Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ "ಆಟಿದೊಂಜಿ ದಿನ”ಆಚರಣೆ.

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ "ಆಟಿದೊಂಜಿ ದಿನ”ಆಚರಣೆ.

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಆಟಿದೊಂಜಿ ದಿನ ಜುಲೈ 23 ರಂದು ಸಂಘದ ದಾದರ್ ನ ದೇವಾಡಿಗ ಸೆಂಟರ್ ನಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ನೆರವೇರಿತು.

ದೇವಾಡಿಗ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗರು ಸೇರಿದ ಎಲ್ಲಾ ದೇವಾಡಿಗ ಬಂಧುಗಳಿಗೆ ಸ್ವಾಗತವನಿತ್ತರು. ಸಂಘದ ಉಪಕಾರ್ಯಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರು ಬಡವ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಸಂಘದ ವಿದ್ಯಾರ್ಥಿ ವೇತನವನ್ನು ಪಡೆಯುವಂತೆ ತಿಳಿಸಿ, ಯುವ ಜನತೆ ನಮ್ಮ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿದರು. ಸಂಘದ ಶತಮಾನೋತ್ಸವಕ್ಕೆ ಎಲ್ಲರೂ ಸಹಕರಿಸುವಂತೆ ಕರೆ ನೀಡಿದರು.

ಸಂಘದ ಮಾಜಿ ಅಧ್ಯಕ್ಷ ಮತ್ತು ವಿಶ್ವ ದೇವಾಡಿಗ ಮಹಾ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನದಾಸ್ ರವರು ಮಹಿಳಾ ವಿಭಾಗದವರಿಗೆ ತಮ್ಮ ಎಲ್ಲಾ ಕಾರ್ಯ, ಸಂಘದ ಚಟುವಟಿಕೆಗಳನ್ನು ಅರ್ಥ ಪೂರ್ಣವಾಗಿ ನಿಭಾಯಿಸಿದಕ್ಕಾಗಿ ಅಭಿನಂದಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗರು ಆಟಿ ತಿಂಗಳು ಅಂದರೆ ಸುಮಾರು ಅರ್ಧ ಶತಮಾನದ ಹಿಂದೆ ತುಂಬಾ ಕಷ್ಟಕರ ಸಮಯ, ಪ್ರಕೃತಿಯಲ್ಲಿ ಸಿಗುವ ತಿಮರೆ, ಮರಗೆಣಸು, ಉಪ್ಪಡ್ ಪಚ್ಚಿರ್, ನೀರುಪ್ಪಡು, ಇದನ್ನು ಪದಾರ್ಥ ಮಾಡಿ ಹಿಂದಿನ ಕಾಲದವರು ಜೀವನ ಮಾಡುತ್ತಿದ್ದರು, ಬರುವ ಆಗಸ್ಟ್ 15ರಂದು ಸಂಘದ ವಾರ್ಷಿಕ ಮಹಾ ಸಭೆಗೆ ಎಲ್ಲರೂ ಹಾಜರಿರುವಂತೆ ಸಭಿಕರಿಗೆ ವಿನಂತಿಸಿದರು. ಮಾಜಿ ಅಧ್ಯಕ್ಷ ಶ್ರೀ ಕೆ.ಕೆ.ಮೋಹನದಾಸ್ , ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ. ಮೊಯಿಲಿ ಮತ್ತು ಶ್ರೀ ಜಯ ಎಲ್ ದೇವಾಡಿಗ, ಉಪ ಖಚಾಂಜಿ ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಮಾಜಿ ಕಾರ್ಯಧ್ಯಕ್ಷೆಯಾದ ಶ್ರೀಮತಿ ಭಾರತಿ ನಿಟ್ಟೇಕರ್, ಶ್ರೀಮತಿ ಜಯಂತಿ ಮೊಯಿಲಿ, ಶ್ರೀಮತಿ ವನಿತಾ ರವಿ ದೇವಾಡಿಗ, ಸಂದರ್ಭಯೋಚಿತವಾಗಿ ಮಾತನಾಡಿದರು.

ಬೋರಿವಿಲಿ ಸಮನ್ವಯ ಸಮಿತಿಯ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ದೇವಾಡಿಗರು ಆಟಿಯ ಆಚರಣೆಯ ಬಗ್ಗೆ ತಿಳಿಸಿ, ಸೊಗಸಾದ ತುಳು ಪಾಡ್ದನವನ್ನು ಹಾಡಿದರು. ಚೆಂಬೂರ್ ಸಮನ್ವಯ ಸಮಿತಿಯ ಶ್ರೀಮತಿ ಹೇಮಲತಾ ಶೇರಿಗಾರ್ ರವರು ತುಳು ಜಾನಪದ ಗೀತೆ ಹಾಡಿದರೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ ಯವರು ತುಳು ಭಾವ ಗೀತೆಯನ್ನು ಹಾಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಮತ್ತು ಮಾಜಿ ಅಧ್ಯಕ್ಷರಾದ ಶ್ರೀ ಕೆ.ಕೆ. ಮೋಹನ್ ದಾಸ್ ಅವರನ್ನು ಹಿರಿಯಡ್ಕ ಮೋಹನ್ ದಾಸ್ ಮತ್ತು ಮಹಿಳಾ ವಿಭಾಗದವರು ಸೇರಿ ಸನ್ಮಾನಿಸಿದರು. ಮಹಿಳಾ ವಿಭಾಗ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಶ್ರೀಮತಿ ವನಿತಾ ರವಿ ದೇವಾಡಿಗ ಮತ್ತು ಶ್ರೀಮತಿ ಜಯಂತಿ ಆರ್ ಮೊಯಿಲಿಯವರನ್ನು ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಆಗಮಿಸಿದ ಗಣ್ಯ ವ್ಯಕ್ತಿಗಳು ಸನ್ಮಾನಿಸಿದರು. ಶ್ರೀಮತಿ ಸುರೇಖಾ ಎಚ್ ದೇವಾಡಿಗರು ತುಳು ಗಾದೆಗಳು ಮತ್ತು ತುಳು ಸಾಮಾನ್ಯ ಜ್ಞಾನ ಸ್ಪರ್ಧೆಯನ್ನು ಏರ್ಪಡಿಸಿದರು. ಸಿಟಿ ಸಮನ್ವಯ ಸಮಿತಿಯ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತಾ ಎಲ್ ದೇವಾಡಿಗರು ಮಂಗಳೂರು ಉಡುಗೆ ತೊಡುಗೆಯ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದರು.

ಬೋರಿವಿಲಿ ಸಮನ್ವಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಕುಸುಮ ದೇವಾಡಿಗರು ಪ್ರಾಥಿಸಿದರೆ, ನವಿ ಮುಂಬಯಿಯ ಸಮನ್ವಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀ ಲತಾ ಎ ಶೇರಿಗಾರ್ ಮತ್ತು ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಪಿ ದೇವಾಡಿಗ, ಹೇಮಲತಾ ಶೇರಿಗಾರ್ , ಯುವ ವಿಭಾಗದ ನಿತೇಶ್ ದೇವಾಡಿಗರು ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದರು.

ಸುಮಾರು 35 ಮಹಿಳಾ ಸದ್ಯಸೆಯರು ಆಟಿಯ ವಿಶೇಷ ತಿಂಡಿಗಳಾದ ಪತ್ರೊಡೆ, ರಾಗಿ ಮಣ್ಣಿ , ಉಪ್ಪಡು ಪಚ್ಚಿರ್, ತೊಜಂಕು, ಕುಡು ಚಟ್ನಿ, ನೀರುಪ್ಪಡು, ಹಲಸಿನ ಹಣ್ಣಿನ ಕಡಬು, ಗರಿಯ, ಸೇಮೆದ ಅಡ್ಡೆ, ಕಂಚಲ ಅಂಬಡೆ, ಸರನೆ ಅಡ್ಡೆ, ಮುಂತಾದ ಅನೇಕ ರುಚಿಯಾದ ಖಾದ್ಯಗಳನ್ನು ತಯಾರಿಸಿ ತಂದಿದ್ದರು.

ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದ ಉಪಕಾರ್ಯಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗರು ಮಾಡಿದರು.