Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬೈ ಘಾಟ್ಕೋಪರ್- ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯ ಆಶ್ರಯದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ಆಚರಣೆ

ದೇವಾಡಿಗ ಸಂಘ ಮುಂಬೈ ಘಾಟ್ಕೋಪರ್- ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯ ಆಶ್ರಯದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ಆಚರಣೆ

ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘ ಸಂಸ್ಥೆಗಳಲ್ಲಿ ಒಂದಾದ ದೇವಾಡಿಗ ಸಂಘದ ಘಾಟ್ಕೋಪರ್- ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 16ರಂದು ಪೊವಾಯಿ ಲೇಕ್ ಹೋಮ್ ಕ್ಲಬ್ನಲ್ಲಿ ಜರಗಿತು.

ಪ್ರಾರಂಭದಲ್ಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಅಧ್ಯಕ್ಷರಾದ ಯೋಗೇಶ್ ಎಸ್. ದೇವಾಡಿಗರು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ ಮುಖ್ಯ ಅತಿಥಿಯಾಗಿದ್ದು, ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡುತ್ತಾ, ಯುವ ಜನರು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು, ಅರಸಿನ ಕುಂಕುಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಮಹಿಳಾ ವಿಭಾಗದವರಿಗೆ ಅಭಿನಂದಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಎಚ್. ಮೋಹನ್ದಾಸ್ ತಮ್ಮ ಅನಿಸಿಕೆ ತಿಳಿಸುತ್ತಾ, ಸಂಘದ ಕಾರ್ಯ, ಯೋಜನೆಗಳು ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತಾಗುವಲ್ಲಿ ಪ್ರಾದೇಶಿಕ ಸಮಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಇನ್ನೋರ್ವ ಮಾಜಿ ಅಧ್ಯಕ್ಷರಾದ ವಾಸು ಎಸ್. ದೇವಾಡಿಗರು ಮಾತನಾಡುತ್ತ, ಸಂಘದ ಸ್ವಾಧೀನದಲ್ಲಿರುವ ಅಕ್ಷಯ ಕೋ. ಆಪರೇಟಿವ್ ಸೊಸೈಟಿಯ ಮೂಲಕ ಸಮಾಜ ಬಾಂಧವರು ವ್ಯವಹರಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ಕೆ.ಮೋಹನದಾಸ್, ಗೋಪಾಲ್ ಮೊಯಿಲಿ, ಗೌ. ಪ್ರ. ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗರು ಸಂದರ್ಭೋಚಿತವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಯೋಗೇಶ್ ದೇವಾಡಿಗರು ಮಾತನಾಡುತ್ತಾ, ಘಾಟ್ಕೋಪರ್ - ಅಸಲ್ಫಾ ಪ್ರಾದೇಶಿಕ ಸಮಿತಿಯು ಹಮ್ಮಿಕೊಳ್ಳುವ ಎಲ್ಲಾ ಸಮಾಜಪರ ಚಟುವಟಿಕೆಗಳಿಗೆ ಪರಿಸರದ ಸಮಾಜ ಬಾಂಧವರ ಒಗ್ಗಟ್ಟು ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ ಎಂದು ಹೇಳಿದರು.

ನಂತರ ಘಾಟ್ಕೋಪರ್ - ಅಸಲ್ಫಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಪ್ರವೀಣ್ ದೇವಾಡಿಗ, ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಆರ್. ಮೊಯಿಲಿ ಜತೆ ಸೇರಿ ಅರಸಿನ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳು,ಇತರ ಮಹಿಳೆಯರು ಪರಸ್ಪರ ಅರಸಿನ ಕುಂಕುಮ ವಿನಿಮಯಿಸಿ ಶುಭಕೋರಿದರು. ಈ ಸಂದರ್ಭ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಜಯಂತಿ ಎಂ. ದೇವಾಡಿಗ, ಸುರೇಖಾ ಹೆಚ್. ದೇವಾಡಿಗ, ರಾಕೇಶ್ ಬಿ. ದೇವಾಡಿಗ, ಭರತೇಶ್ ದೇವಾಡಿಗರನ್ನು ಸನ್ಮಾನಿಸಲಾಯಿತು. ಪ್ರಮೀಳಾ ಶೇರಿಗಾರ್, ಮಾಲತಿ ಜೆ. ಮೊಯಿಲಿ, ಪ್ರತಿಭಾ ದೇವಾಡಿಗ ವೇದಿಕೆಯಲ್ಲಿದ್ದರು. ವಲಯದ ಕಾರ್ಯದರ್ಶಿ ಮೋಹನದಾಸ್ ಗುಜರನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ವಲಯದ ಸದಸ್ಯರಿಂದ ಹಾಗೂ ಯುವ ವಿಭಾಗದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು. ಪ್ರವೀಣ್ ದೇವಾಡಿಗ, ಆತಿಷ್ ದೇವಾಡಿಗ, ವಿಶಾಲ್ ದೇವಾಡಿಗರ ನೃತ್ಯ ವಿಶೇಷವಾಗಿ ಆಕರ್ಷಿಸಿತು.