Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯಿಂದ "ಆಟಿಡೊಂಜಿ ದಿನ” ಕಾರ್ಯಕ್ರಮದ ಆಯೋಜನೆ

ದೇವಾಡಿಗ ಸಂಘ ಮುಂಬಯಿ: ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯಿಂದ "ಆಟಿಡೊಂಜಿ ದಿನ” ಕಾರ್ಯಕ್ರಮದ ಆಯೋಜನೆ

ಮುಂಬಯಿ, ಜುಲೈ 30 : ದೇವಾಡಿಗ ಸಂಘ ಮುಂಬಯಿ ಇದರ ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯ "ಆಟಿಡೊಂಜಿ ದಿನ" ಕಾರ್ಯಕ್ರಮವು ಇಲ್ಲಿಯ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನದ ಸಭಾಗ್ರಹದಲ್ಲಿ ಬಹಳ ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಹರೀಶ್ ಎ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಜರಗಿತು.

ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ, ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ ಜೆ. ಮೊಯ್ಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ವಾಸು ಎಸ್. ದೇವಾಡಿಗ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಮಾಜಿ ಅಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಜೊತೆ ಕಾರ್ಯದರ್ಶಿ ನಿತೇಶ್ ದೇವಾಡಿಗ, ಶಿಕ್ಶಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುಧಾಕರ್ ಎಲ್ಲೂರು, ಪ್ರಾದೇಶಿಕ ಸಮನ್ವಯ ಸಮಿತಿಗಳ ಸಮನ್ವಯಕರು ಶ್ರೀ ಜಯ ಎಲ್. ದೇವಾಡಿಗ, ಜೊತೆ ಖಜಾಂಚಿ ಸುರೇಶ ದೇವಾಡಿಗ, ಯುವವಿಭಾಗದ ಕಾರ್ಯಧ್ಯಕ್ಷ ನ್ಯಾಯವಾದಿ ಬ್ರಿಜೇಶ್ ನಿಟ್ಟೇಕರ್, ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ಜೆ. ಮೊಯ್ಲಿ, ಯುವವಿಭಾಗದ ಕಾರ್ಯಧ್ಯಕ್ಷ ವೇದ್ ಪ್ರಕಾಶ್ ಮೊಯ್ಲಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ವಿಮಲಾ ದೇವಾಡಿಗ ಇವರು ಹಾಡಿದ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ಅಸಲ್ಫಾ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಕ್ರಮಗಳನ್ನು ಪ್ರಶಂಸಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಮಿತಿಯ ಮಹಿಳಾ ವಿಭಾಗದ ಉತ್ಸಾಹ ಮತ್ತು ಯುವ ವಿಭಾಗದ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿಸಿದ ಅಧ್ಯಕ್ಷರು, ಸಂಘವು ಶತಮಾನೋತ್ಸವ ಆಚರಣೆಯ ಅಂಚಿನಲ್ಲಿದ್ದು, ಸಂಘಕ್ಕೆ ಹೆಚ್ಚಿನ ಸಂಖ್ಯೆಯ ಸದಸ್ಯತ್ವದ ಆವಶ್ಯಕತೆ ಇದೆ. ಆದುದರಿಂದ ಎಲ್ಲರೂ ಸಂಘದ ಸದಸ್ಯತ್ವವನ್ನು ಹೆಚ್ಚಿಸಬೇಕು ಎಂದು ಹೇಳಿದರು. ಅಲ್ಲದೆ, ಈ ನಿಟ್ಟಿನಲ್ಲಿ ಸಂಘದ ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಗಳು ಕಾರ್ಯಪ್ರವರತ್ತಿಯಾಗಬೇಕು ಎಂದು ಹೇಳುತ್ತಾ ಯುವ ವಿಭಾಗವು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ವಿನಂತಿಸಿಕೊಂಡರು.
ಕಾರ್ಯಕ್ರಮಕ್ಕೆ ಶುಭ ಕೋರಿದ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಮಾಲತಿ ಜೆ. ಮೊಯಿಲಿ ಇವರು ವಲಯದ ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಪ್ರಶಂಶಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟಿ ತಿಂಗಳ ತಿಂಡಿ ತಿನಿಸುಗಳನ್ನು ತಯಾರಿಸಿ ತಂದು ತಮ್ಮ ತಮ್ಮ ಜವಾಬ್ದಾರಿಗಳನ್ನು ದಕ್ಷತೆಯಿಂದ ಪಾಲಿಸಿದುದುಕ್ಕಾಗಿ ಎಲ್ಲರನ್ನೂ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರು ಮಾತನಾಡಿ ಪ್ರಾದೇಶಿಕ ಸಮನ್ವಯ ಸಮಿತಿಗಳ ಯಾವುದೇ ಕಾರ್ಯಕ್ರಮಗಳಿಗೆ ಸಂಘದ ಸಂಪೂರ್ಣ ಸಹಕಾರ ಇರುವುದಾಗಿ ಆಸ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ ಶ್ರೀ ವಾಸು ಎಸ್. ದೇವಾಡಿಗ ಇವರು ಸಂಘದ ಅಕ್ಷಯ ಸಹಕಾರಿ ಹಣಕಾಸು ಸಂಸ್ಥೆಯು ನೀಡುವ ಸಾಲ ಮತ್ತು ಇನ್ನಿತರ ಯೋಜನೆಗಳ ಲಾಭವನ್ನು ಸದಸ್ಯರು ಪಡೆದುಕೊಳ್ಳುವಂತೆ ವಿನಂತಿಸಿಕೊಂಡರು. ಶ್ರೀ ರವಿ ದೇವಾಡಿಗರು ಮಾತನಾಡುತ್ತ ಸಂಘವು ಕಷ್ಟಪಟ್ಟು ನಿರ್ಮಿಸಿದ ದೇವಾಡಿಗ ಭವನವನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಸದಸ್ಯರ ಸಹಕಾರದ ಅವಶ್ಯಕತೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ತಮ್ಮ ಕಾರ್ಯಕ್ರಮಗಳನ್ನು ದೇವಾಡಿಗ ಭವನದಲ್ಲಿ ಹಮ್ಮಿಕೊಳ್ಳುವಂತೆ ವಿನಂತಿಸಿಕೊಂಡರು. ವೇದಿಕೆಯಲ್ಲಿ ಆಸೀನರಿದ್ದ, ಶ್ರೀ ಸುಧಾಕರ್ ಎಲ್ಲೂರು, ಶ್ರೀ ಜಯ ಎಲ್. ದೇವಾಡಿಗ, ಶ್ರೀಮತಿ ಜಯಂತಿ ಎಂ. ದೇವಾಡಿಗ, ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಬ್ರಿಜೇಶ್ ನಿಟ್ಟೇಕರ್, ವೇದ್ ಪ್ರಕಾಶ್ ಮೊಯ್ಲಿ ಇವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಹಿಳಾ ಸದಸ್ಯೆಯರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡು ವಿವಿಧ ಅಡುಗೆ ತಯಾರಿಸಿ ತಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸದ ಎಲ್ಲರಿಗೂ ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ಜೆ. ದೇವಾಡಿಗ ಇವರು ಧನ್ಯವಾದ ನೀಡಿದರು. ವಲಯದ ಕಾರ್ಯಾಧ್ಯಕ್ಷ ಶ್ರೀ ಹರೀಶ್ ದೇವಾಡಿಗ ಇವರು ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸಿ ಸಂಘವು ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳಿಗೆ ತನ್ನ ವಲಯದಿಂದ ಸಂಪೂರ್ಣ ಸಹಕಾರ ಇರುವುದಾಗಿ ಆಶ್ವಾಸನೆ ನೀಡಿದರು.

ಬಳಿಕ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕುಮಾರಿ ಧ್ವನಿ ದೇವಾಡಿಗ, ಮಾಸ್ಟರ್ ಮನ್ವಿತ್ ದೇವಾಡಿಗ ಇವರಿಂದ ನ್ರತ್ಯ, ರೇಖಾ ದೇವಾಡಿಗ, ಕಸ್ತೂರಿ ಮೊಯ್ಲಿ, ವಿದ್ಯಾ ದೇವಾಡಿಗ ಇವರಿಂದ ತುಳುನಾಡ ಜಾನಪದ ನ್ರತ್ಯ ಹಾಗೂ ಶ್ರೀಮತಿ ಜಯಲಕ್ಷ್ಮಿ ಆರ್. ದೇವಾಡಿಗ, ಶ್ರೀಮತಿ ಶೀಲಾ ದೇವಾಡಿಗ, ಶ್ರೀ ಆಶೀಶ್ ದೇವಾಡಿಗ ಇವರ ತಂಡದ ಆಟಿ ಕಳಿಂಜನ ಜಾನಪದ ಗೀತೆಯೊಂದಿಗೆ ಅತೀಕ್ಷ್ ದೇವಾಡಿಗ ಇವರು ಆಟಿ ಕಳಂಜ ನ್ರತ್ಯ ಸಾದರ ಪಡಿಸಿದರು.
ಅಲ್ಲದೆ ವಲಯದ ನೂತನ ವಧು ವರರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಭಾಂಡೂಬ್ ವಲಯದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲಾ ದೇವಾಡಿಗ ಅಲ್ಲದೆ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಶ್ರೀಮತಿ ಪುಷ್ಪಾ ರಾವ್, ಶ್ರೀಮತಿ ಉಮಾ ಗುಜರನ್, ಶ್ರೀಮತಿ ಚಂದ್ರಾವತಿ ದೇವಾಡಿಗ, ಶ್ರೀ ರಮೇಶ್ ದೇವಾಡಿಗ, ಶ್ರೀ ವಿಜಯ್ ದೇವಾಡಿಗ, ಶ್ರೀ ಅಶೋಕ್ ದೇವಾಡಿಗ, ಶ್ರೀ ಕೇಶವ್ ದೇವಾಡಿಗ ಶ್ರೀ ರಾಕೇಶ್ ದೇವಾಡಿಗ ಇವರು ಪ್ರಾಮುಖ್ಯವಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗಾಗಿ ಸರ್ವಶ್ರೀ ಹರೀಶ್ ದೇವಾಡಿಗ, ಜೀವನ್ ದೇವಾಡಿಗ, ಶ್ರೀ ಸಂಜೀತ್ ದೇವಾಡಿಗ, ಮೋಹನದಾಸ್ ಗುಜರನ್, ಚಿದಾನಂದ ಮೊಯ್ಲಿ, ವೇದ್ ಪ್ರಕಾಶ್ ಮೊಯ್ಲಿ, ಪ್ರಶಾಂತ್ ಮೊಯ್ಲಿ, ಚಂದ್ರ, ಗಣೇಶ್ ಮೊಯ್ಲಿ, ಆಯುಷ್ ದೇವಾಡಿಗ, ರೇಖಾ ದೇವಾಡಿಗ, ಶುಭ ದೇವಾಡಿಗ, ಮಲ್ಲಿಕಾ ಶ್ರಿಯಾನ್, ಗೀತಾ ದೇವಾಡಿಗ, ಶೀಲಾವತಿ ದೇವಾಡಿಗ, ಕಸ್ತೂರಿ ಮೊಯ್ಲಿ, ಹರ್ಷ ದೇವಾಡಿಗ, ಅಪೇಕ್ಷಾ ದೇವಾಡಿಗ, ವಿದ್ಯಾ ದೇವಾಡಿಗ, ಸಂಜೀವಿ ದೇವಾಡಿಗ, ಶಾಂಭವಿ ದೇವಾಡಿಗ, ಸುಜಾತ ದೇವಾಡಿಗ, ರಾಕೇಶ್ ದೇವಾಡಿಗ, ಲವೇಶ್ ದೇವಾಡಿಗ, ಯೋಗೇಶ್ ದೇವಾಡಿಗ, ಪ್ರವೀಣ್ ದೇವಾಡಿಗ ಮತ್ತಿತರರು ಶ್ರಮಿಸಿದರು ಮತ್ತು ಸಹಕರಿಸಿದರು.
ಶ್ರೀ ಮೋಹನದಾಸ್ ಗುಜರನ್ ಇವರು ಸ್ವಾಗತಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.