳಿದ ವಲಯಗಳಿಗೆ ಒಂದು ಮಾದರಿ ಆಗಿದ್ದು, ಇನ್ನು ಮುಂದೆಯೂ ಅದರ ಹೆಸರನ್ನು ಉಳಿಸುವಲ್ಲಿ ಹಾಗೂ ಹೆಚ್ಚಿನ ಜನಪಯೋಗಿ ಕೆಲಸಗಳನ್ನು ಮಾಡಲು ಸಲಹೆ ನೀಡಿದರು. ದೇವಾಡಿಗ ಸಂಘದ ಮಹಿಳಾ ಉಪ ಕಾರ್ಯಾಧ್ಯಕ್ಷೆ ಜಯಂತಿ ಎಂ. ದೇವಾಡಿಗ ತಮ್ಮ ನುಡಿಯಲ್ಲಿ ನಾವು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಇರಬೇಕಾದರೆ ಯೋಗ ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ವಲಯದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ ಸೂಚಿಸಿದರು.

ದೇವಾಡಿಗ ಸಂಘದ ಕ್ರೀಡಾ ಕಾರ್ಯಾಧ್ಯಕ್ಷ ರಘು ಎ. ಮೈಲಿ ಮಾತನಾಡುತ್ತಾ ವಲಯಗಳು ಮಾಡುವಂತಹ ಕಾರ್ಯಕ್ರಮಗಳಳಿಗೆ ಸಂಘದ ಮುಖೇನ ಸಿಗುವ ಖರ್ಚಿನ ಬಗ್ಗೆ ವಿಸ್ತಾರವಾಗಿ ತಿಳಿಸಿದರಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಲು ವಿನಂತಿಸಿದರು.

ಘಾಟ್ಕೋಪರ್ ರಮಾಬಾಯಿ ಕಾಲನಿ ನಿವಾಸಿ ಪ್ರೇಮಾ ಉದಯ ದೇವಾಡಿಗ ಮಾತನಾಡುತ್ತಾ, ಮಗಳ ವಿದ್ಯಾಭ್ಯಾಸದ ಖರ್ಚನ್ನು ಭರಿಸಿದ ಎಲ್ಲಾ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು.

ತಿಮ್ಮ ಎಸ್. ದೇವಾಡಿಗ ಮತ್ತು ಯೋಗೇಶ್ ಗುಜರನ್ ಸಂದರ್ಭೋಚಿತವಾಗಿ ಮಾತನಾಡಿದರು. ವಲಯದ ಮಾಜಿ ಕಾರ್ಯದರ್ಶಿ ದಯಾನಂದ ಎಂ. ದೇವಾಡಿಗ ಸಭಿಕರ ಉಪಸ್ಥಿತಿಯನ್ನು ಹೊಗಳಿದರು. ಕಾರ್ಯದರ್ಶಿ ಸುಧಾಕರ್‌ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರೆ, ದಯಾನಂದ ಎಂ. ದೇವಾಡಿಗ ಧನ್ಯವಾದವಿತ್ತರು.