Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
DSM News

ದೇವಾಡಿಗ ಸಂಘ ಮುಂಬೈ- ಮಹಿಳಾವಿಭಾಗದ ವತಿಯಿಂದ ಆಟಿಡೊಂಜಿ ದಿನ ಆಚರಣೆ

ದೇವಾಡಿಗ ಮಹಿಳಾ ವಿಭಾಗದ ಆಟಿಡೊಂಜಿ ದಿನ ಕಾರ್ಯಕ್ರಮವು ಜುಲೈ 27ರಂದು ಸಂಘದ ದಾದರ್ ಸಭಾಂಗಣದ ದೇವಾಡಿಗ ಸೆಂಟರ್ ನಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ನೆರವೇರಿತು. ಆಟಿ ತಿಂಗಳು ಅಂದರೆನೇ, ಅದೊಂದು ವಿಶೇಷ, ಜೂನ್ ನಿಂದ ಪ್ರಾರಂಭವಾಗುವ ಮಳೆಗಾಲದೀಂದ ಮಿಂದ ಭುವಿಯ ಹಚ್ಚಹಸಿರಿನ ನೋಟ, ಕೃಷಿಯ ಉಳುಮೆ, ಬಿತ್ತನೆ, ಬತ್ತದ ಸಸಿ ನೆಡುವ ಕಾಯಕಗಳನ್ನು ಮುಗಿಸಿದ ಕೃಷಿಕನ ಹಾಗೂ ಉಳುವ ಎತ್ತಿನ ಆರಾಮದ ತಿಂಗಳು. ಪ್ರಕ್ರತಿಯ ಮಡಿಲಲ್ಲಿ ಸಿಗುವ ಹಚ್ಚನೆಯ ತೇವು, ತೊಜಂಕು, ಸೊಪ್ಪು, ಕಣಿಲೆ, ಲಾಂಬು ಮತ್ತು ಮನೆಯಲ್ಲಿ ಬೇಸಿಗೆ ಕಾಲದಲ್ಲಿ, ಉಪ್ಪು ನೀರಲ್ಲಿ ಹಾಕಿಟ್ಟ, ಉಪ್ಪಡ್ ಪಚ್ಚಿರು, ಗುಂಜಿ, ಮಾವಿನ ನಿರುಪ್ಪಡ್, ಹಪ್ಪಳ, ಸಂಡಿಗೆ, ಹೀಗೆ ಅನೇಕ ಆಹಾರಗಳನ್ನು ತಿಂದು ಬೆಳೆದ ನಾವು, ಈ ಮುಂಬಯಿ ನಗರದಲ್ಲಿ ಈ ಒಂದು ಕಾರ್ಯಕ್ರಮ ಆಟಿಡ್ಒಂಜಿ ದಿನ ಆಚರಿಸಲು ಬಲು ಸಂತೋಷವೆನಿಸುತ್ತದೆ ಎಂದು ಡಾಕ್ಟರ್ ರೇಖಾ ಚಂದ್ರಶೇಖರ್ ದೇವಾಡಿಗರು ತಮ್ಮ ದಕ್ಷಿಣ ಕನ್ನಡದಲ್ಲಿನ ಬಾಲ್ಯದ ನೆನಪನ್ನು ಸಬಿಕರ ಮುಂದೆ ಬಿಚ್ಚಿಟ್ಟರು. ತಾವು ಕಂಡ ಆಟಿ ಕೊಡಂಜೆ, ಆಟಿದ ಅಮಾವಾಸ್ಯೆಯ ಪಾಲೆದ ಕೆತ್ತೆಧ ಕಷಾಯ ಹೀಗೆ ಕೂಲಂಕುಷವಾಗಿ ನಿದರ್ಶನದೊಂದಿಗೆ ದೇವಾಡಿಗ ಮಹಿಳಾ ವಿಭಾಗದವರು ಆಯೋಜಿಸಿದ (27-7-2019) ಆಟಿಡೋಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಹಿರಿಯ ಸಧ್ಯಸ್ಯ ದೇವಾಡಿಗ ಸೆಂಟರ್ನ ಮ್ಯಾನೇಜರ್ ಶ್ರೀ ಶಂಬು ದೇವಾಡಿಗರ ತಾಯಿ ಶ್ರೀಮತಿ ಗುಲಾಬಿ ಐತು ದೇವಾಡಿಗ ಹಾಗೂ ಬೆಂಗಳೂರಿನ ದೇವಾಡಿಗ ಸಂಘದ ಹಿರಿಯ ಸಕ್ರಿಯ ಸದ್ಯಸ್ಯರಾಗಿರುವ ಶ್ರೀಮತಿ ಪ್ರಭಾವತಿ ಎಸ್ ಕುಡುಪಿಯವರನ್ನು ಫಲ ಪುಷ್ಪ ದೊಂದಿಗೆ ಸನ್ಮಾನಿಸಲಾಯಿತು. ದೇವಾಡಿಗ ಸಂಘದ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿಯವರು ಆಗಮಿಸಿದ ಸಬಿಕರನ್ನು ಸ್ವಾಗತಿಸಿ, ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಮಕ್ಕಳಿಗೂ ತಿಳಿಸಿ ಅವರನ್ನು ಇಂತ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು ಎಂದರು ಹಾಗೂ ಎಲ್ಲಾ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾದ್ಯಕ್ಷೆ ಮತ್ತು ಅವರ ತಂಡದ ಸಹಕಾರಕ್ಕೆ ಅಭಿನಂದಿಸಿದರು. ಎಂ ಫಿಲ್ ಪದವಿ ಪಡೆದ ಶ್ರೀಮತಿ ಸುರೇಖಾ ಹೇಮನಾಥ್ ದೇವಾಡಿಗ - ಮಹಿಳಾ ವಿಭಾಗದ ಉಪಾಕಾರ್ಯದಕ್ಷೆ ಇವರಿಗೆ ಹೂ ಗುಚ್ಛ ಕೊಟ್ಟು ಸನ್ಮಾನಿಸಲಾಯಿತು.

ಮಹಿಳಾ ವಿಭಾಗದ ಸರ್ವ ಕಾರ್ಯಕ್ಕೆ ಸಂಪೂರ್ಣ ಸಹಕಾರವನ್ನಿತ್ತ, ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ ಹಾಗೂ ಕಾರ್ಯಕಾರಿ ಸಮಿತಿಯ ಸದ್ಯಸರಿಗೆ ಕ್ರತಜ್ಞತೆಯನ್ನು ನೀಡಿ ಶ್ಲಾಘಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಯಚ್ ಮೋಹನ್ದಾಸ್ ರವರು ಮಹಿಳಾ ಸದ್ಯಸ್ಯರೆಯನ್ನು ಅಬಿನಂದಿಸಿದರು. ಶಿಕ್ಷಣ ಕಮಿಟಿಯ ಕಾರ್ಯಾಅಧ್ಯಕ್ಷ ಶ್ರೀ ಕೃಷ್ಣ ದೇವಾಡಿಗ, ಮಾಜಿ ಅಧ್ಯಕ್ಷ ಶ್ರೀ ಕೆ ಕೆ ಮೊಹನ್ದಾಸ್, ಆಟಿಯ ವಿಶೇಷತೆಯ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗರು ಆಟಿಯ ವಿಶೇಷ ವ್ಯಂಜನೆಗಳನ್ನು ತಂದ ಮಹಿಳೆಯರನ್ನು ಶ್ಲಾಘಿಸಿ, ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ವಿದ್ಯಾಬ್ಯಾಸಕ್ಕಾಗಿ ಪಡೆದುಕೊಳ್ಳಬೇಕು ಹಾಗೂ ಆಗಸ್ಟ್ ೧೫ರಂದು ನಡೆಯುವ ವಾರ್ಷಿಕ ಮಹಾಸಭೆಗೆ ಎಲ್ಲರೂ ಹಾಜರಿರಬೇಕೆಂದು ಸಭಿಕರಿಗೆ ಕರೆಯಿತ್ತರು.

ಮಹಿಳಾ ವಿಭಾಗದ ಉಪಾಕಾರ್ಯದಕ್ಷೆ ಶ್ರೀಮತಿ ಸುರೇಖಾ ದೇವಾಡಿಗರವರು ಅನೇಕ ಗೇಮ್ ಗಳನ್ನು ಆಯೋಜಿಸಿದರು. ಶ್ರೀಮತಿ ಪ್ರತಿಮಾ ಮೊಯಿಲಿ ಮತ್ತು ಶ್ರೀಮತಿ ಗೀತ ದೇವಾಡಿಗರು ವಿಜಯಿ ಗಳಾದರೆ ತುಳುನಾಡಿನ ಜಾನಪದ ರಸ ಪ್ರಶ್ನೆಗಳಲ್ಲಿ ಶ್ರೀ ರಘು ಮೊಯಿಲಿ ಮತ್ತು ಶ್ರೀ ವಿಶ್ವನಾಥ್ ದೇವಾಡಿಗರು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಶ್ರೀಮತಿ ಲೋಲಾಕ್ಷಿ ದೇವಾಡಿಗರ ಪ್ರಾಥನೆ ಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡು ಉಪಾಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿಯವರು ಆಟಿ ತಿಂಗಳ ವಿಶೇಷತೆಯನ್ನು, ಅವುಗಳ ಆಚರಣೆ, ಕೃಷಿಕ ಪಟ್ಟ ಆ ಕಷ್ಟಗಳ ದಿನ ಎಲ್ಲವನ್ನೂ ಕೂಲಂಕುಷವಾಗಿ ವಿವರಿಸಿದರು. ತುಳು ಪಾಡ್ದನವನ್ನು ಶ್ರೀಮತಿ ಹೇಮಾ ದೇವಾಡಿಗರು ಶುಶ್ರಾವ್ಯವಾಗಿ ಹಾಡಿದರು.

ಉಪ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಆಟಿಯ ವ್ಯಂಜನಗಳ ಪಟ್ಟಿ ಹಾಗೂ ತಯಾರಿಸಿ ತಂದವರ ಹೆಸರುಗಳನ್ನು ವಿವರವಾಗಿ ತಿಳಿಸಿದರು. ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸಹಕರಿಸಿದ ಸಿಟಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾದ್ಯಕ್ಷ ಶ್ರೀ ನಿತೇಶ್ ದೇವಾಡಿಗರಿಗೆ ಪುಷ್ಪ ಗೌರವವನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಅಕ್ಷಯ ಕೋಪೆರಟಿವೆ ಕ್ರೆಡಿಟ್ ಸೊಸೈಟೀಯ ಕಾರ್ಯಾದ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ, ಮಾಜಿ ಅಧ್ಯಕ್ಷ ಶ್ರೀ ಗೋಪಾಲ್ ಮೊಯಿಲಿ, ಯುವ ವಿಭಾಗದ ಮೆಂಟರ್ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀ ಪ್ರವೀಣ್ ನಾರಾಯಣ್ ಹಾಗೂ ಶ್ರೀ ಸುಂದರ ಮೊಯಿಲಿಯವರು ಆಗಮಿಸಿದರು. ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗರು ಮಾಡಿದರು.