Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಸಂಘದ ಬೆಳವಣಿಗೆಗೆ ಮಹಿಳೆಯರ ತ್ಯಾಗ ದೊಡ್ಡದು: ಪ್ರವೀಣ್ ಎನ್. ದೇವಾಡಿಗ

ನವಿ ಮುಂಬಯಿ, ಆಗಸ್ಟ್ 10 : ನಮ್ಮ ಮನೆ ಆಗಲಿ, ಸಮಾಜ ಆಗಲಿ ಅಥವಾ ಸಂಘ ಸಂಸ್ಥೆಗಳಾಗಲಿ, ಮಹಿಳೆಯರ ತ್ಯಾಗ ಅಪಾರವಾಗಿರುತ್ತದೆ. ಅವರನ್ನು ಮುಂದಿಟ್ಟುಕೊಂಡು ದುಡಿದರೆ ನಮ್ಮ ಸಾಧನೆ ಫಲಿಸುತ್ತದೆ ಮತ್ತು ಸಂಘಟನೆಗೆ ಬಲ ಬರುತ್ತದೆ. ಅದಕ್ಕಾಗಿ ಮಹಿಳಾ ವಿಭಾಗಲಕ್ಕೆ ಸಂಘದ ಸಂಪೂರ್ಣ ಸಹಕಾರ ಇದೆ ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಹೇಳಿದರು.

ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಶನಿವಾರ ಆಗಸ್ಟ್ 10 ರಂದು ನೆರೂಲ್ ಇಲ್ಲಿರುವ ಸಂಘದ ದೇವಾಡಿಗ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಪ್ರವೀಣ್ ಎನ್. ದೇವಾಡಿಗರು ಮೇಲಿನ ಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಶ್ರೀಮತಿ ಪ್ರಮೀಳಾ ಪಿ. ದೇವಾಡಿಗ, ಜಾಗತಿಕ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ, ಸಂಘದ ಮಾಜಿ ಅಧ್ಯಕ್ಷ ಮತ್ತು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ, ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ ಜೆ. ಮೊಯಿಲಿ, ಜೊತೆ ಖಜಾಂಚಿ ಶ್ರೀಮತಿ ಸುರೇಖಾ ದೇವಾಡಿಗ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಎ. ಸೇರಿಗಾರ, ಶ್ರೀಮತಿ ಪ್ರಮೀಳಾ ವಿ. ಸೇರಿಗಾರ, ಶ್ರೀಮತಿ ನಳಿನಿ ಎಸ್. ದೇವಾಡಿಗ ಇವರು ವೇದಿಕೆಯಲ್ಲಿದ್ದರು.

ಶ್ರೀ ಪ್ರವೀಣ್ ಎನ್. ದೇವಾಡಿಗರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಸಂಘದ ಆಹತಮಾನೋತ್ಸವ ಕಾರ್ಯಕ್ರಮದ ಕುರಿತು ಎಲ್ಲರ ಗಮನ ಸೆಳೆದರು. ಈ ವರ್ಷ ಹತಮಾನೋತ್ಸವ ನಮ್ಮ ಮುಖ್ಯ ಗುರಿ ಮತ್ತು ಈ ಗುರಿ ಸಾಧಿಸುವಲ್ಲಿ ಮಹಿಳೆಯರು ನೇತೃತ್ವ ವಹಿಸಿ ಅಡಶ್ಟು ಸಹಕರಿಸಬೇಕಾಗಿ ಕೇಳಿಕೊಂಡರು.

ಶ್ರೀ ಧರ್ಮಪಾಲ ದೇವಾಡಿಗರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು ಮತ್ತು ಸಂಘದ ಮಹಿಳಾ ವಿಭಾಗದ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶತಮಾನೋತ್ಸವ ಆಚರಣೆ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತಹದ್ದಾಗಿರಬೇಕು. ಅದಕ್ಕೆ ಎಲ್ಲರ ಆಶ್ರಮ ಅಗತ್ಯ. ಮಹಿಳಾ ವಿಭಾಗವು ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಒತ್ತಿ ಹೇಳಿ ತನ್ನ ಸಂಪೂರ್ಣ ಬೆಂಬಲ ಇರುವುದಾಗಿ ಹೇಳಿದರು.
ಈ ಸಂದಭದಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಎಲ್ಲರಿಗೂ ಅವರ ಸಹಕಾರಕ್ಕಾಗಿ ಧನ್ಯವಾದ ನೀಡಿದರು. ಆಟಿ ತಿಂಗಳ ವಿಶೇಷ ಅಡುಗೆಗಳನ್ನು ಮನೆಯಲ್ಲಿ ತಯಾರಿಸಿ ತಂದು ಕಾರ್ಯಕರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅವರು ಧನ್ಯವಾದ ನೀಡಿದರು. ಸಂಘದ ಶತಮಾನೋತ್ಸವದ ಆಚರಣೆಯಲ್ಲಿ ಮಹಿಳಾ ವಿಭಾಗವು ತನ್ನ ಜವಾಬ್ದಾರಿಯನ್ನು ಖಂಡಿತವಾಗಿಯೂ ದಕ್ಷತೆಯನ್ನು ನೆರವೇರಿಸುವುದಾಗಿ ಆಶ್ವಾಸನೆ ನೀಡಿದರು. ಅಲ್ಲದೆ ಮಹಿಳಾ ವಿಭಾಗವು ಅನೇಕ ಕಾರ್ಯಕಗಳನ್ನು ಹಮ್ಮಿಕೊಂಡಿದ್ದು ಅದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಸದಸ್ಯರು ಆಟಿ ತಿಂಗಳ ವಿಶೇಷತೆಯ ಕುರಿತುಅನೇಕ ಮಾಹಿತಿ ನೀಡಿದಲ್ಲದೆ, ಒಗಟುಗಳು, ಗಾದೆಗಳ ಸ್ಪರ್ಧೆ ನಡೆಸಿದರು . ಅಸಲ್ಫ ಪ್ರಾದೇಶಿಕ ಸಮಿತಿಯ ಕುಮಾರ ಮನ್ವಿತ್ ದೇವಾಡಿಗ ಮತ್ತು ಬೊರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಉಮಾವತಿ ಗುಅಜರನ್ ಇವರು ಪಾರಂಪರಿಕ "ಆಟಿ ಕಳಂಜ" ನ ನರ್ತನ ಮತ್ತು ಪಾರ್ದನಗಳಿಂದ ಎಲ್ಲರ ಗಮನ ಸೆಳೆದರು.

ಸುಮಾರು ಐವತ್ತು ಮಹಿಳೆಯರು ತಯಾರಿಸಿ ತಂಡ ವಿವಿಧ ಬಗೆಗಳ ಅಡುಗೆ ಪ್ರದರ್ಶನ ನಡೆಯಿತು ಮತ್ತು ಬಹುಮಾನ ವಿತರಣೆ ನಡೆಯಿತು. ಈ ಕಾರ್ಯಕ್ರಮಕ್ಕೆ ಪ್ರಾಮುಖ್ಯವಾಗಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಹೆಚ್. ಮೋಹನದಾಸ್, ಶ್ರೀ ವಾಸು ದೇವಾಡಿಗ, ಶ್ರೀ ರವಿ ಎಸ್. ದೇವಾಡಿಗ, ಶ್ರೀ ಶ್ರೀನಿವಾಸ್ ಪಿ. ಕರ್ಮರನ್; ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಪ್ರಾದೇಶಿಕ ಸಮಿತಿಗಳ ಸಮನ್ವಯಕರು ಶ್ರೀ ಜಯ ಎಲ್. ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ರಮೇಶ್ ದೇವಾಡಿಗ, ಸಂಘದ ಮಾಜಿ ಮಹಿಳಾ ಕಾರ್ಯಾಧ್ಯಕ್ಷರುಗಳಾದ ಶ್ರೀಮತಿ ಶಾಂತಾ ಜಿ. ಮೊಯಿಲಿ, ಶ್ರೀಮತಿ ಪ್ರಫುಲ್ಲಾ ವಿ. ದೇವಾಡಿಗ ಮತ್ತು ಶ್ರೀಮತಿ ಜಯಂತಿ ಆರ್ ಮೊಯಿಲಿ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಸಪ್ನಾ ಮೊಯಿಲಿ ಶ್ರೀ ಪದ್ಮನಾಭ ಮೊಯಿಲಿ, ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು ಮತ್ತು ಮಹಿಳಾ ಕಾರ್ಯಧ್ಯಕ್ಷೆಯರು ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಿಳಾ ಕಾರ್ಯದರ್ಶಿ ಶ್ರೀಮತಿ ಸುಜಯ ವಿ. ದೇವಾಡಿಗ ಇವರು ಸ್ವಾಗತಿಸಿದರು ಮತ್ತು ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಎ. ಸೇರಿಗಾರ ಇವರು ವಂದಿಸಿದರು.