Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಹಳದಿ-ಕುಂಕುಮ ಕಾರ್ಯಕ್ರಮ. ಅಸಲ್ಫಾ.

ದೇವಾಡಿಗ ಸಂಘ ಮುಂಬಯಿ: ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಹಳದಿ-ಕುಂಕುಮ ಕಾರ್ಯಕ್ರಮ. ಅಸಲ್ಫಾ.

ಫೆ. 18:ದೇವಾಡಿಗ ಸಂಘ ಮುಂಬಯಿ ಇದರ ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಹಳದಿ-ಕುಂಕುಮ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವು ಅಸಲ್ಫಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಹರೀಶ್ ದೇವಾಡಿಗರ ಅಧ್ಯಕ್ಷತೆಯಲ್ಲಿ (11-02-2024) ಇಲ್ಲಿಯ ಶ್ರೀ ಕ್ಷೇತ್ರ ದತ್ತಾತ್ರೇಯ ದುರ್ಗಂಬಿಕಾ ದೇವಸ್ಥಾನ ಇಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಈ ಕಾರ್ಯಕ್ರಮಕ್ಕೆ ಸಂಘದ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ ಮತ್ತು ಚಲನ ಚಿತ್ರ ನಟ ಮತ್ತು ಸ್ಟಂಟ್ ಮ್ಯಾನ್ ಶ್ರೀ ಸುರೇಶ್ ದೇವಾಡಿಗ ಇವರು ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯಿಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ರಾಕೇಶ್ ದೇವಾಡಿಗ, ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ಜಯ ದೇವಾಡಿಗ, ವಲಯದ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಪ್ರಶಾಂತ್ ಮೊಯಿಲಿ, ವಲಯದ ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ವೇದ್ ಪ್ರಕಾಶ್ ಮೊಯಿಲಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಕ್ರೀಡಾ ವಿಭಾಗದ ಕಾಯಾಧ್ಯಕ್ಷರಾದ ಶ್ರೀ ಮೋಹನದಾಸ್ ಗುಜರನ್ ಎಲ್ಲರನ್ನು ಪರಿಚಯಿಸಿ ಸ್ವಾಗತ ಕೋರಿದರು. ಶ್ರೀಮತಿ ಶೀಲವತಿ ಎಂ. ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಅತಿಥಿಗಳು ಸೇರಿ ದೀಪ ಪ್ರಜ್ವಲಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಲಯದ ಯುವ ವಿಭಾಗದ ಸದಸ್ಯರು ಮನೋರಂಜನೆಯ ಅಂಗವಾಗಿ ವಿವಿಧ ನ್ರತ್ಯ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಈ ಸಂದರ್ಭದಲ್ಲಿ ತನ್ನ ಅಭಿಪಾಯ್ವನ್ನು ವ್ಯಕ್ತ ಪಡಿಸಿದ ಶ್ರೀಮತಿ ಮಾಲತಿ ಮೊಯಿಲಿ ಇವರು ಸೇರಿದ ಎಲ್ಲ ಮಹಿಳೆಯರಿಗೆ ಶುಭಹಾರೈಸಿ ಉತ್ತಮ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದಕ್ಕೆ ಸಂತೋಷ ವ್ಯಕ್ತ ಪಡಿಸಿದರು. ಅಂತೆಯೇ ಸಂಘದ ಮುಂಬರುವ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಎಲ್ಲರೂ ಆದಷ್ಟು ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರು ಮಾತನಾಡುತ್ತಾ ವಲಯದ ಕಾರ್ಯಕ್ರಗಳಿಗೆ ಸಂತೋಷ ವ್ಯಕ್ತ ಪಡಿಸಿ ತನ್ನ ಸಂಪೂರ್ಣ ಸಹಕಾರ ಇರುವುದಾಗಿ ಆಶ್ವಾಸನೆ ನೀಡಿದರು. ಕಾರ್ಯಕ್ರಮದ ಆಯೋಜನೆಗೆ ಸಂತೋಷ ವ್ಯಕ್ತ ಪಡಿಸಿದ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ವಲಯದ ಕಾರ್ಯವೈಖರಿಯನ್ನು ಕೊಂಡಾಡಿದರು. ವಿಶೇಷ ಅತಿಥಿಗಳಾದ ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ ಶ್ರೀ ಸುರೇಶ್ ದೇವಾಡಿಗ ಇವರು ಕಾರ್ಯಕ್ರಮದ ಕ್ಷೋಭೆ ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು

ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ ಸೇರಿದ ಎಲ್ಲರಿಗೂ ಶುಭ ಹಾರೈಸಿ ಮಹಿಳಾ ವಿಭಾಗ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸದಸ್ಯರ ಮತ್ತು ಸಮಾಜ ಬಾಂಧವರ ಉತ್ಸಾಹ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಮುಂಬರುವ ಶತಮಾನೋತ್ಸವದಲ್ಲಿ ಎಲ್ಲರೂ ಹೆಚ್ಚಿನ ಕಾರ್ಯ ಚಟುವಟಿಕೆಗಳಲ್ಲಿ ಸಹಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು. ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ಜಯ ದೇವಾಡಿಗ ಮಾತನಾಡಿ ವೇದಿಕೆಯಲ್ಲಿನ ಗಣ್ಯರು ಮತ್ತು ನೆರೆದ ಸಮಾಜ ಬಾಂಧವರನ್ನು ಸ್ವಾಗತಿಸಿ ಶುಭ ಹಾರೈಸಿದರು ಅಲ್ಲದೆ ಈ ಕ್ರಾಯಕ್ರಮದ ಯಶಸ್ಸಿಗೆ ದುಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತ ಪಡಿಸಿದರು. ಶ್ರೀಮತಿ ಕಸ್ತೂರಿ ಪ್ರಶಾಂತ್ ಮೊಯಿಲಿ, ಶ್ರೀ ವೇದ್ ಪ್ರಕಾಶ್ ಮೊಯಿಲಿ ಇವರೂ ಸಮಯೋಚಿತವಾಗಿ ಮಾತನಾಡಿದರು. ವಲಯದ ಕಾರ್ಯಾಧ್ಯಕ್ಷ ಶ್ರೀ ಹರೀಶ್ ದೇವಾಡಿಗ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಸೇರಿದ ಎಲ್ಲಾ ಬಾಂಧವರಿಗೆ ಶುಭ ಕೋರಿ ವಲಯವು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಮತ್ತು ಉಪಸ್ಥಿತಿ ಅಗತ್ಯ ಎಂದು ಹೇಳುತ್ತಾ ಅಂದಿನ ಕಾರ್ಯಕ್ರಮಕ್ಕೆ ಸೇರಿದ ಎಲ್ಲ ಅತಿಥಿಗಳು, ಸಂಘದ ವ್ಯವಸ್ಥಾಪಕ ಮಂಡಳಿ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಗಾಗಿ ಕೃತಜ್ಞತೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ, ಮತ್ತು ಶ್ರೀ ಸುರೇಶ್ ದೇವಾಡಿಗ ಮತ್ತು ಅವರ ಧರ್ಮಪತ್ನಿ ಪೂರ್ಣಿಮಾ ದೇವಾಡಿಗ ಇವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು. ಶ್ರೀಮತಿ ವಿಮಲಾ ದೇವಾಡಿಗ ಮತ್ತು ಶ್ರೀ ಯೋಗೇಶ್ ದೇವಾಡಿಗ ಇವರು ಅತಿಥಿಗಳ ಪರಿಚಯ ಓದಿ ಹೇಳಿದರು. ಅಲ್ಲದೆ ವಲಯದಲ್ಲಿನ ನವ ದಂಪತಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತಾ ಅವರಿಗೆ ಆದರದ ಗೌರವ ನೀಡಲಾಯಿತು.

ಸನ್ಮಾನಕ್ಕೆ ಉತ್ತರಿಸಿದ ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ ಇವರು ತನ್ನ ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಸಮಾಜ ಬಾಂಧವರ ಎಲ್ಲಾ ಕಾರ್ಯಕ್ರಮಗಳಿಗೆ ತನ್ನ ಸಂಪೂರ್ಣ ಬೆಂಬಲ ಇರುವುದಾಗಿ ಆಶ್ವಾಸನೆ ನೀಡಿದರು. ಹಾಗೆಯೇ ಇನೋರ್ವ ಅತಿಥಿ ಶ್ರೀ ಸುರೇಶ್ ದೇವಾಡಿಗ ಇವರು ತನ್ನ ಸನ್ಮಾನಕ್ಕೆ ಉತ್ತರಿಸುತ್ತಾ, ಸಮಾಜ ಬಾಂಧವರು ತನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸೇರಿದ ಸಮಾಜ ಬಾಂಧವರನ್ನು ಕಂಡು ಸಂತೋಷ ವ್ಯಕ್ತ ಪಡಿಸಿದರು. ತನ್ನ ಚಿತ್ರರಂಗದ ಅನುಭವವನ್ನು ಬಿತ್ತರಿಸಿದ ಅವರು ತಾನು ಖಳನಾಯಕ ಮತ್ತು ಸ್ಟಂಟ್ ಮ್ಯಾನ್ ಆಗಿ ಚಿತ್ರರಂಗಲ್ಲಿ ಕಾಣಿಸಿಕೊಂಡು ಈ ಮಟ್ಟಕ್ಕೆ ತಲುಪಿರುವುದು ನಾವು ನಂಬಿದ ದೈವ ದೇವರು ಮತ್ತು ಸಮಾಜ ಬಾಂಧವರ ಆಶೀರ್ವಾದದಿಂದ ಎಂದು ತನ್ನ ಮನದಾಳದ ಮಾತುಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಿ ಹಳದಿ ಕುಂಕುಮ ಸಮಾರಂಭದ ವಿವಿಧ ಪದ್ಧತಿಗಳಿಂದ ಸಂಭ್ರಮಿಸಿದರು. ಎಲ್ಲರಿಗೂ ಸಿಹಿತಿಂಡಿ ಹಂಚಿ ಪ್ರೀತಿಭೋಜನ ವಿತರಿಸಿದರು. ಈ ಕಾರ್ಯಕ್ರಮದ ಯಶಸ್ವಿಗೆ ಸರ್ವಶ್ರೀ ಸಂಜೀತ್ ದೇವಾಡಿಗ, ಅಕ್ಷಯ್ ದೇವಾಡಿಗ, ವಿಶಾಲ್ ದೇವಾಡಿಗ, ಚಂದ್ರ ದೇವಾಡಿಗ, ಆಯುಷ್ ದೇವಾಡಿಗ, ಅತಿಕ್ಷಾ ದೇವಾಡಿಗ, ಮನ್ವಿತ್ ದೇವಾಡಿಗ, ರೇಖಾ ಜಿ. ದೇವಾಡಿಗ, ಭವಾನಿ ಮೊಯಿಲಿ, ಲಿಲಾವತಿ ದೇವಾಡಿಗ, ರಾಜೀವಿ ದೇವಾಡಿಗ, ಜಯಲಕ್ಷ್ಮಿ ದೇವಾಡಿಗ, ಕಸ್ತೂರಿ ಮೊಯಿಲಿ, ಹರ್ಷ ದೇವಾಡಿಗ, ಅಪೇಕ್ಷ ದೇವಾಡಿಗ, ವಿದ್ಯಾ ದೇವಾಡಿಗ, ಧ್ವನಿ ದೇವಾಡಿಗ, ಲಲಿತಾ ದೇವಾಡಿಗ ಶ್ರುತಿ ದೇವಾಡಿಗ ಮೊದಲಾದವರು ಶ್ರಮಿಸಿದರು. ಶ್ರೀ ಮೋಹನದಾಸ್ ಗುಜರನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು.