Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಅರಶಿನ ಕುಂಕುಮ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಅರಶಿನ ಕುಂಕುಮ ಕಾರ್ಯಕ್ರಮ

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಜನವರಿ 22 ನೇ ತಾರೀಖು ದಾದರ್ ಸೆಂಟರ್ ನಲ್ಲಿ ಅರಶಿನ ಕುಂಕುಮ ಕಾರ್ಯಕ್ರಮವು 10 ಸಮನ್ವಯ ಸಮಿತಿಯ ಸದಸ್ಯರ ಭಜನೆಯೊಂದಿಗೆ ಶುಭಾರಂಭಗೊಂಡಿತು. ಮಹಿಳಾ ವಿಭಾಗದ ಉಪಕಾರ್ಯದರ್ಶಿ ಶ್ರೀಮತಿ ಪ್ರತಿಭಾ ದೇವಾಡಿಗ ಅರಶಿನ ಕುಂಕುಮದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರೆ, ಬೊರಿವಲಿ ಸಮನ್ವಯ ಸಮಿತಿಯ ಮಾಜಿ ಕಾರ್ಯಧ್ಯಕ್ಷೆಯಾದ ಶ್ರೀಮತಿ ಲಕ್ಷ್ಮಿ ದೇವಾಡಿಗರು ಉತ್ತರಾಯಣ ಹಾಗೂ ಈ ಸಂವತ್ಸರದ ಬಗ್ಗೆ ವಿವರಿಸಿದರು. ಮಹಿಳಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್. ಮೊಯಿಲಿಯವರು ಎಲ್ಲರನ್ನು ಸ್ವಾಗತಿಸಿ, ಸಂಘದ ನೂರನೇ ವರ್ಷಕ್ಕೆ ನಾವೆಲ್ಲರೂ ಸಂಘದ ಎಲ್ಲಾ ಕಾರ್ಯ ಉದ್ದೇಶಗಳನ್ನು ಈಡೇರಿಸೋಣ, ಯುವಶಕ್ತಿಯ ಒಗ್ಗೂಡುವಿಕೆ, ಮಹಿಳೆಯರ ಸಂಘಟನೆ, ನಮ್ಮ ಸಂಘದ ಏಳಿಗೆಗೆ ನಾಂದಿಯಾಗಲಿ ಎಂದು ಕರೆ ನೀಡಿದರು.

ಸಂಘದ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜೊತೆ ಕಾರ್ಯದರ್ಶಿಯರಾದ ಶ್ರೀ ಜಯ ಎಲ್. ದೇವಾಡಿಗ, ಶ್ರೀಮತಿ ಮಾಲತಿ ಜೆ. ಮೊಯಿಲಿ, ಮಹಿಳಾ ವಿಭಾಗದ ಸಲಹೆಗಾರ್ತಿ ಶ್ರೀಮತಿ ಜಯಂತಿ ಆರ್. ಮೊಯಿಲಿ, ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಉಪ ಖಜಾಂಚಿ ಶ್ರೀಮತಿ ಸುರೇಖಾ ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಲತಾ ಮೊಯಿಲಿ, ಬೊರಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಕುಸುಮ ದೇವಾಡಿಗ, ಮೀರಾ ರೋಡ್ ಪ್ರಾದೇಶಿಕ ಸಮಿತಿಯ ಶ್ರೀಮತಿ ವಿಜಯಲಕ್ಷ್ಮಿ ದೇವಾಡಿಗ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಶಾಲಿನಿ ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಹೇಮನಾಥ್ ದೇವಾಡಿಗ, ಜೈ ಅಂಬೆ ಟ್ರಸ್ಟ್ ನ ಪ್ರಭಾವತಿ ದೇವಾಡಿಗ, ದೇವಾಡಿಗ ಮಹಿಳಾ ವಿಭಾಗದ ಕಾರ್ಯಗಳನ್ನು ಶ್ಲಾಘಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕರಾಟೆ ಪಟು ಪನ್ಸುಲ್ ದೇವಾಡಿಗರನ್ನು ಈ ಸಂದರ್ಭದಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಸದಸ್ಯರು ಮತ್ತು ಮಹಿಳಾ ವಿಭಾಗದವರು ಸನ್ಮಾನಿಸಿ, ದುಬೈಯಲ್ಲಿ ಜರುಗುವ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಶುಭ ಕೋರಿದರು.

ನೆರೆದಿದ್ದ ಸಮಸ್ತ ಮಹಿಳೆಯರು ಒಬ್ಬರಿಗೊಬ್ಬರು ಅರಶಿನ ಕುಂಕುಮವನ್ನಿಟ್ಟು ಶುಭ ಕೋರಿದರು. ಮಹಿಳಾ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರೆ, ಯುವ ವಿಭಾಗದ ನಿತೇಶ್ ದೇವಾಡಿಗರು ಕಾರ್ಯಕ್ರಮಕ್ಕೆ ಸಹಕಾರವನ್ನಿತ್ತರು.