Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದಿಂದ ಹರಸಿನ ಕುಂಕುಮ ಮತ್ತು ಸಾಂಸ್ಕ್ರತಿಕ ಸ್ಪರ್ಧೆ, ಸಾಧಕರ ಸನ್ಮಾನ : ನಮ್ಮ ಪ್ರತಿಭೆ ಸಮಾಜಕ್ಕಾಗಿ ಜಯಂತಿ ಎಂ. ದೇವಾಡಿಗ

ದೇವಾಡಿಗ ಸಂಘ ಮುಂಬಯಿ: ಮಹಿಳಾ ವಿಭಾಗದಿಂದ ಹರಸಿನ ಕುಂಕುಮ ಮತ್ತು ಸಾಂಸ್ಕ್ರತಿಕ ಸ್ಪರ್ಧೆ, ಸಾಧಕರ ಸನ್ಮಾನ

ನಮ್ಮ ಪ್ರತಿಭೆ ಸಮಾಜಕ್ಕಾಗಿ ಜಯಂತಿ ಎಂ. ದೇವಾಡಿಗ

   ನವಿ ಮುಂಬಯಿ, ಜ. 26: ನಮಗೆ ದೊರಕಿದ ಸಮಯದ ಸದುಪಯೋಗ ಮಾಡಿಕೊಂಡು ದೇವರು ಕೊಟ್ಟ ಪ್ರತಿಭೆಯನ್ನು ತನ್ನಷ್ಟಕ್ಕೆ ಇಡದೆ ಸಮಾಜಕ್ಕೆ ಅದನ್ನು ಧಾರೆ ಎರೆಯಬೇಕು. ನಮ್ಮ ಪ್ರತಿಭೆ ಇರುವುದೇ ಸಮಾಜಕ್ಕಾಗಿ ಎಂದು ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮಂತಿ ಜಯಂತಿ ಎಂ. ದೇವಾಡಿಗ ಇವರು ಇಲ್ಲಿ ಹೇಳಿದರು. ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ, ಶತಮಾನೋತ್ಸವದ ಸಂಭ್ರಮದಲ್ಲಿರುವ ದೇವಾಡಿಗ ಸಂಘದ ಮಹಿಳಾ ವಿಭಾಗವು ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರ ನೇತೃತ್ವದಲ್ಲಿ ಮತ್ತು ಅವರ ಅಧ್ಯಕ್ಷತೆಯಲ್ಲಿ ಹಳದಿ ಕುಂಕುಮ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಜನೆವರಿ ೨೬ ರಂದು ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ದೇವಾಡಿಗ ಭವನ ನೆರೂಲ್ ನವಿ ಮುಂಬಯಿ ಇಲ್ಲಿ ಶ್ರೀಮತಿ ಸುಜಾತ ಮತ್ತು ಶ್ರೀಮತಿ ಧರ್ಮಪಾಲ ಯು. ದೇವಾಡಿಗ ಗೌರವಾರ್ಥ ಸಭಾಗ್ರಹದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿತು. ಈ ಸಂದರ್ಭದಲ್ಲಿ ಶ್ರೀಮತಿ ಜಯಂತಿ ಎಂ. ದೇವಾಡಿಗರು ಮೇಲಿನ ಮಾತುಗಳನ್ನು ಹೇಳಿದರು.

ದೇಶದ 76ನೇ ಗಣತಂತ್ರ ದಿವಸದ ಔಚಿತ್ಯದಲ್ಲಿ ಸಂಘವು ಪೂರ್ಣ ದಿನದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿತ್ತು. ಮಧ್ಯಾಹ್ನದ ಭೋಜನ ವಿರಾಮದ ನಂತರ ಮಹಿಳಾ ವಿಭಾಗದ ಕಾರ್ಯಕ್ರಮ ಆರಂಭಗೊಂಡಿತು. ಪ್ರಾರಂಭದಲ್ಲಿ ವಿಭಾಗದ ಉಪಾಧ್ಯಕ್ಷೆಯರಾದ ಶ್ರೀಮತಿ ಪ್ರಮೀಳಾ ವಿ ಶೇರಿಗಾರ್ ಹಾಗೂ ಶ್ರೀಮತಿ ಪ್ರತಿಭಾ ಜಿ ದೇವಾಡಿಗ ಮತ್ತು ಜೊತೆ ಕಾರ್ಯದರ್ಶಿಯರಾದ ಶ್ರೀಮತಿ ಲತಾ ಎ ಶೇರಿಗಾರ ಹಾಗೂ ಶ್ರೀಮತಿ ನಳಿನಿ ಎಸ್ ದೇವಾಡಿಗ ಇವರು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಯಿತು. ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕಿರು ನಾಟಕ, ಸಮೂಹ ನ್ರತ್ಯ ಮತ್ತು ಸಮೂಹ ಗೀತೆಗಳ ಸ್ಪರ್ಧೆ ನಡೆಯಿತು. ಸಾಂಸ್ಕ್ರತಿಕ ಸ್ಪರ್ಧಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಸುಜಾತ ಧರ್ಮಪಾಲ ದೇವಾಡಿಗ ಇವರು ಮುಖ್ಯ ಅತಿಥಿಗಳಾಗಿದ್ದು ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ ಇವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಮತಿ ಸುಜಾತ ಧರ್ಮಪಾಲ ದೇವಾಡಿಗ ಇವರು ಶ್ರೀಮತಿ ಪ್ರಮೀಳಾ ಪಿ. ದೇವಾಡಿಗ, ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಉಪಾಧ್ಯಕ್ಷೆಯರಾದ ಶ್ರೀಮತಿ ಪ್ರತಿಭಾ ಜಿ. ದೇವಾಡಿಗ, ಜೊತೆ ಕಾರ್ಯದರ್ಶಿಯರಾದ ಶ್ರೀಮತಿ ನಳಿನಿ ಎಸ್. ದೇವಾಡಿಗ ಮತ್ತು ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್, ಸಂಘದ ಜೊತೆ ಖಜಾಂಚಿ ಶ್ರೀಮತಿ ಸುರೇಖಾ ಹೆಚ್. ದೇವಾಡಿಗ, ಕಾರ್ಯದರ್ಶಿ ಸುಜಯ ವಿ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ್, ಸಂಘದ ಪ್ರಾದೇಶಿಕ ಸಮಿತಿಗಳ ಮಹಿಳಾ ಕಾರ್ಯಾಧ್ಯಕ್ಷರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯ್ಲಿ ಇವರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಿದ ಅತಿಥಿಗಳು ಮಹಿಳಾ ವಿಭಾಗದ ಕಾರ್ಯಕ್ರಮಕ್ಕೆ ಶುಭ ಕೋರಿ ಸಂಘದ ಶತಮಾನೋತ್ಸವ ವರ್ಷ ಆಚರಣೆಯ ಸಮಾರಂಭಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡರು.

ಆರಂಭದಲ್ಲಿ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಎಲ್ಲರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರು, ಪ್ರಾದೇಶಿಕ ಸಮಿತಿಯ ರ್ಯಾಧ್ಯಕ್ಷರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಶರು ಹಾಗೂ ವ್ಯವಸ್ಥಾಪಕ ಮಂಡಳಿ ಸದಸ್ಯರನ್ನು ಸ್ವಾಗತಿಸಿದರು ಹಾಗೂ ಅವರ ಮೂರು ವರ್ಷದ ಅಧ್ಯಕ್ಷೀಯ ಕಾಲಾವಧಿಯಲ್ಲಿ ಮಹಿಳಾ ವಿಭಾಗದಿಂದ ಆಚರಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಶಸ್ವಿಗೊಳಿಸುವಲ್ಲಿ ನೀಡಿದ ಎಲ್ಲರ ಸಹಕಾರವನ್ನು ಸ್ಮರಿಸಿ ಧನ್ಯವಾದ ನೀಡಿದರು. ಅಲ್ಲದೆ, ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಗಳ ಮಹಿಳಾ ಕಾರ್ಯಾಧ್ಯಕ್ಷರುಗಳು ವಿಭಾಗಕ್ಕೆ ನೀಡಿದ ಸಹಕಾರಕ್ಕೆ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಧರ್ಮಪಾಲ ದೇವಾಡಿಗರು ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಶುಭ ಕೋರುತ್ತಾ, ಮಹಿಳಾ ವಿಭಾಗದ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮಹಿಳಾ ವಿಭಾಗವು ಸಂಘಕ್ಕೆ ಬೆನ್ನೆಲುಬಾಗಿ ನಿಂತು ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳುತ್ತಾ ಬರುವ ಶತಮಾನೋತ್ಸವ ಆಚರಣೆಯಲ್ಲಿ ಮಹಿಳಾ ವಿಭಾಗದ ಸಿಂಹಪಾಲು ಇದ್ದು ಎಲ್ಲರೂ ಅದಕ್ಕೆ ತಯಾರಾಗಿರಬೇಕು. ಆದಷ್ಟು ದುಡಿದು ಪರಿಶ್ರಮವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಈ ಸಂದಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಸಂಘದ ಮಾಜಿ ಮಹಿಳಾ ಕಾರ್ಯಾಧ್ಯಕ್ಷರು, ಕೇಂದ್ರದ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳನ್ನು ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಗೌರವಿಸಿದರು. ಬಳಿಕ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ತಮ್ಮ ಕಿರು ನಾಟಕಗಳು, ರೂಪಕಗಳು, ಸಮೂಹ ನಾಟ್ಯಗಳು ಮತ್ತು ಸಮೂಹ ನ್ರತ್ಯಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅದರಲ್ಲಿ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಸದಸ್ಯರು ಪ್ರಸ್ತುತ ಪಡಿಸಿದ ದ್ರೌಪದಿ ಅಕ್ಷಯಾಂಬರ ರೂಪಕಕ್ಕೆ ಪ್ರಥಮ ಬಹುಮಾನ ದೊರಕಿತು. ಈ ರೂಪಕವನ್ನು ಶ್ರೀಮತಿ ಅಶ್ವಿನಿ ಕೆ. ದೇವಾಡಿಗ, ಕುಮಾರಿ ಸ್ಫುರ್ಥಿ ಮೊಯ್ಲಿ ಮತ್ತು ಕುಮಾರಿ ತನ್ವಿ ಡಿ. ದೇವಾಡಿಗ ಇವರು ನಿರ್ದೇಶಿಸಿದರು ಮತ್ತು ಸಂಯೋಜಿಸಿದರು. ಚೆಂಬೂರು ಪ್ರಾದೇಶಿಕ ಸಮಿತಿ ಸದಸ್ಯರು ಪ್ರಸ್ತುತ ಪಡಿಸಿದ ಸಮೂಹ ನ್ರತ್ಯ ಮತ್ತು ನಾಟಕಕ್ಕೆ ದ್ವಿತೀಯ ಹಾಗೂ ಸಿಟಿ ಪ್ರಾದೇಶಿಕ ಸಮಿತಿ ಸದಸ್ಯರು ಸಮೂಹ ನ್ರತ್ಯ ಮತ್ತು ಕಿರುನಾಟಕಕ್ಕೆ ತೃತೀಯ ಬಹುಮಾನ ದೊರಕಿತು. ಬೋರಿವಲಿ ಪ್ರಾದೇಶಿಕ ಸಮಿತಿ ಪ್ರಸ್ತುತ ಪಡಿಸಿದ ಸಮೂಹ ನ್ರತ್ಯ ಹಾಗೂ ದಕ್ಷಿಣ ಭಾರತೀಯ ಫ್ಯಾಶನ್ ಶೋ ಮತ್ತು ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಸ್ತುತ ಪಡಿಸಿದ ಸಮೂಹ ನ್ರತ್ಯ ಹಾಗೂ ಸಮೂಹ ಗಾನಕ್ಕೆ ಉತ್ತೇಜನಾರ್ಥ ನಗದು ಬಹುಮಾನ ಹಾಗೂ ಭಾಂಡೂಬ್ ಮತ್ತು ಅಸಲ್ಫಾ ಪ್ರಾದೇಶಿಕ ಸಮಿತಿ ಪ್ರಸ್ತುತ ಪಡಿಸಿದ ಸಮೂಹ ನ್ರತ್ಯ ಮತ್ತು ಕಿರುನಾಟಕಗಳಿಗೆ ಸಹಭಾಗ ಬಹುಮಾನ ನೀಡಲಾಯಿತು. ಈ ಸ್ಪರ್ಧೆಗಳ ಪರೀಕ್ಷಕರಾಗಿ ಪ್ರಸಿದ್ಧ ಚಲನ ಚಿತ್ರ ಮತ್ತು ನಾಟಕ ಕಲಾವಿದೆ ಶ್ರೀಮತಿ ಚಂದ್ರಾವತಿ ದೇವಾಡಿಗ ಮತ್ತು ಶ್ರೀಮತಿ ಉಷಾ ಶೆಟ್ಟಿ ಇವರು ಕಾರ್ಯ ನಿರ್ವಹಿಸದರು. ಅವರನ್ನು ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಗೌರವಿಸಿದರು.

ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ದೇವಾಡಿಗ ಇವರು ಹಳದಿ ಕುಂಕುಮದ ಮಹತ್ವ ಮತ್ತು ಔಚಿತ್ಯವನ್ನು ತಿಳಿಸಿದರು ಮತ್ತು ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ ಇವರೊಂದಿಗೆ ಕಾರ್ಯಕ್ರಮವನ್ನು ತುಂಬಾ ಪ್ರಶಂಸನೀಯವಾಗಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಿಗಾಗಿ ಹರಿಶಿನ ಕುಂಕುಮ ಮತ್ತು ಎಳ್ಳು ಬೆಲ್ಲದ ಉಂಡೆಗಳನ್ನು ವಿತರಿಸಲಾಯಿತು. ಶ್ರೀಮತಿ ಪ್ರಜ್ಞಾ ಮೋಹನ ದಾಸ್ ಮತ್ತು ಶ್ರೀ ಹಿರಿಯಡ್ಕ ಮೋಹನ ದಾಸ್ ಇವರು ಸಂಕ್ರಾಂತಿಯ ನೆನಪಿನ ಕಾಣಿಕೆಗಳನ್ನು ಪ್ರಾಯೋಜಿಸಿ ಮಹಿಳೆಯರಿಗೆ ಶುಭ ಕೋರಿದರು ಈ ಕಾರ್ಯಕ್ರಮಕ್ಕೆ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಜೆ. ಮೊಯಿಲಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಶ್ರೀ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿಗಳಾದ ಶ್ರೀ ಸುರೇಶ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನದಾಸ್ ಶ್ರೀ ಎಸ್. ಪಿ. ಕರ್ಮರನ್, ಶ್ರೀ ರವಿ ಎಸ್. ದೇವಾಡಿಗ, ಶ್ರೀ ವಾಸು ದೇವಾಡಿಗ, ಸಮಿತಿ ಸದಸ್ಯರುಗಳಾದ ಶ್ರೀ ಸುಧಾಕರ್ ಎಲ್ಲೂರು, ಶ್ರೀ ಜಯ ಎಲ್. ದೇವಾಡಿಗ, CA ಶ್ರೀ ಜಗದೀಶ್ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳು ಮತ್ತು ಸದಸ್ಯರು ಸಂಖ್ಯೆಯಲ್ಲಿ ಪಾಲ್ಗೊಂಡರು. ಸಮಿತಿ ಸದಸ್ಯರಾದ ಶ್ರೀ ಪ್ರಭಾಕರ್ ಎಸ್. ದೇವಾಡಿಗ ಇವರು ಟೋಗ್ರಫಿ ಮತ್ತು ವಿಡಿಯೋಗ್ರಫಿ ಸೇವೆ ನೀಡಿ ಸಹಕರಿಸಿದರು. ಕಾರ್ರ್ಯಕ್ರಮವು ಹಳದಿ ಕುಂಕುಮ ಮತ್ತು ಮಹಿಳಾ ಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಶೇರಿಗಾರ್ ಇವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡುತ್ತಾ ಮಹಿಳಾ ವಿಭಾಗಕ್ಕೆ ಶುಭ ಕೋರಿದರು. ಮಹಿಳಾ ಸಶಕ್ತೀಕರಣದ ಕುರಿತು ತನ್ನ ಅನಿಸಿಕೆಯನ್ನು ನೀಡುತ್ತಾ, ಸಂಘದ ಇತಿಹಾಸದಲ್ಲಿ ಮೊದಲಬಾರಿಗೆ ಮಹಿಳಾ ಉಪಾಧ್ಯಕ್ಷೆ ಇದ್ದು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷೆಯಾಗಿಯೂ ಮಹಿಳೆಯರು ಚುನಾಯಿತರಾಗಿದ್ದಾರೆ ಅಲ್ಲದೆ ಸಂಘದ ಸಮಿತಿಸದಸ್ಯರಲ್ಲಿ ಶೇಕಡಾ ಅರವತ್ತರಷ್ಟು ಮಹಿಳಾ ಸದಸ್ಯರಿದ್ದು ಅವರಿಂದ ಉತ್ತಮ ಚಟುವಟಿಕೆಗಳು ನಡೆಯುತ್ತಿವೆ ಎಂದರು. ಅಲ್ಲದೆ ಯುವಕರೂ ಸಹ ಸಾಕಷ್ಟು ಪ್ರಮಾಣದಲ್ಲಿದ್ದು ಇದರಿಂದಾಗಿ ಸಂಘದ ಶತಮಾನೋತ್ಸವಕ್ಕೆ ಒಂದು ಬಲ ಬಂದಿದೆ ಎಂದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯಿಲಿ ಇವರೂ ತನ್ನ ಅನಿಸಿಕೆಯನ್ನು ಮಂಡಿಸಿದರು. ಮಹಿಳಾ ವಿಭಾಗದ ಶ್ರೀಮತಿ ಜಯಂತಿ ಎಂ. ದೇವಾಡಿಗ ಎಲ್ಲರನ್ನೂ ಸ್ವಾಗತಿಸುತ್ತಾ ವಿಭಾಗದ ಎಲ್ಲ ಸದಸ್ಯರು, ಸಂಘದ ಅಧ್ಯಕ್ಷರು, ವ್ಯವಸ್ಥಾಪಕ ಮಂಡಳಿ, ಮಾಜಿ