Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಪ್ರಾದೇಶಿಕ ಸಮಿತಿಗಳೊಂದಿಗೆ ಸಮಾಲೋಚನೆ:

ದೇವಾಡಿಗ ಸಂಘ ಮುಂಬಯಿ: ಪ್ರಾದೇಶಿಕ ಸಮಿತಿಗಳೊಂದಿಗೆ ಸಮಾಲೋಚನೆ:

ನಿಯೋಜಿತ ಯೋಜನೆಗಳೊಂದಿಗೆ ಮುಂದುವರಿದರೆ ಯಶಸ್ಸು ಪ್ರವೀಣ್ ಎನ್. ದೇವಾಡಿಗ

   ಮುಂಬಯಿ, ಅ 20: ಸಂಘದ ಶತಮಾನೋತ್ಸವ ಆಚರಣೆಗೆ ಕೆಲವು ಪ್ರಾದೇಶಿಕ ಸಮಿತಿಗಳಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಎಲ್ಲಾ ಪ್ರಾದೇಶಿಕ ಸಮಿತಿಗಳು ನಿರ್ದಿಷ್ಟವಾದ ದ್ರಢ ಸಂಕಲ್ಪದಿಂದ ಯೋಜನಾ ಬದ್ಧವಾಗಿ ಮುಂದೆ ಸಾಗಿದರೆ ಶತಮಾನೋತ್ಸವ ಆಚರಣೆಗೆ ಬೇಕಾಗುವ ಆರ್ಥಿಕ ಬಲವನ್ನು ವೃದ್ಧಿಪಡಿಸುವದು ಸುಲಭ ಸಾಧ್ಯ. ಪ್ರಾದೇಶಿಕ ಸಮಿತಿಗಳು ಸಂಘದ ವ್ಯವಸ್ಥಾಪಕ ಮಂಡಳಿಯ ಜೊತೆಯಲ್ಲಿ ದುಡಿದದ್ದಾದರೆ ಯಶಸ್ಸು ಖಂಡಿತ ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಇಲ್ಲಿ ಹೇಳಿದರು

ಮುಂಬಯಿಯ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿ ಈಗ ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಬರುವ 2025 ರ ಎಪ್ರಿಲ್ ತಿಂಗಳ ಸುಮಾರಿಗೆ ಬಹಳ ವಿಜೃಂಭಣೆಯಶತಮಾನೋತ್ಸವ ಆಚರಣೆಗಾಗಿ ಭರದ ಪೂರ್ವತಯಾರಿ ನಡೆಸುತ್ತಿದೆ. ಈ ಬಗ್ಗೆ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳೊಂದಿಗೆ ಸಮಾಲೋಚಿಸಲು ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ ಇವರ ನೇತೃತ್ವದಲ್ಲಿ ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಇಲ್ಲಿ ಕರೆದ ಸಭೆಯಲ್ಲಿ ಶ್ರೀ ಪ್ರವೀಣ್ ದೇವಾಡಿಗರು ಈ ಮೇಲಿನ ಮಾತುಗಳನ್ನು ಹೇಳಿದರು.

ಅವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಪ್ರಾದೇಶಿಕ ಸಮಿತಿಗಳು ದಾನಿಗಳ ಯಾದಿಗಳನ್ನು ತಯಾರಿಸಿ ಅದನ್ನು ಸಂಘದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಹಂಚಿಕೊಂಡಲ್ಲಿ ಹೆಚ್ಚಿನ ಮೊತ್ತದ ನಿಧಿ ಸಂಗ್ರಹದ ಸಾಧ್ಯತೆ ಇದೆ. ಸಂಘದ ಯಾವುದೇ ವ್ಯಕ್ತಿ ಇತರ ಸಮಿತಿಗಳ ಹದ್ದಿನಲ್ಲಿ ಬಂದು ಧನ ಸಂಗ್ರಹ ಮಾಡಿದರೆ ಅವರಿಗೆ ಧನ್ಯವಾದ ನೀಡಿ. ಏಕೆಂದರೆ, ಹೀಗೆ ಸಂಗ್ರಹಿಸಿದ ಮೊತ್ತದ ಲಾಭ ಆಯಾ ಪ್ರಾದೇಶಿಕ ಸಮಿತಿಗಳ ಖಾತೆಗೆ ಸೇರುತ್ತದೆ. ಇದರಿಂದ ಪ್ರಾದೇಶಿಕ ಸಮಿತಿಗಳಿಗೆ ನಿಗದಿಪಡಿಸಿದ ಧನಸಂಗ್ರಹದ ಗುರಿ ತಲುಪಲು ಸುಲಭವಾಗುವುದು. ಆದರೆ ಧನ ಸಂಗ್ರಹಕ್ಕೆ ಹೋಗುವವರು ಮುಂಚಿತವಾಗಿ ಪ್ರಾದೇಶಿಕ ಸಮಿತಿಗಳಿಗೆ ಸೂಚನೆ ಕೊಡುವ ಅಗತ್ಯವಿದೆ. ಹಾಗೆ ಮಾಡಿದ್ದಲ್ಲಿ ನಮ್ಮ ನೂರನೇ ವರ್ಷ ಶೇಕಡಾ ನೂರರಷ್ಟು ಯಶಸ್ಸನ್ನು ಪಡೆಯುವಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಶ್ರೀ ಪ್ರವೀಣ್ ದೇವಾಡಿಗರು ಹೇಳಿದರು.

ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಇವರು ಮಾತನಾಡಿ, ಸಂಘದ ಅಧ್ಯಕ್ಷರ ಆಶ್ವಾಸನೆಗೆ ಧನ್ಯವಾದ ನೀಡಿ ಶುಭ ಕೋರಿದರು. ಸಂಘದ ಅಧ್ಯಕ್ಷರಲ್ಲಿ ಪ್ರಭುದ್ಧವಾದ ಯೋಜನೆಗಳಿದ್ದು, ಸಂಘದ ಅಪೇಕ್ಷೆ ನೆರವೇರುವುದಲ್ಲಿ ಯಾವುದೇ ಸಂದೇಶವಿಲ್ಲ. ಜೊತೆಯಲ್ಲಿ ಸಂಘದ ಮಹಿಳಾ ವಿಭಾಗ ಮತ್ತು ಯುವ ವಿಭಾಗದವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಅದು ಅಭಿನಂದನೀಯ. ದೇವರ ದಯೆಯಿಂದ ನಮಗೆ ಈ ಒಂದು ಶತಮಾನೋತ್ಸವದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದು ಸಂಘದ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯಲಿದೆ. ಹೀಗೆ ಎಲ್ಲರೂ ಒಗ್ಗಟ್ಟಾಗಿ ಸಂಘದ ಅದ್ಯಕ್ಶರ ನೇತೃತ್ವದಲ್ಲಿ ದುಡಿದರೆ ನಾವು ನಮ್ಮ ಯೋಜನೆಯಲ್ಲಿ ಯಶಸ್ವಿಯನ್ನು ಪಡೆಯುವದಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಶ್ರೀ ಧರ್ಮಪಾಲ ದೇವಾಡಿಗರು ಹೇಳಿದರು. “ಶತಮಾನೋತ್ಸವಕ್ಕೆ ಇನ್ನು ಹೆಚ್ಚು ಸಮಯ ಇಲ್ಲ. ಇನ್ನು ಕಾಲಹರಣ ಮಾಡುವ ಹಾಗಿಲ್ಲ. ಸದಸ್ಯರು ಆಸಕ್ತಿಯಿಂದ ಮುಂದೆ ಬರಬೇಕಾಗಿದೆ. ಸದಸ್ಯರ ನ್ನು ವೈಯುಕ್ತವಾಗಿ ಸಂಪರ್ಕಿಸಿ ಮುಂದೆ ಹೋಗಬೇಕು. ಪ್ರತೀ ಸದಸ್ಯರು ಈ ಉತ್ಸವದಲ್ಲಿ ಭಾಗವಹಿಸುವುದು ಅನಿವಾರ್ಯ. ಶತಮಾನೋತ್ಸವ ಸದಸ್ಯರದ್ದು, ಸದಸ್ಯರೇ ಅದನ್ನು ಯಶಸ್ವಿ ಮಾಡಬೇಕು. ಅಲ್ಲದೆ ನಾನು ನನ್ನ ಕಾರ್ಯಕ್ರಮವನ್ನು ಬದಿಗಿರಿಸಿ ಯಾವಾಗಲೂ ಬಂದು ಸಹಕರಿಸಲು ತಯಾರಿದ್ದೇನೆ” ಎಂದು ಅವರು ಹೇಳಿದರು.

ಶತಮಾನೋತ್ಸವ ಸಮಿತಿಯ ಸಂಯೋಜಕರಾದ ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ ದಾಸ್ ಇವರು ಮಾತನಾಡಿ ಶತಮಾನೋತ್ಸವ ಆಚರಣೆಯ ದಿನಗಳು ಸಮೀಪಿಸಿದರೂ ನಾವು ಅಪೇಕ್ಷಿಸಿದಂತಕ್ಕಿಂತ ಬಹಳ ಹಿಂದೆ ಬಿದ್ದಿದ್ದೇವೆ ಎಂದು ಹೇಳುತ್ತಾ, ಸಂಘದ ಸದಸ್ಯರ ನಿರುತ್ಸಾಹಕ್ಕೆ ಬೇಸರ ವ್ಯಕ್ತ ಪಡಿಸಿದರು. ನಾವು ಸಂಘದ 60ನೇ ವರ್ಷ, 75ನೇ ವರ್ಷ 90ನೇ ವರ್ಷದ ಆಚರಣೆಯನ್ನು ನೋಡಿದ್ದೇವೆ. ಈ ಸಮಯದಲ್ಲಿ ಸಂಘಕ್ಕೆ ದುಡಿದ ದೊಡ್ಡ ದೊಡ್ಡ ಸನ್ಮಾನ್ಯ ವ್ಯಕ್ತಿಗಳು ನಮ್ಮನ್ನು ಅಗಲಿದ್ದಾರೆ. ಅವರಲ್ಲಿ ಸಂಘಕ್ಕೆ ದುಡಿಯುವ ಹುಮ್ಮಸ್ಸು ಇತ್ತು. ಆದರೆ ನಮ್ಮ ಈ ಶತಮಾನೋತ್ಸವ ಸಮಿತಿ ನಿರ್ಮಿಸಿ ಮೂರು ತಿಂಗಳುಗಳಾದರೂ ಯಾವುದೇ ಬೆಳವಣಿಗೆ ಕಾಣುವುದಿಲ್ಲ. ಸಂಘದ ಸದಸ್ಯರು ಪದಾಧಿಕಾರುಗಳು ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದರೂ ಪ್ರಸ್ತುತ ಎಲ್ಲರೂ ಅದನ್ನು ಬದಿಗಿರಿಸಿ ಸಂಘಕ್ಕಾಗಿ ಒಮ್ಮತದಿಂದ ದುಡಿಯಬೇಕಾಗಿ ವಿನಂತಿಸಿಕೊಂಡರು. ಎಲ್ಲರ ಸಹಕಾರ ಇಲ್ಲದೆ ಸಂಘದ ಶತಮಾನೋತ್ಸವ ಆಚರಣೆ ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ದುಡಿಯೋಣ ಎಂದು ಹೇಳುತ್ತಾ ಪ್ತತಿಯೊಬ್ಬ ಸದಸ್ಯರ ಹಾಗೂ ಸಮಿತಿಗಳ ಜವಾಬ್ದಾರಿಗಳನ್ನು ತಿಳಿಸಿ ಹೇಳಿದರು. ನಮ್ಮ ಈ ಶತಮಾನೋತ್ಸವ ಆಚರಣೆಯ ಬಗ್ಗೆ ಜನರಲ್ಲಿ ಬಹಳ ಕುತೂಹಲ ಇರುವಾಗ, ನಮ್ಮನ್ನು ಗೇಲಿ ಮಾಡುವಂತಹ ಪರಿಸ್ಥಿತಿ ನಮಗೆ ಬರಬಾರದು. ಎಂದರು. ಕಾರ್ಯಕ್ರಮವನ್ನು ಚೆನ್ನಾಗಿ ಆಚರಿಸುವುದು ನಮ್ಮ ಅನಿವಾರ್ಯ. ಅದಕ್ಕಾಗಿ ಎಲ್ಲರೂ ಮೈಬೆಟ್ಟು ದುಡಿಯುವ ಅಗತ್ಯವಿದೆ. ಸಂಘವು ರಚಿಸಿದ ಶತಮಾನೋತ್ಸವದ ಉಪಸಮಿತಿಗಳು, ಪ್ರಾದೇಶಿಕ ಸಮಿತಿಗಳು ತಮ್ಮ ತಮ್ಮ ಸಮಿತಿಗಳಲ್ಲಿ ಆದಷ್ಟು ಬೇಗ ಪರಿಣಾಮದಾಯಕ ಚರ್ಚೆ ಮಾಡಿ ಸಂಘಕ್ಕೆ ಪರಿಣಾಮ ತೋರಿಸಬೇಕು ಎಂದರು.

ಸಂಘದ ಅಧ್ಯಕ್ಷರು ಶ್ರೀ ಪ್ರವೀಣ್ ಎನ್. ದೇವಾಡಿಗ, ಶ್ರೀ ಧರ್ಮಪಾಲ ದೇವಾಡಿಗ ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ, ಶ್ರೀ ಮಾಲತಿ ಜೆ. ಮೊಯ್ಲಿ, ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನ ದಾಸ್, ಶ್ರೀ ರವಿ ಎಸ್. ದೇವಾಡಿಗ, ಇವರು ವೇದಿಕೆಯಲ್ಲಿ ಇದ್ದರು. ಶ್ರೀ ರವಿ ಎಸ್. ದೇವಾಡಿಗ ಇವರು ಮಾತನಾಡಿ ದೇವಾಡಿಗ ಸೆಂಟರ್ ದಾದರ್ ಮತ್ತು ದೇವಾಡಿಗ ಭವನದ ನೂತನಿಕರಣದ ಬೆಳವಣಿಗೆಯನ್ನು ವರ್ಣಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಮುಖ್ಯವಾಗಿ ಮಹಿಳಾ ವಿಭಾಗದ ಶ್ರೀಮತಿ ಜಯಂತಿ ಎಂ. ದೇವಾಡಿಗ, ಯುವ ವಿಭಾಗದ ಅಡ್ವೋಕೇಟ್ ಬ್ರಿಜೇಶ್ ನಿಟ್ಟೇಕರ್, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಸಂಘದ ಉಪಸಮಿತಿಗಳ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ವಿಷಯಗಳು ಮತ್ತು ವಿವಿಧ ಪ್ರಸ್ತಾಪಗಳನ್ನು ಮಂಡಿಸಿದರು ಸಂಘದ ಗೌ. ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಇವರು ನಿರೂಪಿಸಿದರು ಮತ್ತು ಕೊನೆಯಲ್ಲಿ ವಂದಿಸಿದರು.