ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ "ಆಟಿದೊಂಜಿ ದಿನ” ಆಚರಣೆ.

ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದವರಿಂದ "ಆಟಿದೊಂಜಿ ದಿನ” ಆಚರಣೆ.

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಆಟಿದೊಂಜಿ ದಿನ ಕಾರ್ಯಕ್ರಮವು ಸಾಮಾಜಿಕ ಜಾಲದಲ್ಲಿ ಜುಲೈ 17 ರಂದು ಸಂಜೆ 4 ಘಂಟೆಗೆ ಜರಗಿತು. ಕಾರ್ಯಕ್ರಮವು ಶ್ರೀಮತಿ ಭವಾನಿ ಮೊಯಿಲಿಯವರ ಪ್ರಾಥನೆಯೊಂದಿಗೆ ಶುಭಾರಂಭಗೊಂಡಿತು. ದಕ್ಷಿಣ ಕನ್ನಡದ ಕೃಷಿ ಚಟುವಟಿಕೆಗಳು ಆಟಿ ಕಳಂಜೆ, ಕೃಷಿಗೆ ಬಳಸುವ ಸಾಧನೆಗಳು ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಆಹಾರಕ್ಕಾಗಿ ಬಳಸುವ ಸೊಪ್ಪು, ಉಪ್ಪು ನೀರಲ್ಲಿ ಹಾಕಿಟ್ಟ ಮಾವು, ಹಲಸು, ಅತ್ತಿಕಾಯಿ, ಮುಂತಾದುವುಗಳು ಅಡುಗೆ ಮನೆಯಲ್ಲಿ ಮುಂಚಿನ ಕಾಲದಲ್ಲಿ ಬಳಸುತ್ತಿದ್ದ ಅಡುಗೆ ಸಾಧನೆಗಳ ವೀಡಿಯೋ ಗಳನ್ನು ಅಚ್ಚು ಕಟ್ಟಾಗಿ ಶ್ರೀ ಗಿರೀಶ್ ದೇವಾಡಿಗರು ಸಾದರಪಡಿಸಿದರು.

ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿಯವರು ಕಾರ್ಯಕ್ರಮಕ್ಕೆ ಸೇರಿದ ಎಲ್ಲಾ ಬಾಂಧವರನ್ನು ಸ್ವಾಗತಿಸಿದರು. ಆಟಿದ ಒಂಜಿ ದಿನ ಅದು ಹಬ್ಬ ಅಲ್ಲ. ಈ ಸಮಯ ಕೃಷಿಕನು ತಾನು ನೆಟ್ಟ ಬತ್ತದ ಪೈರನ್ನು ನೆರೆ, ಕ್ರಿಮಿ, ಇತ್ಯಾದಿಗಳಿಂದ ಕಾಪಾಡುವ ಸಮಯ. ಈ ಸಮಯದಲ್ಲಿ ಜೀವನವು ಬಲು ಕಠಿಣವಾಗಿತ್ತು. ಒಂದೆಡೆ ಬೋರ್ಗರೆವ ಮಳೆ, ತುಂಬಿದ ಹಳ್ಳ ಕೊಳ್ಳಗಳು ರೋಗ ರುಜಿನಗಳು ಆಹಾರಕ್ಕೂ ಪರದಾಡುವಂತಹ ಸ್ಥಿತಿ ಕೊರೋನಾದ ಲಾಕ್ ಡೌನ್ ಅದೇ ಆಟಿಯ ದಿನಗಳನ್ನು ನೆನಪಿಸುವಂತಹದು. ಈ ಮಹಾಮಾರಿ ಕೊರೋನ ತೊಲಗಿ ದೇಶ ಸುಭಿಕ್ಷವಾಗಲಿ ಎಂದು ಹಾರೈಸಿದರು. ಸಂಘದ ಹತ್ತು ಸಮನ್ವಯ ಸಮಿತಿಯ ಕಾರ್ಯಾದ್ಯಕ್ಷೆಯಾರಾದ ಶಾಲಿನಿ ದೇವಾಡಿಗ - ಡೊಂಬಿವಿಲಿ, ರೇಖಾ ದೇವಾಡಿಗ - ಜೋಗೇಶ್ವರಿ, ನಿರ್ಮಲ ದೇವಾಡಿಗ - ಚೆಂಬೂರ್, ಉಷಾ ದೇವಾಡಿಗ - ಥಾನೆ , ಸುಜಯ ದೇವಾಡಿಗ - ಬಾಂಡುಪು, ಲತಾ ಶೇರಿಗಾರ್ - ನವೀ ಮುಂಬೈ, ವಿಜಯಲಕ್ಷ್ಮಿ ದೇವಾಡಿಗ - ಮೀರಾ ರೋಡ್, ಪ್ರಮೀಳಾ ಪ್ರವೀಣ್ - ಅಸಲ್ಫ, ಕುಸುಮ ದೇವಾಡಿಗ - ಬೋರಿವಿಲಿ ಮತ್ತು ಸಿಟಿ ವಲಯದ ಲತಾ ಮೊಯಿಲಿಯವರನ್ನು ತಮ್ಮ ಎಲ್ಲಾ ಮಹಿಳಾ ಕಾರ್ಯಕ್ರಮದ ಸಹಕಾರಕ್ಕಾಗಿ ಅಭಿನಂದಿಸಲಾಯಿತು.

ಪದ್ಮವಿಭೂಷಣ ಕೊಂಕಣ ರೈಲಿನ ರೂವಾರಿ ಶ್ರೀ ಜಾರ್ಜ್ ಫೆರ್ನಾಂಡಿಸ್ ರ ಜೀವನಚರಿತ್ರೆಯನ್ನು ಬರೆದ ಸುರೇಖಾ ದೇವಾಡಿಗರಿಗೆ ಸಂಘದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಇತ್ತೀಚೆಗೆ ನಿದನರಾದ ಶ್ರೀಮತಿ ಜಯಂತಿ ಪದ್ಮನಾಭ ದೇವಾಡಿಗ ಮತ್ತು ಶ್ರೀಮತಿ ಮೋಹಿನಿ ಚಂದ್ರಶೇಕರ್ ರವರಿಗೆ ಶ್ರದಾಂಜಲಿಯನ್ನು ಕೋರಲಾಯಿತು.

ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು ತುಳು ನಾಡಿನ ಕೃಷಿ ಪ್ರಧಾನವಾದ ಈ ಆಟಿ ತಿಂಗಳ ಬಗ್ಗೆ ತಿಳುವಳಿಕೆ ನೀಡುವ ಈ ಕಾರ್ಯಕ್ರಮ ಬಹು ಅರ್ಥಪೂರ್ಣ ಎಂದು ಮಹಿಳಾ ವಿಭಾಗದವರಿಗೆ ಶುಭ ಕೋರುತ್ತಾ ನಾವೆಲ್ಲರೂ ನಮ್ಮ ತುಳು ಭಾಷೆ ಮತ್ತು ತುಳು ಸಂಸ್ಕೃತಿಯನ್ನು ಉಳಿಸೋಣ ಎಂದು ಕರೆ ನೀಡಿದರು.

ಬಾರಕೂರಿನ ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ತ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್‌ದಾಸ್ ರವರು ಆಟಿ ತಿಂಗಳ ಬಗ್ಗೆ ಕೂಲಂಕುಷವಾಗಿ ವಿವರಿಸಿ, ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಆಹಾರ ಪದ್ದತಿ ಬಹಳ ಸರಳವಾದದ್ದು, ಈ ಮಳೆಗಾಲದಲ್ಲಿ ನಾವೂ ಅದನ್ನು ಪಾಲಿಸಬೇಕು. ಆಟಿ ಕಳಂಜ ಈ ಸಮಯದಲ್ಲಿ ರೋಗ ರುಜಿನಗಳನ್ನು ನಿವಾರಿಸಲು ಬರುವ ವಾಮನ ದೇವರ ಅಂಶ. ನಮ್ಮ ತುಳುನಾಡಿನ ಬೇರನ್ನು ಮರೆಯದೆ, ಸಂಘದ ಅಭಿವ್ರದಿಗೆ ಶ್ರಮಿಸೋಣ, ಎಲ್ಲರ ಬಾಳಲ್ಲಿ ಸುಖ ಶಾಂತಿ ಆರೋಗ್ಯವನ್ನು ದೇವರು ದಯಪಾಲಿಸಲಿ ಎಂದು ಹಾರೈಸಿದರು.

ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಪ್ರತಿಭಾ ದೇವಾಡಿಗರು ಆಟಿ ತಿಂಗಳಲ್ಲಿ ತುಳುನಾಡಿನ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಬೇಸಿಗೆ ಕಾಲದಲ್ಲಿ ಉಪ್ಪು ನೀರಲ್ಲಿ ಹಾಕಿಟ್ಟ, ಮಾವು, ಹಲಸು, ಹಾಗೂ ಪ್ರಕ್ರತಿಯಲ್ಲಿ ಸಿಗುವ ಕಣಿಲೆ, ಕೇಸು, ತೊಜಂಕನ್ನು ಜನರು ಆಹಾರಕ್ಕಾಗಿ ಬಳಸುತ್ತಿದ್ದರು. ಆಟಿಯ ಅಮಾವಾಸ್ಯೆ ಯಂದು ಕುಡಿವ "ಪಾಲೆದ ಕೆತ್ತೆ ಯ ಕಷಾಯ ಆರೋಗ್ಯಕ್ಕೆ ಉತ್ತಮ, ಮಾರಿ ಕಳೆಯಲು ಬರುವ ಆಟಿ ಕಳಂಜ . ರೈತನು ಈ ಸಮಯದಲ್ಲಿ ಎದುರಿಸುತ್ತಿರುವ ಕಷ್ಟಗಳು, ಹೀಗೆ ಅನೇಕ ಮಾಹಿತಿಯನ್ನು ನೀಡಿದರು.

ಜೈ ಅಂಭೆ ಚಾರಿಟಬಲ್ ಟ್ರಸ್ಟ್ ನ ಕಾರ್ಯಾದ್ಯಕ್ಷೆ ಪ್ರಭಾ ದೇವಾಡಿಗರು ಮುಂಬಯಿಯಲ್ಲಿ ಆಟಿ ತಿಂಗಳಲ್ಲಿ ಬರುವ ಘಟರಿ ಅಮಾವಾಸ್ಯೆ , ಆಷಾಢ ಏಕಾದಶಿ, ಶ್ರಾವಣ ಮಾಸದ ಬಗ್ಗೆ ವಿವರಣೆ ನೀಡಿದರು.

ಸಂಘದ ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾದ್ಯಕ್ಷೆ ಹಾಗೂ ಆಡ್ವೈಸರ್ ಜಯಂತಿ ಮೊಯಿಲಿ, ಯುವ ವಿಭಾಗದ ಕಾರ್ಯಾದ್ಯಕ್ಷ ಹರೀಶ್ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಯುವ ವಿಭಾಗದ ರಕ್ಷಿತ್ ಕೆಂಬಾರ್ ರವರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶೀಲಾವತಿ ದೇವಾಡಿಗ, ಲಕ್ಷ್ಮಿ ದೇವಾಡಿಗ, ಲೋಲಾಕ್ಷಿ ದೇವಾಡಿಗ ಮತ್ತು ಭಾರತಿ ದೇವಾಡಿಗರು ತುಳು ಪಾಡ್ದನ ವನ್ನು ಹಾಡಿದರೆ ರಮೇಶ್ ದೇವಾಡಿಗ ಐರೋಲಿ ತಮ್ಮ ಸ್ವರಚಿತ ಕವನವನ್ನು ರಾಗ ಹಾಕಿ ಸುಶ್ರಾವ್ಯವಾಗಿ ಹಾಡಿದರು

ತುಳುನಾಡಿನ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಸುಧಾಕರ್ ಎಲ್ಲೂರು ನಡೆಸಿಕೊಟ್ಟರು. ಈ ಸ್ಪರ್ದೆಯಲ್ಲಿ ನವೀ ಮುಂಬೈ ಸಮನ್ವಯ ಸಮಿತಿ ಮೊದಲ ಸ್ಥಾನ ಪಡೆದರೆ, ಆಸಲ್ಫಾ, ಚೆಂಬೂರ್, ಭಾಂದೂಪು ಮತ್ತು ಬೋರಿವಿಲಿ ಸಮನ್ವಯ ಸಮಿತಿಯವರು ದ್ವಿತೀಯ ಸ್ಥಾನ ಗೆದ್ದು ವಿಜೇತರಾದರು.

ಸುಮಾರು 45 ಮಹಿಳಾ ಸದಸ್ಯೆಯರು ಆಟಿ ಯ ವಿಶೇಷ ವ್ಯಂಜನಗಳನ್ನು ತಯಾರಿಸಿದ್ದು, ಬೋರಿವಿಲಿಯ ಲಕ್ಕ್ಶ್ಮಿ ದೇವಾಡಿಗ ಪ್ರಥಮ, ಚೆಂಬೂರಿನ ಹೇಮಲತಾ ಶೇರಿಗಾರ್ ದ್ವಿತೀಯ, ಹಾಗೂ ಮೀರಾ ರೋಡ್ ನ ಶಕುಂತಲಾ ಶೇರಿಗಾರ್ ತೃತೀಯ ಬಹುಮಾನದ ವಿಜೇತರಾದರು. ಉಪ ಕಾರ್ಯಾದ್ಯಕ್ಷೆ ಪೂರ್ಣಿಮಾ ಈ ಸ್ಪರ್ದೆ ನಡೆಸಲು ಸಹಕಾರವಿತ್ತರು. ಉಪ ಕಾರ್ಯಾದ್ಯಕ್ಷೆ ಜಯಂತಿ ದೇವಾಡಿಗ ಮತ್ತು ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ರವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

ಅತ್ಯಂತ ಅಚ್ಚುಕಟ್ಟಾಗಿ ಯುವ ವಿಭಾಗದ ಅಶ್ವಿನಿ ದೇವಾಡಿಗರು ಕಾರ್ಯಕ್ರಮವನ್ನು ನಿರೂಪಿಸಿದರೆ ಜೊತೆ ಕಾರ್ಯದರ್ಶಿ ಪ್ರತಿಭಾ ದೇವಾಡಿಗರು ಧನವಾದಗೈದರು. ಕಾರ್ಯಕ್ರಮದ ತಾಂತ್ರಿಕ ಸಹಾಯವನ್ನು ಸಂಪೂರ್ಣವಾಗಿ ಗಿರೀಶ್ ದೇವಾಡಿಗ ಮತ್ತು ಹರೀಶ್ ದೇವಾಡಿಗರು ಮಾಡಿದರು.