Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಶತಮಾನೋತ್ಸವ ಆಚರಣೆ ಕುರಿತು ಸಮಾಲೋಚನಾ ಸಭೆ

ದೇವಾಡಿಗ ಸಂಘ ಮುಂಬಯಿ: ಶತಮಾನೋತ್ಸವ ಆಚರಣೆ ಕುರಿತು ಸಮಾಲೋಚನಾ ಸಭೆ
ಎಲ್ಲರೂ ಒಟ್ಟಾಗಿ ದುಡಿದರೆ ನಮ್ಮ ಶತಮಾನೋತ್ಸವ ಇತರರಿಗೆ ಮಾದರಿಯಾಗಬಹುದು-ಪ್ರವೀಣ್ ಎನ್. ದೇವಾಡಿಗ

   ಮುಂಬಯಿ, ಜೂನ್ 22: ನಮ್ಮ ಸಂಘದ ಶತಮಾನೋತ್ಸವ ಆಚರಣೆಗೆ ಸದಸ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದ್ದು, ನಮ್ಮ ಶತಮಾನೋತ್ಸವ ಆಚರಣೆಯಕಾರ್ಯಕ್ರಮ ಚೆನ್ನಾಗಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಶತಮಾನೋತ್ಸವದ ವಿಷಯದಲ್ಲಿ ಸದಸ್ಯರು ತಮ್ಮ ಮನಸ್ಸಿನ ಭಾವನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಸಂಘದ ಶತಮಾನೋತ್ಸವವನ್ನು ಕೇಂದ್ರೀಕರಿಸಿ ಆ ಬಗ್ಗೆ ಎಲ್ಲರೂ ಒಂದಾಗಿ ದುಡಿಯಬೇಕಾಗಿದೆ. ಯುವ ವಿಭಾಗದಿಂದ ಸಂಘಕ್ಕೆ ಬಹಳ ಆಶಯ ಇದೆ. ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ಒಮ್ಮತದಿಂದ ದುಡಿದರೆ, ನಾವು ನಮ್ಮ ಶತಮಾನೋತ್ಸವ ಆಚರಣೆಯನ್ನು ಇತರರಿಗೆ ಮಾದರಿಯಂತೆ ಆಚರಿಸಬಹದು ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಇಲ್ಲಿ ಹೇಳಿದರು.

ಮುಂಬಯಿಯ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿ ಈಗ ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಬರುವ 2025 ರ ಎಪ್ರಿಲ್ ತಿಂಗಳ ಸುಮಾರಿಗೆ ಬಹಳ ವಿಜೃಂಭಣೆಯ ಶತಮಾನೋತ್ಸವ ಆಚರಣೆಗಾಗಿ ಭರದ ಪೂರ್ವತಯಾರಿ ನಡೆಸುತ್ತಿದೆ. ಇಲ್ಲಿಯ ನೆರೂಲ್ ಪಶ್ಚಿಮದ ದೇವಾಡಿಗ ಭವನದಲ್ಲಿ ಜರಗಿದ (22-06-2024) ಈ ಶತಮಾನೋತ್ಸವ ಆಚರಣಾ ಸಮಿತಿಯ ಸಮಾಲೋಚನಾ ಸಭೆಯ ಅಧ್ಯಕ್ಷಸ್ಥಾನ ವಹಿಸಿದ ಶ್ರೀ ಪ್ರವೀಣ್ ದೇವಾಡಿಗರು ಈ ಮೇಲಿನ ಮಾತುಗಳನ್ನು ಹೇಳಿದರು.

ಅವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಸಂಘದ ಶತಮಾನೋತ್ಸವಕ್ಕೆ ಸದಸ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದ್ದು ನಮ್ಮ ಕಾರ್ಯಕ್ರಮ ಚೆನ್ನಾಗಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎನ್ನುತ್ತಾ ಆನಂದ ವ್ಯಕ್ತ ಪಡಿಸಿದರು. ಈ ಶತಮಾನೋತ್ಸವ ನಮಗೆ ಇನೊಮ್ಮೆ ದೊರಕುವ ಹಾಗಿಲ್ಲ. ಸಂಘದ ವಿಷಯದಲ್ಲಿ ನಾವೆಲ್ಲಾ ಒಟ್ಟಾಗಿದ್ದು, ಶತಮಾನೋತ್ಸವ ಆಚರಣೆಗೆ ದೊಡ್ಡ ಮೊತ್ತದ ನಿಧಿ ಬೇಕಾಗಿದೆ. ನಿಧಿ ಒಟ್ಟುಗೂಡಿಸುವುದು ಎಲ್ಲರ ಕರ್ತವ್ಯ. ಪ್ರತಿಯೊಬ್ಬರೂ ತಮ್ಮ ತಮ್ಮ ಒಂದೊಂದು ನಿರ್ದಿಷ್ಟ ಮೊತ್ತದ ಗುರಿ ಇಟ್ಟುಕೊಳ್ಳಿ. ಪ್ರಾದೇಶಿಕ ಸಮಿತಿಗಳು ತಮ್ಮ ತಮ್ಮ ಸಮಿತಿಗಳಲ್ಲಿ ಒಂದೊಂದು ಕೋರ್ ಕಮಿಟಿ ಸ್ಥಾಪಿಸಿ ಮುನ್ನಡೆಯಬೇಕು. ಅದಕ್ಕೆ ಸಂಘದ ಪೂರ್ಣ ಸಹಕಾರ ಇರುತ್ತದೆ. ಎಲ್ಲರೂ ಒಟ್ಟಾಗಿ ನಾವು ನಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರೋಣ ಎಲ್ಲರೂ ಸಹಕರಿಸಿ" ಎಂದು ಶ್ರೀ ಪ್ರವೀಣ್ ದೇವಾಡಿಗರು ಹೇಳಿದರು.

ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಇವರು ಮಾತನಾಡಿ, ನಮ್ಮ ಪೂರ್ವಜರು ಬಹಳ ಕಷ್ಟದಿಂದ ಮತ್ತು ಬಹಳ ದೂರಾಲೋಚನೆಯಿಂದ ನಮ್ಮ ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ನಾವು ಈಗ ಇದರ ಫಲವನ್ನು ಉಣ್ಣುತ್ತಿದ್ದೇವೆ. ಈ ಸಂಘಕ್ಕೆ ಈಗ ಶತಮಾನ ಪೂರ್ಣವಾಗುತ್ತಿದ್ದು ಈ ಶತಮಾನೋತ್ಸವದಲ್ಲಿ ಭಾಗವಹಿಸುವುದು ನಮ್ಮ ಭಾಗ್ಯ. ಎಲ್ಲಾ ಸದಸ್ಯರ ಸಹಕಾರದಿಂದ ಬಹಳ ವಿಜೃಂಭಣೆಯ ಮತ್ತು ಮುಂಬಯಿಯ ಸಂಘ ಸಂಸ್ಥೆಗಳಿಗೆ ಮಾದರಿಯ ರೀತಿಯಲ್ಲಿ ನಾವು ಸಂಘದ ಶತಮಾನೋತ್ಸವವನ್ನು ಆಚರಿಸೋಣ, ಎಂದು ಇಲ್ಲಿ ಹೇಳಿದರು.
ಹಾಗೆಯೆ ಅವರು ಮುಂದೆ ಮಾತನಾಡುತ್ತಾ ಸಂಘದ ಪ್ರತೀ ಸದಸ್ಯರು ಈ ಆಚರಣೆಯಲ್ಲಿ ಭಾಗವಹಿಸಬೇಕು ಎಂದರು. ನಮ್ಮ ಸಂಘದ ಸದಸ್ಯರು ಪ್ರಪಂಚದ ಮೂಲೆ ಮೂಲೆಯಲ್ಲಿ ಇದ್ದಾರೆ. ಅವರೆಲ್ಲರ ಸಹಕಾರ ಪಡೆಯಬೇಕು. ಸಂಘದ ಎಲ್ಲಾ ವರ್ಗದ ಸದಸ್ಯರು, ಯುವಕರು, ಪ್ರಾದೇಶಿಕ ಸಮಿತಿಗಳು, ಮಹಿಳೆಯರು ಎಲ್ಲರೂ ಸೇರಿ ಒಮ್ಮನಸ್ಸಿನಿಂದ ಈ ಶತಮಾನೋತ್ಸವ ಆಚರಣೆಯಲ್ಲಿ ದುಡಿಯಬೇಕು ಮತ್ತು ಸಹಭಾಗಿಯಾಗಬೇಕು ಎಂದು ಅವರು ಸದಸ್ಯರಲ್ಲಿ ಕೇಳಿಕೊಂಡರು.

"ನಮ್ಮಲ್ಲಿ ಅನೇಕ ಜವಾಬ್ದಾರಿಗಳಿವೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸೇರಿಕೊಂಡಿದ್ದೇವೆ. ಅದಕ್ಕೂ ನಮ್ಮ ಸಹಕಾರ ಅಗತ್ಯ ಆದರೂ ನಮಗೆ ನಮ್ಮ ಸಂಘ ಪ್ರಾಧಾನ್ಯ. ನಮ್ಮ ಸಂಘ ಅಂದರೆ ಒಂದು ಕುಟುಂಬ ಇದ್ದ ಹಾಗೆ. ನಾವು ನಮ್ಮ ಮನೆಯಂತೆಯೇ ನಮ್ಮ ಸಂಘವನ್ನು ಪರಿಗಣಿಸಿ ಅದಕ್ಕಾಗಿ ಸಮಯ ವ್ಯರ್ಥಮಾಡದೆ ಕೆಲಸ ಮಾಡಬೇಕು. ಎಲ್ಲರೂ ಇದನ್ನು ಒಂದು ಚಾಲೆಂಜ್ ಎಂದು ಗ್ರಹಿಸಿ ತಮ್ಮ ಎಲ್ಲಾ ಸಂಪೂನ್ಮೂಲಗನ್ನು ಉಪಯೋಗಿಸಿ ಈ ಸಮಾರಂಭಕ್ಕೆ ಒಗ್ಗಟ್ಟಾಗಿ ದುಡಿಯಬೇಕು. ಸಂಘದ ಚಾಣಕ್ಯರಾದ ಶ್ರೀ ಮೋಹನದಾಸ್ ಹಿರಿಯಡ್ಕ ಇವರ ಮಾರ್ಗದರ್ಶನದಲ್ಲಿ ಸಮಾಜದ ಇತರ ಘಟಕಗಳೊಂದಿಗೆ ಬೆರೆತು ನಾವು ನಮ್ಮ ಗುರಿಯನ್ನು ತಲುಪಬೇಕು. ನಾವು ನಮ್ಮ ಸ್ವಂತದ ಖರ್ಚಿನಿಂದಲೇ ಸಾಧ್ಯವಾದಷ್ಟು ದೇಶ ವಿದೇಶಗಳಿಗೆ ಹೋಗಿ ನಮ್ಮವರಿಂದ ಸಾಧ್ಯವಾದಷ್ಟು ಸಹಕಾರವನ್ನು ಪಡೆಯುತ್ತಿದ್ದೇವೆ. ನೀವೆಲ್ಲಾ ಬೆನ್ನೆಲುಬಾಗಿ ನಿಂತಲ್ಲಿ ನಾವು ಸಂಘದ ಬಹಳ ಅದ್ದೂರಿಯ ಶತಮಾನೋತ್ಸವ ಆಚರಿಸೋಣ" ಎಂದು ಶ್ರೀ ಧರ್ಮಪಾಲ ದೇವಾಡಿಗರು ಹೇಳಿದರು.

ಶತಮಾನೋತ್ಸವ ಸಮಿತಿಯ ಸಂಯೋಜಕರಾದ ಮತ್ತು ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನ ದಾಸ್ ಇವರು ಸಂಘದ ಶತಮಾನೋತ್ಸವದ ಯೋಜನೆಯನ್ನು ಸದಸ್ಯರಿಗೆ ಬಿತ್ತರಿಸಿ ಹೇಳಿದರು. ಶತಮಾನೋತ್ಸವದ ಗುರು ಏನು, ಅದನ್ನು ಪೂರ್ಣಗೊಳಿಸಲು ಯಾವ ಯಾವ ತಯಾರಿ ಆಗಬೇಕಾಗಿದೆ, ಅದರ ನಿಧಿ ಸಂಗ್ರಹದ ನಿಯೋಜನೆ ಹೇಗಿದೆ, ಪ್ರತೀ ಸದಸ್ಯರು, ಸಂಘದ ಉಪಸಮಿತಿಗಳು ಪ್ರಾದೇಶಿಕ ಸಮಿತಿಗಳು ಮಹಿಳಾ ವಿಭಾಗ, ಯುವ ವಿಭಾಗ ಮೊದಲಾದವುಗಳ ಜವಾಬ್ದಾರಿ ಏನು, ಕಾರ್ಯಕ್ರಮ ಎಲ್ಲಿ ಹೇಗೆ ಮತ್ತು ಅದರ ಗಾತ್ರ ವಿಸ್ತಾರಗಳ ಸಂಪೂರ್ಣ ನಿಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು. ವಿಶೇಷವಾಗಿ ಸಂಘದ ಸದಸ್ಯರು ಪದಾಧಿಕಾರುಗಳು ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದರೂ ಪ್ರಸ್ತುತ ಎಲ್ಲರೂ ಅದನ್ನು ಬದಿಗಿರಿಸಿ ಸಂಘಕ್ಕಾಗಿ ಒಮ್ಮತದಿಂದ ದುಡಿಯಬೇಕಾಗಿ ವಿನಂತಿಸಿಕೊಂಡರು. ತಾವು ಹಾಕಿಕೊಂಡಿರುವ ಯೋಜನೆಯಲ್ಲಿ ಸಮಯ ಸಮಯಕ್ಕೆ ಬದಲಾವಣೆ ಬೇಕಾದಲ್ಲಿ ಅದನ್ನೂ ಸಹ ಸರಿಪಡಿಸಿಕೊಂಡು ನಮ್ಮ ಶತಮಾನೋತ್ಸವವನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತಾಗಬೇಕುಎಂದರು. ಸಂಘದ ರಜತಮಹೋತ್ಸವವಾಗಲಿ, ಸುವರ್ಣ ಮಹೋತ್ಸವವಾಗಲಿ, 60ನೇ ವರ್ಷ, 75ನೇ ವರ್ಷ 90ನೇ ವರ್ಶಗಳ ಸ್ಮರಣಿಕೆ ಸಂಘದಲ್ಲಿ ಇದ್ದು ಇನ್ನು ಬರುವ ಶತಮಾನೋತ್ಸವದ ಸ್ಮರಣಿಕೆ ನಿಜವಾಗಿಯೂ ಸಂಘದ ಒಂದು ಮೈಲುಗಲ್ಲು ಆಗಬೇಕಾಗಿದೆ. ಅದಕ್ಕೆ ಎಲ್ಲರೂ ಒಟ್ಟಾಗಿ ದುಡಿಯೋಣ ಎಂದು ಹೇಳುತ್ತಾ ಪ್ತತಿಯೊಬ್ಬ ಸದಸ್ಯರ ಹಾಗೂ ಸಮಿತಿಗಳ ಜವಾಬ್ದಾರಿಗಳನ್ನು ತಿಳಿಸಿ ಹೇಳಿದರು.

ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಇವರು ಮಾತನಾಡಿ ಶತಮಾನೋತ್ಸವದ ಸಲುವಾಗಿ ದೇವಾಡಿಗ ಭವನ ನೆರೂಲ್ ಮತ್ತು ದೇವಾಡಿಗ ಸೆಂಟರ್ ದಾದರ್ ಇವುಗಳ ನೂತನಿಕರಣಬಗ್ಗೆ ಅದರ ಖರ್ಚು ವೆಚ್ಚ, ಅದರ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು
ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ ಸಂಘದ ಮುಂಬರುವ ಯೋಜನೆಗಳಬಗ್ಗೆ ಮತ್ತು ಕೇಂದ್ರ ಸರಕಾರದ ನಾಗರೀಕರಿಗಾಗಿ ತಂದ ಹೊಸ ಯೋಜನೆಗಳ ಬಗ್ಗೆ ಮಾರ್ಗದರ್ಶನ ಮಾಡಿದರು.