Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿಯ 99 ನೇ ವಾರ್ಷಿಕ ಮಹಾಸಭೆ

ಸಂಘದ 99 ನೇ ವಾರ್ಷಿಕ ಮಹಾಸಭೆ – ನಮ್ಮ ಶತಮಾನೋತ್ಸವ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗುವಂತೇ ಆಚರಿಸೋಣ - ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ

ನಮ್ಮ ಶತಮಾನೋತ್ಸವ ಸಮಾರಂಭ ಬಹಳ ವೇಗವಾಗಿ ಸಮೀಪಿಸುತ್ತಿದೆ. ಇದುವರೆಗೆ ನಮ್ಮ ಯೋಜನೆಗಳೇ ತಯಾರಾಗುತ್ತಿದ್ದು ಇನ್ನು ಈ ಯೋಜನೆಗಳನ್ನ ಕಾರ್ಯರೂಪಕ್ಕೆ ತರುವಲ್ಲಿ ನಮ್ಮೆಲ್ಲರ ಧ್ಯೇಯ ಇರಬೇಕು. ಶತಮಾನೋತ್ಸವದ ಪ್ರಥಮ ಹೆಜ್ಜೆಯಾಗಿ ನಮ್ಮ ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಸಭಾಗ್ರಹವು ಪೂರ್ಣವಾಗಿ ನವೀಕೃತಗೊಂಡಿದ್ದು ಅದನ್ನು ಆಗಸ್ಟ್ ತಿಂಗಳ 23 ನೇ ತಾರೀಕಿಗೆ ಗಣಹೋಮಾದಿ ಧಾರ್ಮಿಕ ಕಾರ್ಯಕ್ರಮಗಳಿಂದ ಉದ್ಘಾಟನೆಯಾಗಲಿದ್ದು ಮುಂದಿನ ಹಂತದ ತಯಾರಿಯಾಗಿ ನೆರೂಲ್ ಇಲ್ಲಿಯ ದೇವಾಡಿಗ ಭವನದ ನೂತನೀಕರಣದ ಕೆಲಸ ಆರಂಭ ಆಗಲಿದೆ. ಅದಕ್ಕೆ ದೊಡ್ಡ ಮೊತ್ತದ ಖರ್ಚನ್ನು ಎದುರಿಸಬೇಕಾಗುತ್ತದೆ. ಆದರೆ ಸಂಘದ ಸದಸ್ಯರು ಮನಸ್ಸು ಮಾಡಿ ಉತ್ತಮ ರೀತಿಯಲ್ಲಿ ಸಹಕರಿಸಿದರೆ ಸಂಘದ ಅಂದಾಜು ವೆಚ್ಚಕ್ಕಿಂತಲೂ ಹೆಚ್ಚಿನ ಯಶಸ್ಸು ಪಡೆದು, ನಮ್ಮ ಶತಮಾನೋತ್ಸವ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗುವಂತೇ ಆಚರಿಸೋಣ ಎಂದು ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಹೇಳಿದರು

ಸಂಘದ 99 ನೇ ವಾರ್ಷಿಕ ಮಹಾಸಭೆಯು ಇಂದು ಇಲ್ಲಿನ ನೆರೂಲ್ನಲ್ಲಿ ಸಂಘದ ದೇವಾಡಿಗ ಭವನದಲ್ಲಿ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಅಲ್ಲದೆ ಸಂಘದ ಶತಮಾನೋತ್ಸವ ಆಚರಣೆಯನ್ನು ಮುಂದಿಟ್ಟುಕೊಂಡು ಒಮ್ಮತದದಿಂದ ಜರಗಿತು. ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗರು ಮಹಾಸಭೆಯ ಅಧ್ಯಕ್ಷ ಸ್ಥಾನ್ದಲ್ಲಿದ್ದುಕೊಂಡು ಮಹಾಸಭೆಯ ಪ್ರಕ್ರಿಯೆಗಳನ್ನು ಮುಂದುವರಿಸಿದರು. ಶ್ರೀ ಪ್ರವೀಣ್ ಎನ್. ದೇವಾಡಿಗರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಸಂಘದ ವಾರ್ಷಿಕ ಮಹಾಸಭೆಗೆ ಆಗಮಿಸಿದ, ಸಂಘದ ಏಳಿಗೆಯ ಬಗ್ಗೆ ಖಾಳಜಿಯಿಂದ ಮುಂದೆ ಬಂದು ಸಂಘಕ್ಕೆ ಸದಾ ಸಲಹೆ ನೀಡುತ್ತಿರುವ ಸಂಘದ ಹಿರಿಯ ಸದಸ್ಯರುಗಳು ಮತ್ತು ಮಾಜಿ ಅಧ್ಯಕ್ಷರುಗಳು ಇವರಿಗೆ ಧನ್ಯವಾದಗೈದರು. ಸಂಘದಲ್ಲಿ ಹಿಂದೆ ಏನೇನು ಆಗಿದೆ, ಈಗ ಏನು ಆಗುತ್ತಿದೆ, ಏನು ಮಾಡಬೇಕು ಮತ್ತು ಭವಿಷ್ಯದಲ್ಲಿ ನಮ್ಮ ಗುರಿ ಏನು ಆಗಬೇಕು ಎನ್ನುವ ಸಂಘದ ಧೋರಣೆ ಮತ್ತು ನಿಲುವು ಸ್ಪಷ್ಟವಾಗಿದ್ದು, ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಸಂಘವು ಅನೇಕ ಗುರಿಗಳನ್ನು ಹಮ್ಮಿಕೊಂಡಿದೆ. ಆದರೆ ಶತಮಾನೋತ್ಸವ ಮುಖ್ಯ. ಈ ಗುರಿ ತಲುಪಲು ಸಂಘದ ಯುವ ವಿಭಾಗ ಮತ್ತು ಮಹಿಳಾ ವಿಭಾಗಗಳ ಜವಾಬ್ದಾರಿ ಹೆಚ್ಚು ಇವೆ. ಅದರಂತೆಯೇ ಪ್ರಾದೇಶಿಕ ಸಮಿತಿಗಳು ಬಹಳ ಶ್ರಮ ವಹಿಸಬೇಕಾಗಿದೆ. ವ್ಯವಸ್ಥಾಪಕ ಸಮಿತಿಯ ಹೆಚ್ಚಿನವರು ಈಗಾಗಲೇ ಗ್ರೇಟ್ ಗ್ರಾಂಡ್ ಜಾಯಿಂಟ್ ಪ್ಯಾಟರ್ನ್ ಸದಸ್ಯರಾಗಿದ್ದಾರೆ ಮತ್ತು ಯಾವುದೇ ವಿಷಯಗಲ್ಲಿ ಹಿಂದುಳಿಯುವ ಹಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಶಕ್ತಿ ಮೀರಿ ತಮ್ಮ ಕೆಲಸಮಾಡುವ ಕಂಪನಿಗಳು, ಪರಿಚಯದ ಉದ್ಯೋಗಿ ಮಿತ್ರರು, ವ್ಯವಸಾಯಿಕರನ್ನು ಬೆಂಬಿಡದೆ ಜಾಹೀರಾತು ತರಬೇಕು. ಅದುವೇ ನಮ್ಮ ಮುಖ್ಯ ಸಾಧನ. ಶತಮಾನೋತ್ಸವದ ಅನೇಕ ಸಮಿತಿಗಳನ್ನು ರಚಿಸಿದ್ದು ಈ ಸಮಿತಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ, ಸಂಘದ ಮಾಜಿ ಅಧ್ಯಕ್ಷ ಮತ್ತು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಇವರು ಮಾತನಾಡದಿ ಸಂಘದ ವ್ಯವಸ್ಥಾಪಕ ಸಮಿತಿ ಶ್ರೀ ಪ್ರವೀಣ್ ದೇವಾಡಿಗರ ನೇತೃತ್ವದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವದಕ್ಕೆ ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದರು. ಸಂಘದ ಎರಡು ಮಾಲು ಮತ್ತೆ, ಒಂದು ದೇವಾಡಿಗ ಸೆಂಟರ್ ಮತ್ತು ದೇವಾಡಿಗ ಭವನ ನೆರೂಲ್, ಇದನ್ನು ನೂತನೀಕರಣಗೊಳಿಸುವುದು ಅಗತ್ಯ ಮತ್ತು ನಮ್ಮ ಸಮಾಜದ ಒಂದು ಗುರುತು ಎಂದರು. ಈಗ ಎಲ್ಲರ ಮನಸ್ಸಿನಲ್ಲಿರುವುದು ಸಂಘದ ಶತಮಾನೋತ್ಸವ ಆಚರಣೆ. ಅದರ ಸಲುವಾಗಿ ನಾವು ಕೆಲವೊಂದು ಸಮಿತಿಗಳ ನಿರ್ಮಾಣ ಮಾಡಿದ್ದೇವೆ. ಬರುವ ಆಗಸ್ಟ್ 25 ನೇ ತಾರೀಕಿಗೆ ಬಂಟರ ಸಂಘದಲ್ಲಿ ಸಭೆ ಕರೆದಿದ್ದು, ಅದರಲ್ಲಿ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಆದಷ್ಟು ಮಂದಿ ಈ ಸಭೆಯಲ್ಲಿ ಭಾಗವಹಿಸಬೇಕು ಎಂದರು. ಇದು ನಮಗೆ ದೇವರಿಂದ ದೊರಕಿದ ಒಂದು ಅವಕಾಶ. ಇದಕ್ಕೆ ಶಕ್ತಿಮೀರಿ ದುಡಿಯಬೇಕು. ಅದರಿಂದಾಗಿ ನಮ್ಮೆಲ್ಲರಿಗೆ ಪುಣ್ಯ ಪ್ರಾಪ್ತಿಯಾಗುವುದು ಅಲ್ಲದೆ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುವುದು ಎಂದರು. ರಾಮಾಯಣದಲ್ಲಿ ರಾಮನ ಮಾತಿನಂತೆ ಲಕ್ಷ್ಮಣನು ತನ್ನ ದರ್ಪವನ್ನು ಬದಿಗಿಟ್ಟು ವಿನಮ್ರತೆಯಿಂದ ದಶಕಂಠ ರಾವಣನಿಂದ ಜ್ಞಾನ ಪಡೆಯುವಂತೆ ನಾವು ಜ್ಞಾನವಂತರಾಗಬೇಕು ಎಂದರು. ನಮ್ಮ ಶಕ್ತಿ ಮತ್ತು ಬುದ್ಧಿಯನ್ನು ಉತ್ತಮ ಕಾರ್ಯಗಳಿಗೆ ನಿಯೋಜಿಸಬೇಕು. ಸಮಾಜಕ್ಕೆ, ದೇಶಕ್ಕೆ ನಮ್ಮ ಕೊಡುಗೆ ಬೇಕು. ಸಂಘದ ಈ ಕಾರ್ಯಕ್ರಮಕ್ಕೆ ನಮಗೆ ದೇಶ ಪರದೇಶಗಳಿಗೆ ಹೋಗಬೇಕಾಗಬಹುದು. ಎಲ್ಲರೂ ಮುಂದಿನ 25 ನೇ ತಾರೀಕಿನ ಸಭೆ ಮ್ಮತ್ತು ಸ್ನೇಹಮಿಲನಕ್ಕೆ ಹಾಜರಿದ್ದು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಎಂದು ಕರೆ ನೀಡಿದರು.

ವಿಶ್ವ ದೇವಾಡಿಗ ಮಹಾಮಂಡಳದ ಪ್ರ. ಕಾರ್ಯದರ್ಶಿ ಮತ್ತು ಸಂಘದ ಮಾಜಿ ಅಧ್ಯಕ್ಷರಾದ - ಶ್ರೀ ಹೆಚ್. ಮೋಹನದಾಸ್ ಯುಕ್ತಿಪೂರ್ಣವಾಗಿ ಮಾತನಾಡುತ್ತಾ ಸಂಘದ ಅನೇಕ ವಿಷಗಳನ್ನು ಕೂಲಂಕುಶವಾಗಿ ವಿವರಿಸುತ್ತಾ ಸಂಘಕ್ಕಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ನೀಡಿದರು. ಸಂಘದ ಅನೇಕ ಹಿರಿಯರಿಗೆ ನಮ್ಮ ಶತಮಾನೋತ್ಸವ ನೋಡುವ ಇಚ್ಛೆ ಇತ್ತು. ಅವರಲ್ಲಿ ವಿಶೇಷವಾಗಿ ಸಂಘದ ಬಹಳಷ್ಟು ಸೇವೆ ಮಾಡಿದ ಮತ್ತು ಇತ್ತೀಚೆಗೆ ನಿಧನರಾದ ಮಾಜಿ ಅಧ್ಯಕ್ಷರುಗಳು ಶ್ರೀ ದಿವಾಕರ್ ದೇವಾಡಿಗ ಮತ್ತು ಶ್ರೀ ಎಸ್.ಕೆ. ಶ್ರೀಯಾನ್ ಇವರು ಸಂಘಕ್ಕೆ ನೀಡಿದ ಸೇವೆಯನ್ನು ಬಣ್ಣಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಸಂಘದ ಶತಮಾನೋತ್ಸವ ಆಚರಣೆಯ ಬಗ್ಗೆ ಕೂಲಂಕುಷವಾದ ಮಾಹಿತಿ ನೀಡುತ್ತಾ, ಜಾಗತಿಕ ದೇವಾಡಿಗ ಮಹಾಮಂಡಳ, ಸಂಘದ ಆರ್ಥಿಕ ದ್ರಢತೆ, ಸಂಘದಲ್ಲಿ ಯುವಕರ, ಮಕ್ಕಳ ಮತ್ತು ಮಹಿಳೆಯರ ಸಮಾವೇಶ, ಸಂಘದ ಹಿರಿಯ ವ್ಯಕ್ತಿಗಳು ಸಂಘಕ್ಕಾಗಿ ನೀಡಿದ ತ್ಯಾಗ, ಮೊದಲಾದ ವಿಷಗಳ ಕಡೆ ಸದಸ್ಯರ ಗಮನ ಸೆಳೆದು ಎಲ್ಲರೂ ಮುಂದೆಬಂದು ತಮ್ಮ ತಮ್ಮ ತನು, ಮನ ಮತ್ತು ಧನದ ಕೊಡುಗೆ ನೀಡುವಂತೆ ಕೇಳಿಕೊಂಡರು.

ಸಂಘದ ಅಕ್ಷಯ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಶರು ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗರು ಮಾತನಾಡಿ ಎಲ್ಲರಿಗೂ ಶುಭ ಕೋರಿದರು. ಅಕ್ಷಯ ಕೋ ಆಪರೇಟಿವ್ ಸೊಸೈಟಿಯ ಬಗ್ಗೆ ಮಾಹಿತಿ ನೀಡಿ ಅದರ ಮುಂಬರುವ ಮಹಾಸಭೆಗೆ ಎಲ್ಲಾ ಷೇರುಧಾರಕರು ಹಾಜರಿರಬೇಕಾಗಿ ಕೇಳಿಕೊಂಡರು. ಸಂಘದ ಕಟ್ಟಡ ಸಮಿತಿಯ ಮುಖ್ಯಸ್ಥ ಮತ್ತು ಮಾಜಿ ಅಧ್ಯಕ್ಷರು ಶ್ರೀ ರವಿ ಎಸ್. ದೇವಾಡಿಗ ಇವರು ಮಾತನಾಡಿ ದೇವಾಡಿಗ ಸೆಂಟರ್ ದಾದರ್ ಮತ್ತು ದೇವಾಡಿಗ ಭವನ ನೆರೂಲ್ ಇದರ ನೂತನೀಕರಣದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇನ್ನೋರ್ವ ಮಾಜಿ ಅಧ್ಯಕ್ಷರು ಶ್ರೀ ಶ್ರೀನಿವಾಸ್ ಕರ್ಮರನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ರೀ ರಮೇಶ್ ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ಶ್ರೀ ಬೃಜೇಶ್ ನಿಟ್ಟೇಕರ್, ಮೊದಲಾದವರು ತಮ್ಮ ಅನಿಸಿಕೆಗಳನ್ನು ಮಂಡಿಸಿದರು. ಸಂಘದ ಈ ಮಹಾ ಸಭೆಗೆ ದೊಡ್ಡ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರುಆರಂಭದಲ್ಲಿ ಸಂಘದ ಗೌ.ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರು ಕಳೆದ ಮಹಾಸಭೆಯ ವರದಿಯನ್ನು ಓದಿ ಹೇಳಿ ಸಂಘದ ಸಂಪೂರ್ಣ ಲೆಕ್ಕ ಪತ್ರಗಳ ಮಾಹಿತಿ ನೀಡರು. ಸಂಘದ ಅಧ್ಯಕ್ಷರು ಎಲ್ಲ ವಿಷಯಗಳನ್ನೂ ಸಭೆಯಲ್ಲಿ ಮಂಡಿಸಿ ಸದಸ್ಯರ ಒಪ್ಪಿಗೆ ಪಡೆದರು. ಜೊತೆ ಖಜಾಂಚಿಗಳಾದ ಶ್ರೀ ಸುರೇಶ ದೇವಾಡಿಗ ಮತ್ತು ಶ್ರೀಮತಿ ಸುರೇಖಾ ದೇವಾಡಿಗ ಇವರು ಲೆಕ್ಕ ಪತ್ರಗಳ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀ ಮಾಲತಿ ಮೊಯಿಲಿ, ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರ ವಂದನಾರ್ಪಣೆ ಮತ್ತು ರಾಷ್ಟ್ರ ಗೀತೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.