Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಇದರ ಚೆಂಬೂರು ವಲಯದ ಪ್ರಾದೇಶಿಕ ಸಮಿತಿಯ ಆಟಿದ ಒಂದು ದಿನ ಆಚರಣೆ.

ದೇವಾಡಿಗ ಸಂಘ ಮುಂಬಯಿ ಇದರ ಚೆಂಬೂರು ವಲಯದ ಪ್ರಾದೇಶಿಕ ಸಮಿತಿಯ ಆಟಿದ ಒಂದು ದಿನ ಆಚರಣೆ.

ಮಾತೃ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ರಮೇಶ್ ಮೊಯಿಲಿ ತಾನೊಬ್ಬಳು ಕೃಷಿಕನ ಮಗಳು, ಆಟಿ ತಿಂಗಳು ರೈತನಿಗೆ ವಿಶ್ರಾಂತಿಯ ದಿನವಾದರೂ ಭಾರೀ ಮಳೆ -ನೆರೆಯ ಕಾರಣ ತನ್ನ ಬೆಳೆಯು ನೀರಿನಲ್ಲಿ ಮುಳುಗಿ ಹಾಳಾಗುತ್ತದೆ ಎಂಬ ಭಯದಿಂದ ರಾತ್ರಿ ಹಗಲು ನಿದ್ದೆ ಬಿಟ್ಟು ಗದ್ದೆ ಬದಿಗೆ ಹೋಗಿ ತನ್ನ ಬೆಳೆಯ ರಕ್ಷಣೆಯಲ್ಲಿ ಇರುತ್ತಾನೆ ಎಂದು ತನ್ನ ಕಷ್ಟದ ದಿನವನ್ನು ನೆನಪಿಸಿದರು.

ಚೆಂಬೂರು ವಲಯ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ನಿರ್ಮಲಾ ರಾಮಣ್ಣ ದೇವಾಡಿಗರು ಮಾತನಾಡುತ್ತಾ, ಆಟಿಯ ಇಂದಿನ ಜೀವನ ಶೈಲಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು . ಒಳ್ಳೆಯ ಕರ್ಮವನ್ನು ಮಾಡು, ಫಲದ ಅಪೇಕ್ಷೆ ಮಾಡಬೇಡ ಎಂಬ ಭಗವದ್ಗೀತೆಯ ಶ್ರೀಕೃಷ್ಣ ಪರಮಾತ್ಮನ ಸಂದೇಶವನ್ನು ಸಣ್ಣ ಕಥೆಯೊಂದಿಗೆ ವಿವರಿಸಿದರು. ಆಟದ ಈ ಕಾರ್ಯಕ್ರಮಕ್ಕೆ ಬಂದು ಸಹಕರಿಸಿದ ಎಲ್ಲಾ ಸದಸ್ಯರಿಗೆ ಮನದಾಳದ ಧನ್ಯವಾದಗಳು ಆರ್ಪಿಸಿದರು.

ದೇವಾಡಿಗ ಸಂಘದ ಜೊತ ಕಾರ್ಯದರ್ಶಿ ಜಯ ಎಲ್. ದೇವಾಡಿಗರು ಆಟಿಯ ಬಗ್ಗೆ ಮಾತನಾಡಿದರು. ಮುಂಬರುವ ಸಂಘದ ಶತಮಾನೋತ್ಸವಕ್ಕೆ ತಾವೆಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕೆಂದರು. ಚೆಂಬೂರು ಸಮಿತಿಯು ಎಲ್ಲಾ ವಲಯದ ಸಮಿತಿಗಳಿಗೆ ಮಾದರಿಯಯಾಗಿದೆ ಎಂದರು.

ದೇವಾಡಿಗ ಸಂಘ ಇದರ ಜೊತೆ ಕಾರ್ಯದರ್ಶಿ ಮಾಲತಿ ಜೆ. ಮೊಯಿಲಿ ಅವರು ಆಟಿಯ ಬಗ್ಗೆ ಮಾತನಾಡುತ್ತಾ, ಅಂದಿನ ಹಾಗೂ ಇಂದಿನ ಜೀವನ ಶೈಲಿಯೂ ಬದಲಾದರೂ ತನ್ನ ಪರಂಪರೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಅಭಿನಂದನೆಯ. ದೇವಾಡಿಗ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿದ್ಯಾರ್ಥಿ ವೇತನ ನೀಡುತ್ತದೆ. ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಡಾ. ರೇಖಾ ಸಿ. ದೇವಾಡಿಗರು ಆಟಿಯ ಬಗ್ಗೆ ಮಾತನಾಡಿದರು ಹಾಗೂ ಆರೋಗ್ಯದ ಬಗ್ಗೆ ಕೆಲವೊಂದು ಮಾಹಿತಿಯನ್ನು ನೀಡಿದರು. ಸುರೇಖಾ ಹೇಮನಾಥ್ ದೇವಾಡಿಗರು ಕೆಲವೊಂದು ಒಗಟುಗಳನ್ನು ಹೇಳುತ್ತಾ ಸಭಿಕರನ್ನು ಮನರಂಜಿಸಿದರು.

ಅಪತ್ಕಾಲದಲ್ಲಿ ನೊಂದವರಿಗೆ ಸಹಾಯ ಮಾಡೋದು, ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುವುದು, ಕಷ್ಟದ ಸಮಯದಲ್ಲಿ ಜನರ ಬಳಿಗೆ ಹೋಗಿ ವಿಚಾರಿಸಿ, ನೊಂದವರಿಗೆ ಕಷ್ಟ ಬಗೆ ಹರಿಸಲು ಸಹಾಯ ನೀಡುವುದು, ಇದು ನಮ್ಮ ವಲಯದ ಮೂಲ ಉದ್ದೇಶ, ನಾವೆಲ್ಲರೂ ಉತ್ತಮ ಬಾಂಧವ್ಯದಿಂದ ಇದ್ದು ಸಂಘದ ಪ್ರಗತಿಗೆ ಪಾಲುದಾರರು ಆಗೋಣ ಎಂದು ಚೆಂಬೂರು ವಲಯದ ಮಾಜಿ ಕಾರ್ಯಾಧ್ಯಕ್ಷ ರಾಮಣ್ಣ ಬಿ. ದೇವಾಡಿಗರು ನುಡಿದರು.

ಈ ಸಂದರ್ಭದಲ್ಲಿ 10ನೇ ಹಾಗೂ 12ನೇ ತರಗತಿಯ ಕುಮಾರಿ ತ್ರಿಷಾ ಉದಯ ದೇವಾಡಿಗ, ಕುಮಾರಿ ಸಮೀಕ್ಷಾ ರವಿ ದೇವಾಡಿಗ, ಕುಮಾರಿ ನಮಿತಾ ನರಸಿಂಹ ದೇವಾಡಿಗ, ಕುಮಾರಿ ಮಹಾಶ್ರೀ ಯೋಗೇಶ್ ಗುಜರನ್, ಕುಮಾರಿ ರಕ್ಷಿತಾ ಲಕ್ಷ್ಮಣ್ ಶೇರಿಗಾರ್, ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ನಿತ್ಯಾನಂದ ದೇವಾಡಿಗ, ಕಾರ್ಯದರ್ಶಿ ಕುಮಾರಿ ಕೃತಿಕಾ ದಿನಕರ್ ದೇವಾಡಿಗ, ಜೊತೆ ಕಾರ್ಯದರ್ಶಿ ಕುಮಾರಿ ರಕ್ಷಿತಾ ಲಕ್ಷ್ಮಣ್ ದೇವಾಡಿಗ, ಶೇಖರ್ ದೇವಾಡಿಗ (ವೈಸ್ ಛೇರ್ಮನ್), ರಘು ಎ ದೇವಾಡಿಗ ಸ್ಪೋರ್ಟ್ಸ್ (ಕಾರ್ಯಾಧ್ಯಕ್ಷ, ದೇವಾಡಿಗ ಸಂಘ ಮುಂಬಯಿ), ಅಕ್ಷಯ್‌ ಕ್ರೆಡಿಟ್ ಸೊಸೈಟಿ ಇದರ ಸಲಹೆಗಾರ ಬಿ ಪಿ ಸುರೇಶ್, ಚೆಂಬೂರು ಕರ್ನಾಟಕ ಸಂಘ ಇದರ ಸಮಿತಿಯ ಸದಸ್ಯ ಯೋಗೀಶ್ ಗುಜರನ್, ನಮ್ಮ ವಲಯದ ದಿನಕರ್ ಡಿ ದೇವಾಡಿಗ, ಲೋಕೇಶ್ ದೇವಾಡಿಗ ( ಗೌರವ ಜೊತೆ ಕಾರ್ಯದರ್ಶಿ ), ದಿನೇಶ್ ಎನ್ ಸಾಲ್ಯಾನ್ (ಗೌರವ ಕೋಶಾಧಿಕಾರಿ ), ತಿಮ್ಮ ದೇವಾಡಿಗ ( ಜೊತೆ ಗೌರವ ಕೋಶಾಧಿಕಾರಿ), ವೆಂಕಟೇಶ್ ದೇವಾಡಿಗ, ಹೇಮಂತ್ ಎನ್ ದೇವಾಡಿಗ, ವಲಯದ ಮಹಿಳಾ ವಿಭಾಗದ ಶೋಭಾ ದಿನಕರ್ ದೇವಾಡಿಗ ( ಉಪಕಾರ್ಯಾಧ್ಯಕ್ಷೆ ), ಶಕುಂತಲಾ ತಿಮ್ಮ ದೇವಾಡಿಗ( ಕಾರ್ಯದರ್ಶಿ ), ಹೇಮಾ ಲಕ್ಷ್ಮಣ್ ಶೇರಿಗಾರ್ ( ಗೌರವ ಕೋಶಾಧಿಕಾರಿ ), ಸೌಮ್ಯ ಸತೀಶ್ ದೇವಾಡಿಗ(ಗೌರವ ಜೊತೆಕೋಶಾಧಿಕಾರಿ), ಗೀತಾ ವೈ ಗುಜರನ್, ವಿಶಾಲಾಕ್ಷಿ ದೇವಾಡಿಗ, ಲತಾ ದೇವಾಡಿಗ, ಕಾಂತಿ ದೇವಾಡಿಗ, ಶ್ರೀ ಸತೀಶ್ ದೇವಾಡಿಗ, ಅನಿತಾ ಶೇರಿಗಾರ್, ಮಾನಸ ದೇವಾಡಿಗ, ಸುಮಾ ದಯಾನಂದ್‌ ದೇವಾಡಿಗ, ರೇಖಾ ಶೇಖರ್ ದೇವಾಡಿಗ, ಮಂಜು ಸಂತೋಷ್ ಬರ್ಕೆ, ಲಲಿತಾ ದೇವಾಡಿಗ, ಚಂದ್ರಾವತಿ ದೇವಾಡಿಗ, ಶ್ರದ್ಧಾ ವಿಶಾಲ್ ಮೊಯಿಲಿ, ಚಂದ್ರಶೇಖರ್ ದೇವಾಡಿಗ, ರವಿ ದೇವಾಡಿಗ, ಸುಧಾಕರ್ ದೇವಾಡಿಗ, ನಮ್ಮ ವಲಯದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ರಘು ಮೊಯಿಲಿ ಹಾಗೂ ಮಾಜಿ ಕಾರ್ಯದರ್ಶಿ ದಯಾನಂದ್ ಎಂ ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ತಿಮ್ಮ ದೇವಾಡಿಗರು ಕಾರ್ಯಕ್ರಮಕ್ಕೆ ಸಹಕರಿಸಿದರು, ಶಕುಂತಲಾ ಟಿ ದೇವಾಡಿಗ ಧನ್ಯವಾದವಿತ್ತರು. ಶ್ರೀಮತಿ ವಿಶಾಲಾಕ್ಷಿ ದೇವಾಡಿಗ ಮತ್ತು ಸೌಮ್ಯ ದೇವಾಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.