Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ಮಹಿಳಾ ವಿಭಾಗದಿಂದ ವಾರ್ಷಿಕ ಹಳದಿ ಕುಂಕುಮ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬಯಿ : ಮಹಿಳಾ ವಿಭಾಗದಿಂದ ವಾರ್ಷಿಕ ಹಳದಿ ಕುಂಕುಮ ಕಾರ್ಯಕ್ರಮ

ಸಮಾಜದ ಉನ್ನತಿಗೆ ಬಂಧುಗಳ ಸೌಮ್ಯತೆ ಅಗತ್ಯ - ಶ್ರೀಮತಿ ಸುಜಾತಾ ಧರ್ಮಪಾಲ ದೇವಾಡಿಗ

   ಸಮಾಜದಲ್ಲಿ ಎಲ್ಲರೂ ಸರಿ ಸಮಾನರು. ಆಮೆ- ಮೊಲ ಓಟದಲ್ಲಿ ಆಮೆ ಹೇಗೆ ಗೆದ್ದಿತೋ ಹಾಗೆ ಸಮಾಜದಲ್ಲಿ ಸಹ ದೊಡ್ಡವರು ಚಿಕ್ಕವರು ಎಂಬ ಭೇದ ಇರಬಾರದು. ದೊಡ್ಡವರು ತಮ್ಮ ದೊಡ್ಡತನವನ್ನು ತೋರಿಸದೆ, ಚಿಕ್ಕವರನ್ನು ಆಗಣ್ಯಸದೆ ತಮ್ಮ ಜೊತೆಯಲ್ಲಿ ಸೇರಿಸಿಕೊಂಡು ಸಹಕರಿಸಿದರೆ ಭೇದ ಭಾವ ಉಂಟಾಗದೆ ಸಮಾಜದಲ್ಲಿ ಸೌಮ್ಯತೆ ಕಂಡುಬರಲು ಸಾಧ್ಯ ಎಂದು ಶ್ರೀಮತಿ ಸುಜಾತ ಧರ್ಮಪಾಲ ದೇವಾಡಿಗ ಇವರು ಹೇಳಿದರು.

ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಆಚರಿಸಿದ ಹಳದಿ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಸುಜಾತಾ ದೇವಾಡಿಗರು ಸಂಘದ ಮಹಿಳಾವಿಭಾಗದ ಎಲ್ಲಾ ಸದಸ್ಯರು ಮತ್ತು ನೆರೆದ ಸಭಿಕರಿಗೆ ಹಳದಿ ಕುಂಕುಮ ಕಾರ್ಯಕ್ರಮದ ಶುಭರೈಸಿದರು. ಈ ಸಂದರ್ಭದಲ್ಲಿ ಸಂಘದ ಜೊತೆ ಕೊಷಾಧಿಕಾರಿ ಶ್ರೀಮತಿ ಸುರೇಖಾ ಹೆಚ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ಎಮ್. ದೇವಾಡಿಗ, ಪ್ರಥಮ ಮಹಿಳೆ ಶ್ರೀಮತಿ ಪ್ರಮೀಳಾ ನಾರಾಯಣ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ದೇವಾಡಿಗ, ಮಾಜಿ ಮಹಿಳಾ ಕಾರ್ಯಧ್ಯಕ್ಷರಾದ ಶ್ರೀಮತಿ ಪುಷ್ಪ ಎಸ್ ರಾವ್, ಶ್ರೀಮತಿ ರಂಜನಿ ಮೊಯ್ಲಿ, ಶ್ರೀಮತಿ ಜಯಂತಿ ಆರ್. ಮೊಯ್ಲಿ, ಶ್ರೀಮತಿ ಶಾಂತಾ ಜಿ. ಮೊಯ್ಲಿ, ಶ್ರೀಮತಿ ಪ್ರಫುಲ್ಲ ವಾಸು ದೇವಾಡಿಗ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಎ. ಸೇರಿಗಾರ್ ಮತ್ತು ನಳಿನಿ ದೇವಾಡಿಗ, ಇವರು ವೇದಿಕೆಯಲ್ಲಿ ಆಸೀನರಾಗಿದ್ದರು.

ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಎಮ್. ದೇವಾಡಿಗರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಸಂಘ, ಸಮಿತಿ ಸದಸ್ಯರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ವಾಗತಕೋರಿದರು .

ಎಲ್ಲಾ ಮಹಿಳೆಯರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಬೇಕು. ಅಲ್ಲದೆ ತಮ್ಮ ಅರೋಗ್ಯವನ್ನು ತಾವು ಸ್ವತಃ ಕಾಪಾಡಿಕೊಳ್ಳಬೇಕು. ತಮ್ಮ ತಮ್ಮ ಹವ್ಯಾಸಗಳನ್ನು ಕ್ರಿಯಾಶೀಲಗೊಳಿಸಿ ಜೀವನದಲ್ಲಿ ಮುಂದೆ ಸಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಮಾತನಾಡಿ ಮಹಿಳಾ ವಿಭಾಗದ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಘವು ತನ್ನ ಶತಮಾನೋತ್ಸವದ ಆಚರಣೆಯತ್ತ ದಾಪುಗಲು ಹಾಕುತ್ತಿದ್ದು, ಸದಸ್ಯರು ಉತ್ತಮ ಮತ್ತು ಎಲ್ಲಾ ರೀತಿಯಲ್ಲಿ ವಿಶೇಷವಾಗಿ ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಕೇಳಿಕೊಂಡರು.

ಸಂಘದ ಮಾಜಿ ಅಧ್ಯಕ್ಷ ಹಾಗೂ ವಿಶ್ವ ದೇವಾಡಿಗ ಮಹಾ ಮಂಡಳದ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗರು ವಿಶೇಷವಾಗಿ ಉಪಸ್ಥಿತರಿದ್ದು ಸಂಘದ ಎಲ್ಲಾ ಪದಾಧಿಕಾರಿಗಳು ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮ ನಡೆಯುತ್ತಿದ್ದು, ಸಂಘದ ಬೆಳವಣಿಗೆ ಕುರಿತು ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಸಮಾಜ ಬಾಂಧವರು ಮುಂದೆಬಂದು ಸಂಘಕ್ಕಾಗಿ ತಮ್ಮ ಎಲ್ಲಾ ತರದ ಸಹಕಾರ ನೀಡಬೇಕಾಗಿ ಕೇಳಿಕೊಂಡರು.

ಸಂಘದ ಮಾಜಿ ಅಧ್ಯಕ್ಷ ಹಾಗೂ ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನದಾಸ್ ಮಾತನಾಡುತ್ತಾ ಸದಸ್ಯರಿಗೆ ಶುಭ ಕೋರಿದರು. ಸಂಘದ ವಿವಿಧ ವಿಭಾಗಗಳು, ಪ್ರಾದೇಶಿಕ ಸಮಿತಿಗಳು ಅತ್ಯುತ್ತಮ ಕಾರ್ಯಕ್ರಮ ನೀಡುತ್ತಿದ್ದು, ಈ ಕಾರ್ಯಕ್ರಮಗಳು ನೆಪಮಾತ್ರ. ಇದರ ಉದ್ದೇಶ ನಮ್ಮವರನ್ನು ಒಟ್ಟುಗೂಡಿಸುವುದು, ಪರಸ್ಪರ ಭೇಟಿಮಾಡಿ ಒಬ್ಬರಿಗೊಬ್ಬರು ಮತ್ತು ಸ್ಪಂಧಿಸುವುದು. ಇದರಿಂದ ಬಾಂಧವ್ಯ ಬೆಳೆದು ಸದಸ್ಯರಲ್ಲಿ ಒಬ್ಬರನ್ನೊಬ್ಬರು ಹೊಂದಿಕೊಂಡು ಸಂಘದ ಐಕ್ಯತೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ದೇವಾಡಿಗ ಸಮಾಜ ಬಾಂಧವರ ಕುಲದೈವ ಶ್ರೀ ಬಗ್ಗು ಪಂಜುರ್ಲಿ ಮೂಲಕ್ಷೇತ್ರ, ಬಗ್ಗುಮುಂಡ ಕಲ್ಮಾಡಿ ಉಡುಪಿ ಇದರ ಕ್ಷೇತ್ರದ ಮೇಲ್ಛಾವಣಿ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ಸಂಘದ ಅಧ್ಯಕ್ಷ ಶ್ರೀ ಗಣೇಶ್ ಎಸ್. ದೇವಾಡಿಗ ಇವರು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ತನ್ನ ಅನಿಸಿಕೆಯನ್ನು ತಿಳಿಸಿದ ಅವರು, ಮುಂಬಯಿ ಸಂಘವನ್ನು ಶ್ಲಾಘಸಿ ಸಮಾಜ ಬಾಂಧವರು ತನು ಮನ ಧನಗಳಿಂದ ಸಮಾಜದ ಮೂಲಕ್ಷೇತ್ರದ ಯೋಜನೆಗೆ ಸಹಕರಿಸಬೇಕಾಗಿ ವಿನಂತಿಸಿಕೊಂಡರು. ಅವರೊಂದಿಗೆ ಜೊತೆ ಕಾರ್ಯದರ್ಶಿ ಶ್ರೀ ಸದಾನಂದ ದೇವಾಡಿಗ ಕೋಷಧಿಕಾರಿ ಸುರೇಶ್ ಸೇರಿಗಾರ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಸಂಘದ ವ್ಯವಸ್ಥಾಪಕ ಮಂಡಳಿ, ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಧ್ಯಕ್ಷರು ಮತ್ತು ಮಹಿಳಾ ಕಾರ್ಯಧ್ಯಕ್ಷರು, ವಿವಿಧ ಸಮಿತಿಗಳ ಕಾರ್ಯಧ್ಯಕ್ಷರುಗಳು ಉಪಸ್ಥಿತರಿದ್ದರು. ಎಲ್ಲರನ್ನೂ ಮಹಿಳಾ ವಿಭಾಗದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಲತಾ ಎ. ಸೇರಿಗಾರ್ ಇವರು ವರದಿ ಸಲ್ಲಿಸಿದರು.

ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ಎಸ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪಿ ಕರ್ಮರನ್,ಶ್ರೀ ವಾಸು ಎಸ್ ದೇವಾಡಿಗ, ಮಾಜಿ ಉಪಾಧ್ಯಕ್ಷರಾದ ಶ್ರೀ ಎಸ್. ಎಸ್. ರಾವ್, ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಸಮಿತಿ ಸದಸ್ಯರು ಸರ್ವಶ್ರೀ C. A. ಶ್ರೀ ಜಗದೀಶ್ ವಿ. ದೇವಾಡಿಗ, ಜಯ ಎಲ್ ದೇವಾಡಿಗ, ಸುಂದರ್ ಸಿ. ಮೊಯ್ಲಿ, ಪ್ರಭಾಕರ್ ಎಸ್. ದೇವಾಡಿಗ, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಯುವ ವಿಭಾಗದ ಕಾರ್ಯಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೆಕರ್ ಮತ್ತು ಯುವ ವಿಭಾಗದ ಕಾರ್ಯದರ್ಶಿ ಕು. ತನ್ವಿ ದೇವಾಡಿಗ, ಪ್ರಾದೇಶಿಕ ಸಮಿತಿಗಳ ಕಾರ್ಯಧ್ಯಕ್ಷರುಗಳು ಮತ್ತು ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸದಸ್ಯರು ಮತ್ತು ಅವರ ಮಕ್ಕಳು ಮನೋರಂಜನೆ ಕಾರ್ಯಕ್ರಮ ಪ್ರದರ್ಶಿಸಿದರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ವಿಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ನಳಿನಿ ದೇವಾಡಿಗರು ವಂದಿಸಿದರು.