Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ.

ದೇವಾಡಿಗ ಸಂಘ ಮುಂಬಯಿ: ಅಸಲ್ಫಾ ಪ್ರಾದೇಶಿಕ ಸಮಿತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ.
ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಅಗತ್ಯ: ಪ್ರವೀಣ್ ಎನ್. ದೇವಾಡಿಗ

ಅಸಲ್ಫಾ, ಆ. 4: ನಮ್ಮ ಸಂಘವು ಶತಮಾನೋತ್ಸವ ಆಚರಿಸುವ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಂಚಿಕೊಂಡಿದೆ. ಎಲ್ಲಾ ಸದಸ್ಯರ ಸಹಕಾರ ಇದ್ದರೆ ಮಾತ್ರಾ ನಾವು ಹಮ್ಮಿಕೊಂಡ ಯೋಜನೆಗಳು ಯಶಸ್ವಿಯಾಗುತ್ತವೆ. ಸಂಘದ ಎಲ್ಲಾ ಸದಸ್ಯರು ತಮ್ಮ ಸಂಘಕ್ಕಾಗಿ ಮತ್ತು ಸದಸ್ಯರನ್ನು ಒಟ್ಟುಗೂಡಿಸುವ ಉದ್ದೇಶದಿಂದ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳನ್ನು ಬೆಳೆಸಬೇಕು. ನಮಗೆ ಸಂಘದ ಶತಮಾನೋತ್ಸವ ಆಚರಿಸುವ ಯೋಗ ಬಂದಿದೆ. ಅದನ್ನು ಯಶಸ್ವಿ ಗೊಳಿಸಲು ಎಲ್ಲಾ ಸದಸ್ಯರ ಸಹಕಾರದ ಅಗತ್ಯವಿದೆ ಎಂದು ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಇಲ್ಲಿ ಇಂದು ಹೇಳಿದರು.

ದೇವಾಡಿಗ ಸಂಘ ಮುಂಬಯಿ ಇದರ ಅಸಲ್ಫಾ ಪ್ರಾದೇಶಿಕ ಸಮಿತಿಯ ವತಿಯಿಂದ;ಆಟಿಡ್ ಒಂಜಿ ದಿನ; ಕಾರ್ಯಕ್ರಮವು ಪ್ರದೇಶದ ಕಾರ್ಯಾಧ್ಯಕ್ಷರಾದ ಶ್ರೀ ಹರೀಶ್ ದೇವಾಡಿಗರ ಮುಂದಾಳುತ್ವದಲ್ಲಿ ಇಂದು ಇಲ್ಲಿಯ ಶ್ರೀ ಕ್ಷೇತ್ರ ದತ್ತಾತ್ರೇಯ ದುರ್ಗಂಬಿಕಾ ದೇವಸ್ಥಾನದ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಈ ಸಂದರ್ಭದಲ್ಲಿ ಪ್ರಾಮುಖ್ಯವಾಗಿ ಉಪಸ್ಥಿತರಿದ್ದ ಸ್ವಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಈ ಮೇಲಿನ ಮಾತುಗಳನ್ನು ಹೇಳಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯಿಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರತಿಭಾ ಜಿ. ದೇವಾಡಿಗ, ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ಜಯ ದೇವಾಡಿಗ, ಮಾಜಿ ಅಧ್ಯಕ್ಶರುಗಳಾದ ಶ್ರೀ ಮೋಹನ ದಾಸ್ ಹಿರಿಯಡ್ಕ, ಶ್ರೀ ವಾಸು ಎಸ್. ದೇವಾಡಿಗ, ರವಿ ಎಸ್. ದೇವಾಡಿಗ, ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಎಲ್ಲೂರು, ಜೊತೆ ಖಜಾಂಚಿ ಶ್ರೀ ಸುರೇಶ್ ದೇವಾಡಿಗ, ವಲಯದ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಪ್ರಶಾಂತ್ ಮೊಯಿಲಿ, ವಲಯದ ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ವೇದ್ ಪ್ರಕಾಶ್ ಮೊಯಿಲಿ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಭವಾನಿ ಮೊಯಿಲಿ ಇವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಸಂಘದ ಅಧ್ಯಕ್ಶರು ಮತ್ತು ಗಣ್ಯರು ಸೇರಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಶರಾದ ಶ್ರೀ ಮೋಹನ ದಾಸ್ ಹಿರಿಯಡ್ಕ ಮಾತನಾಡಿ ವಲಯದ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಂಬರುವ ಸಂಘದ ಶತಮಾನೋತ್ಸವದ ಬಗ್ಗೆ ಸವಿಸ್ತರವಾದ ಮಾಹಿತಿ ನೀಡಿ ಅದನ್ನು ಯಶಸ್ವಿಗೊಳಿಸಲು ಪ್ರತೀ ಓರ್ವ ಸದಸ್ಯರು ತಮ್ಮಿಂದ ಆದಷ್ಟು ಸಹಕಾರ ಮಾಡಬೇಕು ಎಂದು ಕೇಳಿಕೊಂಡರು. ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ ಸೇರಿದ ಎಲ್ಲರಿಗೂ ಶುಭ ಹಾರೈಸಿ ಮಹಿಳಾ ವಿಭಾಗ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸದಸ್ಯರ ಮತ್ತು ಸಮಾಜ ಬಾಂಧವರ ಉತ್ಸಾಹ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಮುಂಬರುವ ಶತಮಾನೋತ್ಸವದಲ್ಲಿ ಸಮಾಜದ ಎಲ್ಲರೂ ಮತ್ತು ಯುವಕರು ಹೆಚ್ಚಿನ ಕಾರ್ಯ ಚಟುವಟಿಕೆಗಳಲ್ಲಿ ಸಹಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು. ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯ್ಲಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿ ಉತ್ತಮವಾದ ಅಡುಗೆ ತಯಾರಿಸಿ ತಂದು ಕಾರ್ಯಕ್ರಮ ಯಶಸ್ವಿಗೊಳೊಸಿದ್ದೀರಿ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಮಾತನಾಡಿ ಹಿಂದಿನ ಸಮಯಗಳಲ್ಲಿ ವಿಜ್ಞಾನ ಮುಂದುವರಿಯದ ಸಮಯ ಮತ್ತು ಬಡತನತದ ಸಮಯದ್ಲಲಿ ನಮ್ಮ ಪೂರ್ವಜರು ಗಿಡಮೂಲಿಕೆಯ ಔಷಧ ಮತ್ತು ನಿಸರ್ಗದಿಂದ ಪಡೆದ ಅಡುಗೆ ಪದಾರ್ಥಗಳನ್ನ ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದರು.

ಇಂದಿನವರು ಮಾರುಕಟ್ಟೆಯಲ್ಲಿ ಸಿಗುವ ರುಚಿಯಾದ ಮತ್ತು ಬಣ್ಣ ಬಣ್ಣದ ತಿಂಡಿ ತಿನಿಸುಗಳಿಗೆ ಮಾರುಹೋಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾ ನಾವು ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದ್ಕಕಾಗಿ ಕ್ರಮಬದ್ಧವಾದ ಮನೆಯಲ್ಲಿ ತಯಾರಿಸಿದ ಆಹಾರ, ಸರಿಯಾದ ವ್ಯಾಯಾಮ ಮಾಡುತ್ತಿದ್ದರೆ ನಮ್ಮ ಅರೋಗ್ಯ ಚೆನ್ನಾಗಿರುತ್ತದೆ ಎಂದರು. ಶ್ರೀಮತಿ ಪ್ರತಿಭಾ ಗಣೇಶ್ ದೇವಾಡಿಗ ಮಾತನಾಡಿ ಆಟಿ ತಿಂಗಳ ವಿಶೇಷತೆಯ ಬಗ್ಗೆ ಅಚ್ಚುಕಟ್ಟಾದ ಮಾಹಿತಿ ನೀಡಿದರು.ನಮ್ಮ ಹಿರಿಯರು ಅಂದಿನ ದಿನಗಳಲ್ಲಿ ಕಷ್ಟದ ಕಾಲ ಇದ್ದರೂ ತಮ್ಮ ಆಚರಣೆ, ಸಂಪ್ರದಾಯಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರು ಮತ್ತು ಆರೋಗ್ಯವಾಗಿರುತ್ತಿದ್ದರು. ಆದ್ದರಿಂದ ಇಂದಿನ ಪೀಳಿಗೆಗೆ ಅಂದಿನ ಪರಂಪರೆ ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಶ್ರೀ ಸುಧಾಕರ ಎಲ್ಲೂರು ಇವರು ಮಾತನಾಡಿ ಸಮಾಜದ ಮಕ್ಕಳು ಸುಶಿಕ್ಷಿತವಾದರೆ ಸಮಾಜ ಬಲಿಷ್ಠವಾಗುವುದು. ಅದಕ್ಕೆ ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಸಂಘದಿಂದ ಕೊಡಲ್ಪಡುವ ಶೈಕ್ಷಣಿಕ ಸಹಾಯದ ಲಾಭ ಪಡೆದು ಎಲ್ಲರೂ ಉತ್ತಮ ವಿದ್ಯವಂತರಾಗಿ ಸಮಾಜವನ್ನು ಬಲಪಡಿಸಬೇಕು ಎಂದು ಹೇಳಿದರು. ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ಜಯ ದೇವಾಡಿಗ ಮಾತನಾಡಿ ವೇದಿಕೆಯಲ್ಲಿನ ಗಣ್ಯರು ಮತ್ತು ನೆರೆದ ಸಮಾಜ ಬಾಂಧವರನ್ನು ಸ್ವಾಗತಿಸಿ ಶುಭ ಹಾರೈಸಿದರು ಅಲ್ಲದೆ ಈ ಕ್ರಾಯಕ್ರಮದ ಯಶಸ್ಸಿಗೆ ದುಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತ ಪಡಿಸಿದರು. ಶ್ರೀಮತಿ ಕಸ್ತೂರಿ ಪ್ರಶಾಂತ್ ಮೊಯಿಲಿ, ಶ್ರೀ ವೇದ್ ಪ್ರಕಾಶ್ ಮೊಯಿಲಿ ಇವರೂ ಸಮಯೋಚಿತವಾಗಿ ಮಾತನಾಡಿದರು.

ವಲಯದ ಕಾರ್ಯಾಧ್ಯಕ್ಷ ಶ್ರೀ ಹರೀಶ್ ವಿ. ದೇವಾಡಿಗ ಇವರು ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ವಲಯವು ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳಿಗೆ ಬಾಂಧವರ ಉತ್ತಮ ಮತ್ತು ಹೊಂದಾಣಿಕೆಯ ಸಹಕಾರಕ್ಕೆ ಧನ್ಯವಾದ ನೀಡಿ ಮುಂಬರುವ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಅಲ್ಲದೆ, ಕಾರ್ಯಕ್ರಮಕ್ಕೆ ಸೇರಿದ ಎಲ್ಲ ಅತಿಥಿಗಳು, ಸಂಘದ ವ್ಯವಸ್ಥಾಪಕ ಮಂಡಳಿ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಗಾಗಿ ಕೃತಜ್ಞತೆ ವ್ಯಕ್ತ ಪಡಿಸಿದರು. ವಲಯದ ಉಪಕಾರ್ಯಧ್ಯಕ್ಷೆ ಶ್ರೀಮತಿ ಶ್ರೀಮತಿ ಮಲ್ಲಿಕಾ ಶ್ರೀಯಾನ್ ಇವರು ಸದಸ್ಯರು ತಯಾರಿಸಿತಂದ ಆಟಿ ತಿಂಗಳ ವಿಶೇಷ ಅಡುಗೆ ಮತ್ತು ತಿಂಡಿ ತಿನಿಸುಗಳ ಪರಿಚಯ ನೀಡಿದರು. ಸರ್ವಶ್ರೀ ಚಿದಾನಂದ ಮೊಯ್ಲಿ, ಮೋಹನದಾಸ್ ಶ್ರೀಯಾನ್,ಶ್ರೀ ಸಂಜೀತ್ ದೇವಾಡಿಗ, ಪ್ರಶಾಂತ್ ಮೊಯ್ಲಿ, ಚಂದ್ರ ಮೊಯ್ಲಿ, ವೇದ್ ಪ್ರಕಾಶ್ ಮೊಯ್ಲಿ, ಲತೇಶ್ ದೇವಾಡಿಗ, ರೇಖಾ ದೇವಾಡಿಗ, ಕಸ್ತೂರಿ ಮೊಯಿಲಿ, ಮಲ್ಲಿಕಾ ಶ್ರೀಯಾನ್, ಶುಭ ದೇವಾಡಿಗ, ರಾಜೀವಿ ದೇವಾಡಿಗ, ಗೀತಾ ದೇವಾಡಿಗ, ಭವಾನಿ ಮೊಯಿಲಿ, ವಿದ್ಯಾ ದೇವಾಡಿಗ, ಆಯುಷ್ ದೇವಾಡಿಗ, ಸುಜಾತ ದೇವಾಡಿಗ, ಆತಿಷ್ ದೇವಾಡಿಗ ಮೊದಲಾದವರು ಕಾರ್ಯಕಮದ ಯಶಸ್ವಿಗೆ ಶ್ರಮಿಸಿದರು. ಶ್ರೀ ಮೋಹನ ದಾಸ್ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು ಮತ್ತು ವಂದಿಸಿದರು.