Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದವರಿಂದ ವರ್ಚುವಲ್ ಆಟಿದ ಒಂಜಿ ದಿನ

ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದವರಿಂದ ವರ್ಚುವಲ್ ಆಟಿದ ಒಂಜಿ ದಿನ

ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದವರಿಂದ ವರ್ಚುವಲ್ ಆಟಿದ ಒಂಜಿ ದಿನ ಸಮಾರಂಭ ಆಗಸ್ಟ್ 9 ರ ಸಾಯಂಕಾಲ 4.00 ಗಂಟೆಯಿಂದ 6.00 ಗಂಟೆಯ ವರೆಗೆ ನಡೆಯಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಲಿಂಕ್ ಮೂಲಕ ಸೇರಿದ ಎಲ್ಲಾ ಸದ್ಯಸರನ್ನು ಸ್ವಾಗತಿಸುತ್ತಾ ಈ ಸಮಾರಂಭದಿಂದ ನಾವೆಲ್ಲರೂ ಒಬ್ಬರನೊಬ್ಬರು ಪರಸ್ವರ ನೋಡಿ ಮಾತನಾಡಿದಾಗ ಬೇಟಿಯದಂತೆ ಆಗುತ್ತದೆ. ಹಾಗೂ ಸಮಾರಂಬವನ್ನು ಆರಂಬಿಸಲು ಎಲ್ಲರೂ ಸೇರಿ ಪ್ರಾಥನೆ (ಗಜಮುಖನೆ ಗಣಪತಿಯೇ) ಯನ್ನು ಮಾಡಿದರು. ಸುಮಾರು 30 ಕ್ಕಿಂತ ಅಧಿಕ ಮಹಿಳಾ ಸದ್ಯಸರು ಆರೋಗ್ಯಕರ ಆಟಿ ತಿಂಡಿ ತಿನಸು ತಯಾರಿಸಿದ್ದರು. ಅದನ್ನು ಉತ್ತಮ ರೀತಿಯಲ್ಲ್ಲಿ ಪ್ರಸ್ತುತ ಪಡಿಸಿದ ಏಳು ಮಹಿಳೆಯರು, 1) ಶ್ರೀಮತಿ ಲಕ್ಷ್ಮಿ ದೇವಾಡಿಗ, ಬೋರಿವಿಲಿ 2) ಶ್ರೀಮತಿ ರುಕ್ಮಿಣಿ ದೇವಾಡಿಗ - ಕಲ್ವ 3 ಶ್ರೀಮತಿ ಪ್ರಫುಲ್ಲ ದೇವಾಡಿಗ ಭಂದೂಪ್, 4) ಶ್ರೀಮತಿ ಅಮಿತಾ ದೇವಾಡಿಗ ಐರೋಲಿ, 5) ಶ್ರೀಮತಿ ಕುಶಾಲಕ್ಷಿ ದೇವಾಡಿಗ ಡೊಂಬಿವಿಲಿ,6) ಶ್ರೀಮತಿ ಶಕುಂತಲಾ ಶೇರಿಗಾರ್ ಮೀರಾ ರೋಡ್ ಹಾಗೂ 7) ಶ್ರೀಮತಿ ಚಂದ್ರಕಲಾ ದೇವಾಡಿಗ ಥಾನೆ ಇವರನ್ನು ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗರು ಈ ಸಮಾರಂಭದಲ್ಲಿ ಭಾಗವಹಿಸಿದ ಮಹಿಳೆಯರನ್ನು ಉದ್ದೇಶಿಸಿ ಸಾಂಕ್ರಾಮಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಆಟಿದ ಒಂಜಿ ದಿನ ಕ್ಕೆ ಸೇರಿದ ಮಹಿಳೆಯರ ಉತ್ಸಾಹವನ್ನು ಪ್ರೋತ್ಸಾಹಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿಯವರು ಆಟಿ ತಿಂಗಳಿನ ಬಗ್ಗೆ ಕೆಲವು ವಿಶೇಷ ಮಾಹಿತಿಗಳನ್ನು ತಿಳಿ ಹೇಳಿದರು. ಜೊತೆಕಾರ್ಯದರ್ಶಿ ಶ್ರೀಮತಿ ಪ್ರತಿಭಾ ದೇವಾಡಿಗ ಇವರು ಆಟಿ ತಿಂಗಳಿನ ಮಹತ್ವ ಹಾಗೂ ಸದ್ಯದ ಕೊರೋನ ಎಂಬ ಸಾಂಕ್ರಾಮಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಮುಂಬರುವ ದಿನಗಳಲ್ಲಿ ಜನಸಾಮಾನ್ಯರು ಎದುರಿಸಬೇಕಾದ ಕೆಲವು ಶೋಚನೀಯ ವಿಷಯಗಳನ್ನು ವಿವರಿಸಿ ಹೇಳಿದರು.

ಸಂಘದ ಕಾರ್ಯಕಾರಿ ಸಮಿತಿಯ ಜೊತೆಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಉಪ ಖಛಾಂಜಿ ಶ್ರೀಮತಿ ಸುರೇಖಾ ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾದ್ಯಕ್ಷೆಯಾರಾದ ಶ್ರೀಮತಿ ಪೂರ್ಣಿಮಾ ದೇವಾಡಿಗ, ಶ್ರೀಮತಿ ಜಯಂತಿ ದೇವಾಡಿಗ, ಸಲಹೆಗಾರ್ತಿ ಶ್ರೀಮತಿ ಜಯಂತಿ ಮೊಯಿಲಿ ಇವರೆಲ್ಲರೂ ಸಂದರ್ಭೋಚಿತವಾಗಿ ಮಾತನಾಡಿದರು.
ಜ಼ೂಮ್ಅಪ್ ವೀಡಿಯೋ ಕಾನ್ಫರೆನ್ಸ್ನ ತಾಂತ್ರಿಕ ಸಹಾಯವನ್ನು ಉಪಾದ್ಯಕ್ಷೆ (ಸಾಂಸ್ಕೃತಿಕ ವಿಭಾಗ) ಶ್ರೀಮತಿ ಪೂರ್ಣಿಮಾ ದೇವಾಡಿಗ ಇವರು ಮಾಡಿದರೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಎಲ್ಲಾ ಸದ್ಯಸರಿಗೆ ಮನಪೂರ್ವಕ ಧನ್ಯವಾದವನಿತ್ತರು