Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿಯ ಶತಮಾನೋತ್ಸವ ಉಪ ಸಮಿತಿಗಳ ನೇಮಕ - ಯುವಕರ ಪಾಲ್ಗೊಳ್ಳುವಿಕೆ, ಮಹಿಳೆಯರ ಸಹಭಾಗಿತ್ವ ಅನಿವಾರ್ಯ - ಶ್ರೀ ಧರ್ಮಪಾಲ್ ಯು. ದೇವಾಡಿಗ

ದೇವಾಡಿಗ ಸಂಘ ಮುಂಬಯಿಯ ಶತಮಾನೋತ್ಸವ ಉಪ ಸಮಿತಿಗಳ ನೇಮಕ - ಯುವಕರ ಪಾಲ್ಗೊಳ್ಳುವಿಕೆ, ಮಹಿಳೆಯರ ಸಹಭಾಗಿತ್ವ ಅನಿವಾರ್ಯ - ಶ್ರೀ ಧರ್ಮಪಾಲ್ ಯು. ದೇವಾಡಿಗ

ಮುಂಬಯಿ, ಆ 15 : ಸಮಾಜ ಸಂಘಟನೆಗಳಲ್ಲಿ ಯುವಕರು ಮುಂದೆ ಬಂದು ಸಂಘದ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡಬೇಕು. ಯುವಕರೇ ವೇದಿಕೆಯಲ್ಲಿರಬೇಕು ಮತ್ತು ನಾವು ಹಿರಿಯರು ಅಭ್ಯಾಗತ ಸ್ಥಾನದಲ್ಲಿದ್ದು ಯುವಕರ ಚಟುವಟಿಕೆಗಳ ಅಂದವನ್ನು ಅನುಭವಿಸಬೇಕು. ಅದುವೇ ಸಂತೋಷ ಅಲ್ಲದೆ ಯುವಕರ ಹಣ ಬೇಡ. ಯುವಕರು ಸಾಕಷ್ಟು ಪ್ರಮಾಣದಲ್ಲಿ ಮುಂದೆ ಬಂದು ತಮ್ಮ ಕೌಶಲ್ಯವನ್ನು ತೋರಿಸಿ, ಎಂದು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರು ಹಾಗೂ ದೇವಾಡಿಗ ಸಂಘ ಮುಂಬಯಿ ಇದರ ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಹೇಳಿದರು.

ಮುಂಬಯಿಯ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿಯ ಶತಮಾನೋತ್ಸವ ಸಂಭ್ರಮ ಅನೇಕ ಕಾರ್ಯಕ್ರಮಗಳಿಂದ ಮುಂದುವರಿಯುತ್ತಿದ್ದು, ಬರುವ 2025ರ ಎಪ್ರಿಲ್ ತಿಂಗಳ ಸುಮಾರಿಗೆ ಬಹಳ ವಿಜೃಂಭಣೆಯ ಶತಮಾನೋತ್ಸವ ಆಚರಣೆಗಾಗಿ ಭರದ ಪೂರ್ವತಯಾರಿ ನಡೆಸುತ್ತಿದೆ. ಈ ಶಮಾನೋತ್ಸವ ಸಮಾರಂಭವನ್ನು ಆಚರಿಸುವ ಕುರಿತು ವಿವಿಧ ಉಪಸಮಿತಿಗಳ ನಿರ್ಮಾಣದ ಕುರಿತು ಶ್ರೀ ಧರ್ಮಪಾಲ ದೇವಾಡಿಗರು ಕುರ್ಲಾ ಪೂರ್ವದ ಮುಂಬಯಿ ಬಂಟರ ಭವನದ ಅನ್ನೆಕ್ಸ್ ಸಭಾಭವನದಲ್ಲಿ ಒಂದು ಸಭೆಯನ್ನು ಆಯೋಜಿಸಿದ್ದರು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಧರ್ಮಪಾಲ ದೇವಾಡಿಗರು ಈ ಮೇಲಿನ ಮಾತುಗಳನ್ನು ಹೇಳಿದರು.

ಶ್ರೀ ಧರ್ಮಪಾಲ ದೇವಾಡಿಗರು ತಮ್ಮ ಮತನನ್ನು ಮುಂದುವರಿಸುತ್ತಾ, ಯುವಕರು ತಮ್ಮ ಚಟುವಟಿಕೆಗಳಲ್ಲಿ, ಹಾಡು, ನೃತ್ಯ, ಕ್ರೀಡೆ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಹಜ. ಆದರೆ ಸಂಘದ ಜೊತೆಯಲ್ಲಿ ದುಡಿಯುವಾಗ ನಮ್ಮ ಮುಖ್ಯ ಧ್ಯೇಯ ಏನೆಂದರೆ ಸಂಘ ಹೇಗೆ ಬೆಳೆಯಬೇಕು, ಹೇಗೆ ಪ್ರಗತಿ ಸಾಗಬೇಕು, ಹಿರಿಯರು ಯುವಕರ ಲಾಭ ಹೇಗೆ ಪಡೆಯಬೇಕು ಎಂದೆಲ್ಲಾ ತೋರಿಸಿಕೊಡಬೇಕು ಎಂದರು. ಯುವಕರು ಒಳ್ಳೆಯರಾಗಬೇಕು, ಸಂಘಕ್ಕೆ ಬಂದು ಕೆಲಸ ಮಾಡಬೇಕು, ದೇವರು ನಮಗೆ ಈ ಶತಮಾನೋತ್ಸವ ಆಚರಣೆಯ ಅವಕಾಶ ದೊರಕಿಸಿ ಕೊಟ್ಟಿದ್ದಾರೆ, ಅದರ ಉಪಯೋಗ ಪಡೆದು ನಮ್ಮ ಸಂಘ ಹೇಗೆ ಬೆಳೆಸಬೇಕು, ಯುವಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಏನು ಸಾಧಿಸ ಬಹುದು ಎನ್ನುವ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎನ್ನುವುದಾಗಿ ಅವರು ಹೇಳಿದರು. ಯುವಕರು ಎಲ್ಲರ ಮನಸ್ಸನ್ನು ಗೆಲ್ಲಬೇಕು, ಶತಮಾನೋತ್ಸವ ಸಮಿತಿಗಳಲ್ಲಿ ತಾವೇ ಮುಂದೆ ಬಂದು ವಿವಿಧ ಸಮಿತಿಗಳಲ್ಲಿ ಸೇರಿಕೊಂಡು ದುಡಿಯಬೇಕು. ಸಂಘದ ಸದಸ್ತತ್ವ ಮತ್ತು ಸದಸ್ಯತ್ವದ ಮೇಲ್ದರ್ಜೆಗೆರಿಸಿ ಸಹಕರಿಸಿದರೆ ಸಂಘಕ್ಕೆ ಹಣ ಬಂದು ಸಂಘ ಬಲ ಬರುತ್ತದೆ. ರಚಿಸಿದ ಪ್ರತೀ ಸಮಿತಿಗಳು ತಮ್ಮ ತಮ್ಮ ಪರಿಗಳಲ್ಲಿ ಕೊನೆ ಪಕ್ಷ ಎರಡು ಸಭೆ ಕರೆಸಿ ವಿಷಯಗಳನ್ನು ಚರ್ಚಿಸಿ ಕಾರ್ಯಕ್ರದ ಬಗ್ಗೆ ಗುರಿಸಾಧಿಸುವಲ್ಲಿ ಮುಂದುವರಿಯಬೇಕು ಅದಕ್ಕೆ ಮಾರ್ಗದರ್ಶನ ನೀಡಲು ಸಂಘದ ಪದಾಧಿಕಾರಿಗಳು ಯಾವಾಗಲೂ ತತ್ಪರರಾಗಿರುತ್ತಾರೆ ಮತ್ತು ಸಂಘದ ಶತಮಾನೋತ್ಸವ ಆಚರಣೆಯನ್ನು ಸಾಧ್ಯವಾದಷ್ಟು ವಿಜೃಂಭಣೆಯಿಂದ ಆಚರಿಸಬೇಕು ಎಂದು ಕರೆ ನೀಡಿದರು.

ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಮಾತನಾಡಿ ಸಂಘದ ಶತಮಾನೋತ್ಸವದ ಗುರಿ ಮುಟ್ಟಲು ಎಲ್ಲರೂ ಸಹಕರಿಸುವಂತೆ ವಿನಂತಿಸಿಕೊಂಡರು. ಕೆಲವು ಸದಸ್ಯರು ಈಗಾಗಲೇ ಈ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದು, ಬರುವ ಮಹಿಳಾ ವಿಭಾಗದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಎಲ್ಲರೂ ಆದಷ್ಟು ಸಂಖ್ಯೆಯಲ್ಲಿ ಸ್ಟಾಲ್ಸ್ ಗಳನ್ನು ಮುಂಗಡವಾಗಿ ನಿಗದು ಪಡಿಸಿ ಅದರಿಂದ ಬಂದ ಹಣದಿಂದ ಸಂಘಕ್ಕೆ ಸಹಕರಿಸುವವರಾಗಿ ವಿನಂತಿಸಿದರು. ಯುವಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರವೀಣ್ ಎನ್. ದೇವಾಡಿಗರು ಸಂಘದ ಎಲ್ಲಾ ಸಮಿತಿ ಸದಸ್ಯರು ಅವರವರ ನಿತ್ಯದ ಕೆಲಸ ಬಿಟ್ಟು ಸಮಯ ಮತ್ತು ಆರ್ಥಿಕ ಸಹಾಯ ನೀಡಿ ಸಂಘಕ್ಕಾಗಿ ಎಲ್ಲಾ ತರದ ಸಹಾಯ ಮಾಡುತ್ತಿದ್ದಾರೆ. ಅದರಂತೆ ಯುವಕರು ಮುಂದೆ ಬಂದು ಎಲ್ಲಾ ದಿಶೆಗಳಲ್ಲಿ ಸಹಕರಿಸುವಂತೆ ವಿನಂತಿಸಿಕೊಂಡರು. ಅಲ್ಲದೆ, ಎಲ್ಲಾ ಪ್ರಾದೇಶಿಕ ಸಮಿತಿಗಳು ತಮ್ಮ ತಮ್ಮ ವಿಭಾಗಗಳಲ್ಲಿ ಕಾರ್ಯಚಟುವಟಿಕೆಗಳು ವಿಶೇಷವಾಗಿ ನಿಧಿ ಸಂಗ್ರಹವನ್ನು ಆರಂಭಿಸಬೇಕು ಮತ್ತು ಆದಷ್ಟು ಬೇಗ ತಮ್ಮ ಗುರಿಗಳನ್ನು ಸಾಧಿಸಬೇಕು ಎಂದರು.

ಶತಮಾನೋತ್ಸವ ಸಮಿತಿಯ ಸಂಯೋಜಕರಾದ ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ ದಾಸ್ ಇವರು ಮಾತನಾಡಿ ಶತಮಾನೋತ್ಸವ ಆಚರಣೆಯ ಕುರಿತು ನಡೆಯುತ್ತಿರುವ ಚಿಂತನ ಮಂಥನಗಳಿಗೆ ಸಮಾಧಾನ ವ್ಯಕ್ತ ಪಡಿಸಿದರು. ಶ್ರೀ ಧರ್ಮಪಾಲ ದೇವಾಡಿಗರ ಆಸಕ್ತಿ ಮತ್ತು ಸಂದೇಶ ಅಲ್ಲದೆ ಸದಸ್ಯರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಸ್ವಯಂಖರ್ಚಿನ ಮತ್ತು ಮುಂದಾಳುತನದ ಕಾರ್ಯಕ್ರಮ ಆಯೋಜಿಸಿದಕ್ಕಾಗಿ ಅವರಿಗೆ ಧನ್ಯವಾದ ನೀಡಿ ಸಂಘದ ಪ್ರತೀ ಸದಸ್ಯರು ಸಹಕರಿಸುವಂತೆ ಮತ್ತು ಎಲ್ಲರಿಗೂ ದೇವರು ಸದ್ಬುದ್ಧಿಯನ್ನ ನೀಡಲಿ ಎಂದು ಹರಸಿದರು. ಶತಮಾನೋತ್ಸವ ಸಮಿತಿಗಳನ್ನು ಅವಲೋಕಿಸಿದ ಅವರು ಎಲ್ಲರೂ ಉತ್ತಮ ರೀತಿಯಲ್ಲಿ ಪರಿಶ್ರಮಿಸಿದರೆ ಸಂಘದ ಶತಮಾನೋತ್ಸವ ಅಪೇಕ್ಷಿಸಿದಂಕ್ಕಿಂತಲೂ ಹೆಚ್ಚು ಯಶಸ್ಸು ದೊರಕುವಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದಾಗಿ ಅಭಿಪ್ರಾಯ ಪಟ್ಟರು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ ಇವರು ಮಾತನಾಡಿ, ಸಂಘದ ಹಿಂದಿನ ಪದಾಧಿಕಾರಿಗಳು ಕಷ್ಟ ಪಟ್ಟು ಈ ಸಂಘವನ್ನು ಬೆಳೆಸಿದ್ದಾರೆ. ಸಂಘದ ಕಟ್ಟಡಗಳನ್ನು ಕಟ್ಟಿದ್ದಾರೆ. ಅದರ ಫಲ ನಾವು ಉಣ್ಣುತ್ತಿದ್ದೇವೆ. ನಮ್ಮ ಸಂಘ ಅಜರಾಮರವಾಗಿ ಉಳಿಯಬೇಕು. ಬರುವ ದಿನಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಸಂಘದಲ್ಲಿ ಕಾರ್ಯರೂಪಕ್ಕೆ ತಂದು ಮುಂದಿನ ತಲೆಮಾರುಗಳಿಗೆ ಉಪಯೋಗವಾಗುವಂತೆ ಸಂಘವನ್ನು ಬೆಳೆಸಬೇಕು ಎಂದರು.
ಶತಮಾನೋತ್ಸವ ಆಚರಣೆಗೆ ವಿವಿಧ ಸಮಿತಿಗಳನ್ನು ರಚಿಸಿದ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ ಶತಮಾನೋತ್ಸವ ಸಮಿತಿಗಳ ಸದಸ್ಯರನ್ನು ಪರಿಚಯಿಸಿ, ಪ್ರತಿಯೊಬ್ಬರ ಜವಾಬ್ದಾರಿಗಳನ್ನು ಬಿತ್ತರಿಸಿ ತಿಳಿಸಿದರು. ಈ ಸಮಿತಿಗಳು ಬಹಳ ಜವಾಬ್ದಾರಿಗಳನ್ನು ಹೊಂದಿದ್ದು, ದಕ್ಷ ಸದಸ್ಯರನ್ನು ಸೇರಿಸಿಕೊಳ್ಳಬೇಕು ಮತ್ತು ಎಲ್ಲರೂ ತಮ್ಮ ತಮ್ಮ ತನು, ಮನ, ಧನದಿಂದ ಸಹಕರಿಸಬೇಕಾಗಿ ಶ್ರೀ ಧರ್ಮಪಾಲ ದೇವಾಡಿಗ ಸಲಹೆ ನೀಡಿದರು. ಸಮಿತಿಗಳ ರಚನೆ ವ್ಯವಸ್ಥಿತವಾಗಿವೆ ಆದರೆ ಸಮಿತಿಗಳ ಸದಸ್ಯರು ತಮ್ಮ ಸಕ್ರಿಯವಾಗಿರಬೇಕು ಎಂದು ಶ್ರೀ ಹಿರಿಯಡ್ಕ ಮೋಹನ ದಾಸ್ ಇವರು ಹೇಳಿದರು.

ಹೊಸತಾಗಿ ರಚಿಸಿದ ವಿವಿಧ ಶತಮಾನೋತ್ಸವ ಸಮಿತಿಗಳ ಸದಸ್ಯರು ತಮ್ಮನ್ನು ಪರಿಚಯಿಸಿ ತಾವು ಯಾವ ಯಾವ ರೀತಿಯಲ್ಲಿ ಈ ಶತಮಾನೋತ್ಸವಕ್ಕೆ ಸಹಕರಿಸಬಹುದು ಎನ್ನುವುದಾಗಿ ಹೇಳಿದರು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ ಜೆ. ಮೊಯಿಲಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವೋಕೇಟ್ ಶ್ರೀ ಬ್ರಿಜೇಶ್ ನಿಟ್ಟೇಕರ್ ಇವರೂ ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಭೋಜನ ಸಮೇತ ಈ ಕಾರ್ಯಕ್ರಮವನ್ನು ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಪ್ರಾಯೋಜಿಸಿದ್ದರು. ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಪ್ರಭಾಕರ್ ದೇವಾಡಿಗ ಮತ್ತು ನಿತೇಶ್ ದೇವಾಡಿಗ ಜೊತೆ ಕೋಶಾಧಿಕಾರಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ ಇವರು ಸಹಕರಿಸದರು.
ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು.