Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ:ಮಹಿಳಾ ವಿಭಾಗದವರಿಂದ ಅರಸಿನ - ಕುಂಕುಮ ಕಾರ್ಯಕ್ರಮ...

ದೇವಾಡಿಗ ಸಂಘ ಮುಂಬಯಿ:ಮಹಿಳಾ ವಿಭಾಗದವರಿಂದ ಅರಸಿನ - ಕುಂಕುಮ ಕಾರ್ಯಕ್ರಮ...

ದೇವಾಡಿಗ ಸೆಂಟರ್, ದಾದರ್ ನಲ್ಲಿ ರವಿವಾರ 24 ಜನವರಿ 2021 ಸಂಜೆ 3:30ರಿಂದ 6:30ರ ವರೆಗೆ ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದವರಿಂದ ಅರಸಿನ-ಕುಂಕುಮ ಕಾರ್ಯಕ್ರಮ ಜರುಗಿತು. First Lady ಶ್ರೀಮತಿ ವನಿತಾ ರವಿ ದೇವಾಡಿಗ,ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ರಂಜಿನಿ ಆರ್. ಮೊಯ್ಲಿ, ಉಪಕಾರ್ಯದ್ಯಕ್ಷೆಯರಾದ ಜಯಂತಿ ಎಮ್. ದೇವಾಡಿಗ, ಪೂರ್ಣಿಮಾ ಡಿ ದೇವಾಡಿಗ, ಕಾರ್ಯದರ್ಶಿ ಪ್ರಮೀಳ ವಿ. ಶೇರಿಗಾರ್, ಸಲಹೆಗಾರ್ತಿ ಜಯಂತಿ ಆರ್. ಮೊಯ್ಲಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಉಪಖಜಾಂಚಿ ಸುರೇಖ ಎಚ್. ದೇವಾಡಿಗರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲರೂ 27.10.2020 ರಂದು ದೈವಾದೀನರಾದ ಗೋಪಾಲಣ್ಣನವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಭಾವಪೂರ್ಣ ಶ್ರಧ್ದಾಂಜಲಿ ನೀಡಿದರು.

ಮಕರ ಸಂಕ್ರಾಂತಿ ಮತ್ತು ರಥಸಪ್ತಮಿಯ ಮದ್ಯೆ ಆಚರಿಸುವ ಅರಸಿನ ಕುಂಕುಮದ ಬಗ್ಗೆ ಮಾಹಿತಿಯನ್ನು ಜಯಂತಿ ದೇವಾಡಿಗ ಮತ್ತು ಸುರೇಖ ಮೊಯ್ಲಿಯವರು ವಿವರಿಸಿದರೆ, ಕಾರ್ಯದ್ಯಕ್ಷೆ ರಂಜಿನಿ ಮೊಯ್ಲಿಯವರು, ಹರಿಶಿನ ಕುಂಕುಮದ ಧಾರ್ಮಿಕ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿತ್ರಿಬಾಯಿ ಫುಲೆಯವರು ಮಹಿಳಾ ಸಂಘಟನೆಯನ್ನು ರೂಪಿಸಿ ಸ್ವಾತಂತ್ರ್ಯದ ಬಲ ಅಭಿವ್ರದ್ದಿಗೊಳ್ಳಲು ಮಹಿಳೆಯರನ್ನು ಪ್ರೇರೇಪಿಸಿದರು ಹಾಗೇಯೇ ನಾವು ಕೂಡ ನಮ್ಮ ಸಂಘದ ಅಭಿವೃದ್ಧಿಗಾಗಿ ಸಹಕರಿಸಬೇಕು ಎಂದು ಹೇಳಿದರು.

ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ದೇವಾಡಿಗ ಸಂಘ ಮುಂಬೈಯ ಮಾಜಿ ಅದ್ಯಕ್ಷರಾದ ಸನ್ಮಾನ್ಯ ಎಚ್. ಮೋಹನದಾಸ್ ರವರು "ಬೇಟಿ ಬಚಾವ ಬೇಟಿ ಪಡಾವ್" ಹಾಗೂ “World Girl Child Day” ವಿಷಯದಲ್ಲಿ ವಿವರಿಸಿದರು ಹಾಗೂ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮುಖ್ಯ ಸಲಹೆಗಳನ್ನು ನೀಡಿದರು.

ಆಗಸ್ಟ್ ತಿಂಗಳಲ್ಲಿ ನಡೆದ "ಜೂಮ್ ಆಪ್" ನಲ್ಲಿ ವರ್ಚುವಲ್ "ಆಟಿ ಡ್ ಒಂಜಿ ದಿನ" ಸಮಾರಂಭದಲ್ಲಿ ಆಟಿಯ ತಿನಿಸುಗಳನ್ನು ಮಾಡಿ ಉತ್ತಮ ರೀತಿಯಲ್ಲಿ ಪ್ರಸ್ತುತಿ ಪಡಿಸಿ ಆಯ್ಕೆಯಾದ ಏಳು ಮಹಿಳಾಮಣಿಗಳಾದ ಶ್ರೀಮತಿ ಲಕ್ಷ್ಮಿ ದೇವಾಡಿಗ, ಪ್ರಫುಲ್ಲ ದೇವಾಡಿಗ, ರುಕ್ಮಿಣಿ ದೇವಾಡಿಗ,ಶಕುಂತಲಾ ಶೇರಿಗಾರ್, ಅಮಿತ ದೇವಾಡಿಗ, ಕುಶಲಾಕ್ಷಿ ದೇವಾಡಿಗ ಮತ್ತು ಚಂದ್ರಕಲಾ ದೇವಾಡಿಗ ಇವರಿಗೆಲ್ಲಾ ಬಹುಮಾನಗಳನ್ನು ವಿತರಿಸಲಾಯಿತು.

"ಸೆಲ್ಯೂಟ್ ತಿರಂಗ - ಕರ್ನಾಟಕ ಸೆಲ್, ಮಹಾರಾಷ್ಟ್ರ " ಕ್ಕಾಗಿ ದೇವಾಡಿಗ ಸಂಘದಿಂದ, ಚುನಾಯಿತರಾದ ಶ್ರೀಮತಿ ಪ್ರಭಾವತಿ ದೇವಾಡಿಗ, ಪೂರ್ಣಿಮಾ ದೇವಾಡಿಗ, ಜಯಂತಿ ದೇವಾಡಿಗ, ಸುರೇಖ ದೇವಾಡಿಗ, ಜಯಂತಿ ಮೊಯ್ಲಿ, ರಮೇಶ್ ದೇವಾಡಿಗರನ್ನು ಪುಷ್ಪ ಗೌರವ ಕೊಟ್ಟು ಸನ್ಮಾನಿಸಲಾಯಿತು.
"ಒಂದು ನಿಮಿಷ" ಮತ್ತು "ಸಾಮಾನ್ಯ ಜ್ಞಾನ"ದ ಆಟಗಳನ್ನು ಜಯಂತಿ ದೇವಾಡಿಗ ಹಾಗೂ ಪೂರ್ಣಿಮಾ ದೇವಾಡಿಗರು ನಿರ್ವಹಿಸಿದಾಗ ಎಲ್ಲಾ ಮಹಿಳೆಯರು ಬಹಳ ಉತ್ಸಾಹದಿಂದ ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗದ ಸದಸ್ಯರು ಸುಮಾರು ಐವತ್ತೈದಕ್ಕೂ ಮಿಕ್ಕಿ ನೆರೆದಿದ್ದ ಮಹಿಳೆಯರಿಗೆ ಹರಿಶಿನ ಕುಂಕುಮವಿಟ್ಟು ಎಳ್ಳು-ಬೆಲ್ಲದ ಉಂಡೆಗಳನ್ನು ಹಂಚಿದರು. ಚಿಕ್ಕ ಫಲಾಹಾರದ ವ್ಯವಸ್ಥೆಯನ್ನು ಕಾರ್ಯದರ್ಶಿ ಪ್ರಮೀಳ ವಿ ಶೇರಿಗಾರ್ ಇವರು ಆಯೋಜಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಿ ದೇವಾಡಿಗ, ಇಂದುಮತಿ ದೇವಾಡಿಗ, ಗೀತಾ ದೇವಾಡಿಗ, ಸರೋಜಿನಿ ದೇವಾಡಿಗ, ರಮೇಶ್ ದೇವಾಡಿಗ ಇವರೆಲ್ಲ ಕನ್ನಡ ಜಾನಪದ ಹಾಗೂ ಚಿತ್ರಗೀತೆಗಳನ್ನು ಹಾಡಿದರು.
ಸಂಘದ ಗೌರವ ಪ್ರದಾನ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ, ಭಾಂಡುಪ್ ವಲಯದ ವೆಂಕಟೇಶ್ ದೇವಾಡಿಗ, ರಾಜೇಶ್ ದೇವಾಡಿಗ ಹಾಗೂ ಸಂಘದ ಸ್ಥಳೀಯ ಸಮನ್ವಯ ಸಮಿತಿಯ ಮಹಿಳಾ ಕಾರ್ಯದ್ಯಕ್ಷೆಯರಾದ ಶ್ರೀಮತಿ ಶಾಲಿನಿ ದೇವಾಡಿಗ, ಉಷಾ ದೇವಾಡಿಗ, ಸುಜಯ ದೇವಾಡಿಗ, ಲತಾ ಮೊಯ್ಲಿ, ಕುಸುಮ ದೇವಾಡಿಗ, ರೇಖಾ ದೇವಾಡಿಗ, ವಿಜಯಲಕ್ಷ್ಮಿ ದೇವಾಡಿಗರೂ ಉಪಸ್ಥಿತರಿದ್ದರು.
ಕುಸುಮ ದೇವಾಡಿಗರು ಪ್ರಾರ್ಥನೆ ಗೈದರೆ ಕಾರ್ಯಕ್ರಮದ ನಿರೂಪಣೆ ಹಾಗೂ ಕೊನೆಗೆ ಧನ್ಯವಾದವನ್ನು ಕಾರ್ಯದರ್ಶಿ ಪ್ರಮೀಳ ವಿ. ಶೇರಿಗಾರ್ ಮಾಡಿದರು. ನಿತೇಶ್ ದೇವಾಡಿಗರು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.