Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದಿಂದ "ಆಟಿದ ಒಂಜಿ ದಿನ" ಕಾರ್ಯಕ್ರಮದ ಆಯೋಜನೆ

ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದಿಂದ "ಆಟಿದ ಒಂಜಿ ದಿನ" ಕಾರ್ಯಕ್ರಮದ ಆಯೋಜನೆ

ಮುಂಬಯಿ, ಜುಲೈ ೨೨: ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವತಿಯಿಂದ "ಆಟಿದ ಒಂಜಿ ದಿನ" ಕಾರ್ಯಕ್ರಮವನ್ನು ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ಸಂಘದ ದಾದರ್ ಕಾರ್ಯಾಲಯದಲ್ಲಿ ಬಹಳ ಅದ್ದೊರಿಯಿಂದ ಆಚರಿಸಲಾಯಿತು. ಬಹಳ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ ಈ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್‌ದಾಸ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರೊಂದಿಗೆ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ ಜೆ. ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ, ಜೊತೆ ಖಜಾಂಚಿ ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಶ್ರೀಮತಿ. ಭಾರತಿ ಎಸ್. ನಿಟ್ಟೆಕರ್, ಶ್ರೀಮತಿ ಜಯಂತಿ ಆರ್ ಮೊಯ್ಲಿ, ಶ್ರೀಮತಿ ಪ್ರಫುಲ್ಲ ವಿ, ದೇವಾಡಿಗ; ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್, ಕಾರ್ಯದರ್ಶಿ ಶ್ರೀಮತಿ ಸುಜಯ ವಿ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಎ. ಶೇರಿಗಾರ, ಶ್ರೀಮತಿ ಪ್ರಜ್ಞಾ ಮೋಹನ್ ದಾಸ್ ಇವರು ಉಪಸ್ಥಿತರಿದ್ದು ಸಹಕರಿಸಿದರು. ಸಂಘದ ಬೊರಿವಲಿ ಪ್ರಾದೇಶೀಕ ಸಮಿತಿಯ ಶ್ರೀಮತಿ ಶ್ಯಾಮಲಾ ಗುಜರನ್ ಇವರು ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ಈ ಸಂದರ್ಭದಲ್ಲಿ ಸಂಘದ ಮಹಿಳಾ ವಿಭಾಗದ ಕಾರ್ಯಕ್ರಮಗಳನ್ನು ಪ್ರಶಂಸಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಘದ ಸದಸ್ಯತ್ವ ಹೆಚ್ಚಿಸುವಂತೆ ಕರೆ ನೀಡಿದ ಅವರು, ಸಂಘದ ಬೆಳವಣಿಗೆಯಲ್ಲಿ ಮಹಿಳೆಯರ ದೊಡ್ಡ ಪರಿಶ್ರಮ ಇದ್ದು; ಎಲ್ಲರೂ ಸಂಘದ ಬೆಳೆವಣಿಗೆಯ ದ್ರಿಷ್ಟಿಯಲ್ಲಿ ಕಾರ್ಯರತರಾಗಬೇಕು ಎಂದು ಹೇಳಿದರು. ಅಲ್ಲದೆ ಮಹಿಳೆಯರು ಬಹುಸಂಖ್ಯೆಯಲ್ಲಿ ಸೇರಿ ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಶಿಕ್ಶಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಎಲ್ಲೂರು ಇವರು ಆಟಿ ತಿಂಗಳ ಮಹತ್ವ, ಪೂರ್ವಜರು ಆಟಿ ತಿಂಗಳಲ್ಲಿನಲ್ಲಿ ವಿಶೇಷವಾಗಿ ಮಳೆಗಾಲವನ್ನು ಹೇಗೆ ಕಳೆಯುತ್ತಿದ್ದರು, ಅಲ್ಲದೆ ಆಗಿನ ಅಡುಗೆಗಳು, ಆಟೋಟಗಳು ಮೊದಲಾದ ವಿಷಯಗಳ ಬಗ್ಗೆ ಹೇಳಿದರು. ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರು ಪೂರ್ವಜರು ಪಾಲಿಸಿಕೊಂಡು ಬರುತ್ತಿದ್ದ ಮಾಪನಗಳ ಬಗ್ಗೆ ತಮ್ಮ ವಿಷಯ ಮಂಡಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್‌ದಾಸ್ ಇವರು ಎಲ್ಲರಿಗೂ ಶುಭ ಕೋರಿದರು. ಶ್ರೀಮತಿ ಮಾಲತಿ ಜೆ ಮೊಯ್ಲಿ, ಶ್ರೀಮತಿ. ಭಾರತಿ ಎಸ್. ನಿಟ್ಟೆಕರ್ - ಮಾಜಿ ಮಹಿಳಾ ಉಪಾಧ್ಯಕ್ಷೆ, ಪ್ರಧಾನ ಕಾರ್ಯದರ್ಶಿ - ಶ್ರೀ ವಿಶ್ವನಾಥ್ ಬಿ ದೇವಾಡಿಗ, ಡಾ. ರೇಖಾ ದೇವಾಡಿಗ, ಶ್ರೀಮತಿ. ರಂಜಿನಿ ಆರ್ ಮೊಯ್ಲಿ- ಮಾಜಿ ಮಹಿಳಾ ಉಪಾಧ್ಯಕ್ಷೆ ಮೊದಲಾದವರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಚೆಂಬೂರ್ ಪ್ರಾದೇಶಿಕ ಸಮಿತಿಯ ಹೇಮಲತಾ ಶೇರಿಗಾರ್ ಮತ್ತು ಭಾಂಡೂಪ್ ಪ್ರಾದೇಶಿಕ ಸಮಿತಿಯ ಶ್ರೀಮತಿ ಲೋಲಾಕ್ಷಿ ದೇವಾಡಿಗ ಮತ್ತು ಬೊರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಶ್ರೀಮತಿ ಲಕ್ಷ್ಮಿ ದೇವಾಡಿಗ ಇವರು ಸಾಂಪ್ರದಾಯಿಕ ಪಾರ್ದನಗಳನ್ನು ಹಾಡಿದರು. ಅಲ್ಲದೆ ಕಲಾವಿದೆ ಶ್ರೀಮತಿ ಚಂದ್ರಾವತಿ ವಿ. ದೇವಾಡಿಗ, ಮುಂಬಯಿ ಆಕಾಶವಾಣಿ ಪ್ರಸಿದ್ಧಿಯ ಶ್ರೀಮತಿ ಸುಶೀಲಾ ದೇವಾಡಿಗ, ಬೊರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಕುಸುಮಾ ದೇವಾಡಿಗ, ಇವರು ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿರುವ ಆಟಿಯ ಅಡುಗೆ ಎಲ್ಲರ ಮನಸ್ಸುಗಳನ್ನು ಸೂರೆಗೊಂಡಿತು. ಇದರಲ್ಲಿ ಸಿಟಿ ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ ಮಾಲತಿ ಜೆ ಮೊಯ್ಲಿ, ಶ್ರೀಮತಿ. ಭಾರತಿ ಎಸ್. ನಿಟ್ಟೆಕರ್, ಶ್ರೀಮತಿ ಸುರೇಖಾ ಎಚ್. ದೇವಾಡಿಗ, ಶ್ರೀಮತಿ ಸುಜಯ ವಿ. ದೇವಾಡಿಗ, ಶ್ರೀಮತಿ. ಸರಸ್ವತಿ ಕಾರ್ಕಳ, ಶ್ರೀಮತಿ ಜಲಜಾ ಶೇರಿಗಾರ್, ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಶ್ರೀಮತಿ. ಶಶಿಕಲಾ ಎಸ್. ಮೊಯ್ಲಿ, ಶ್ರೀಮತಿ ಗೀತಾ ಎಲ್. ದೇವಾಡಿಗ, ಶ್ರೀಮತಿ ಮಮತಾ ಸಿ. ದೇವಾಡಿಗ, ಶ್ರೀಮತಿ ಇಂದಿರಾ ಮೊಯ್ಲಿ, ಶ್ರೀಮತಿ ಸುಶೀಲಾ ದೇವಾಡಿಗ, ಶ್ರೀಮತಿ ಚಂದ್ರಾವತಿ ವಿ ದೇವಾಡಿಗ, ಶ್ರೀಮತಿ ಪ್ರತಿಮಾ ಮೊಯ್ಲಿ ಮತ್ತು ಶ್ರೀಮತಿ ಲತಾ ಮೊಯ್ಲಿ ಇವರು ತಮ್ಮ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಚೆಂಬೂರ್ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ ಹೇಮಲತಾ ಶೇರಿಗಾರ್, ಶ್ರೀಮತಿ ಜಯಂತಿ ಎಂ. ದೇವಾಡಿಗ, ಶ್ರೀಮತಿ ನಿರ್ಮಲಾ ಆರ್ ದೇವಾಡಿಗ, ಶ್ರೀಮತಿ ಶೋಭಾ ದೇವಾಡಿಗ, ಶ್ರೀಮತಿ ಪುಷ್ಪ ರಾವ್ ಮತ್ತು ಶ್ರೀ ಲೋಕೇಶ್ ದೇವಾಡಿಗ, ಬೊರಿವಲಿ ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ. ಉಮಾವತಿ ಗುಜರನ್, ಶ್ರೀಮತಿ ಕುಸುಮಾ ದೇವಾಡಿಗ, ಶ್ರೀಮತಿ ಲಕ್ಷ್ಮಿ ದೇವಾಡಿಗ ಮತ್ತು ಶ್ರೀಮತಿ ಶಾಮಲಾ ಗುಜರನ್; ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ಮಲ್ಲಿಕಾ ಶ್ರೀಯಾನ್ ಮತ್ತು ಶ್ರೀಮತಿ ಶುಭ ದೇವಾಡಿಗ; ನವಿ ಮುಂಬಯಿ ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ ಲತಾ ಎ. ಶೇರಿಗಾರ ಮತ್ತು ಶ್ರೀಮತಿ ಶಾಂತಾ ದೇವಾಡಿಗ; ಭಾಂಡೂಪ್ ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ಪ್ರಫುಲ್ಲ ದೇವಾಡಿಗ ಮತ್ತು ಶ್ರೀಮತಿ ಲೋಲಾಕ್ಷಿ ದೇವಾಡಿಗ; ಜೋಗೇಶ್ವರಿ ಪ್ರಾದೇಶಿಕ ಸಮಿತಿಯಿಂದ ಶ್ರೀಮತಿ ಪದ್ಮಾವತಿ ದೇವಾಡಿಗ, ಶ್ರೀಮತಿ ಪದ್ಮಾ ಎಂ ದೇವಾಡಿಗ ಮತ್ತು ಶ್ರೀಮತಿ ರೇಖಾ ದೇವಾಡಿಗ ಇವರು ಪಾಲ್ಗೊಂಡರು.

ಅನೇಕ ಪ್ರಕಾರಗಳಲ್ಲಿ ಆಯೋಜಿಸಿದ ವ್ಯಂಜನ ಸ್ಪರ್ಧೆಯಲ್ಲಿ ಅತ್ಯುತ್ತಮ ಆಟಿದ ತಿನಸು ಬಹುಮಾನವನ್ನು ಶ್ರೀಮತಿ ಮಮತಾ ಸಿ ದೇವಾಡಿಗ ಇವರ "ಉಪ್ಪಡ್ ಪಚ್ಛಿರ್ " ಇವರು ಪಡೆದರು. ಅತ್ಯುತ್ತಮ ಆಟಿದ ಸಿಹಿ ಖಾದ್ಯ ಬಹುಮಾನವನ್ನು ಶ್ರೀಮತಿ ಪ್ರತಿಮಾ ಮೊಯ್ಲಿ ಮತ್ತು ಶ್ರೀಮತಿ ಲತಾ ಮೊಯ್ಲಿ ಇವರ "ಪೆಲಕಾಯಿ ಗಟ್ಟಿ" ಇದಕ್ಕೆ ನೀಡಲಾಯಿತು. ಶ್ರೀಮತಿ ಗೀತಾ ಎಲ್ ದೇವಾಡಿಗ ಇವರ ಅತೀ ಹೆಚ್ಚು ವ್ಯಂಜನಗಳಾದ "ತೋಜಾಂಕ್ ದೋಸೆ", "ಸಾಮೇದಡ್ಡೆ, "ರಚ್ಚೈ ಚಟ್ನಿ" ಮತ್ತು "ಉರ್ಪೆಲ್ಅರಿ ನುಪ್ಪು" ಇದಕ್ಕೆ ಬಹುಮಾನ ನೀಡಲಾಯಿತು. "ಅತ್ಯುತ್ತಮ ಆಟಿಯ ಸಾಂಪ್ರದಾಯಿಕ ಉಡುಗೆ" ಬಹುಮಾನವನ್ನು ಶ್ರೀಮತಿ ಹೇಮಲತಾ ಶೇರಿಗಾರ್ ಇವರು ಪಡೆದರು. ಸಾಂಪ್ರದಾಯಿಕ ಉಡುಗೆಯಲ್ಲಿ ಸಮಾಧಾನಕರ ಬಹುಮಾನಗಳನ್ನು ಶ್ರೀಮತಿ ಗೀತಾ ಎಲ್. ದೇವಾಡಿಗ, ಶ್ರೀಮತಿ ರಂಜಿನಿ. ಆರ್ ಮೊಯ್ಲಿ, ಮತ್ತು ಶ್ರೀಮತಿ ಲಕ್ಷ್ಮೀ ದೇವಾಡಿಗ ಇವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ವಾಸು ಎಸ್. ದೇವಾಡಿಗ ಮತ್ತು ಶ್ರೀ ರವಿ ಎಸ್ ದೇವಾಡಿಗ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ಶ್ರೀ ಬ್ರಿಜೇಶ್ ನಿಟ್ಟೇಕರ್ ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು ಪದಾಧಿಕಾರಿಗಳು ಮತ್ತು ಮಹಿಳಾ ಸದಸ್ಯರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ದೇವಾಡಿಗ ಇವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.