Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಅದ್ದೂರಿಯ ಸ್ವಾತಂತ್ರೋತ್ಸವ ಆಚರಣೆ

ದೇವಾಡಿಗ ಸಂಘ ಮುಂಬಯಿ: ಅದ್ದೂರಿಯ ಸ್ವಾತಂತ್ರೋತ್ಸವ ಆಚರಣೆ
ನಮ್ಮಿಂದ ಸಂಘಟನೆ ಅಲ್ಲ, ಸಂಘಟನೆಯಿಂದ ನಾವು : ಶ್ರೀ ಪ್ರವೀಣ್ ಎನ್. ದೇವಾಡಿಗ

ನವಿ ಮುಂಬಯಿ, ಆ.15 : ಮುನ್ನೂರು ವರ್ಷಗಳ ಹಿಂದೆ ನಾವು ಗುಲಾಮರಾಗಿದ್ದೆವು. ಅಂದು ನಮ್ಮ ಆರ್ಥಿಕ ಸ್ಥಿತಿ ಜಗತ್ತಿನ ಒಂದನೇ ಕ್ರಮಾಂಕದಲ್ಲಿತ್ತು. ಆದರೆ ಈಗ ನಾವು ಐದನೇ ಸ್ಥಾನದಲ್ಲಿದ್ದೇವೆ. ನಮ್ಮ ಬೆಳೆವಣಿಗೆ ಕುಂಠಿತವಾದರೆ ನಮ್ಮನ್ನು ಗುಲಾಮರಾಗುವಂತೆ ದೇಶದ್ರೋಹಿಗಳು ಉತ್ಪನ್ನರಾಗತ್ತಾರೆ; ಆದುರಿಂದ ನಮ್ಮ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಇನ್ನೊಮ್ಮೆ ಸ್ವಾತಂತ್ರ ಹೋರಾಟ ನಡೆಸುವ ಸಂದರ್ಭ ಉತ್ಪನ್ನವಾಗಬಾರದು. ನಮ್ಮ ಚರಿತ್ರೆಯನ್ನು ಅನುಸರಿಸಿ ಮುಂದಿನ ಹೋರಾಟದ ತಯಾರಿ ನಡೆಸಬೇಕಾಗಬಹುದು. ಏನೇ ಆದರೂ ದೇಶ ಎಲ್ಲಕಿಂತ ದೊಡ್ಡದ್ದು. ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳಬೇಕು. ಏಕೆಂದರೆ ಇನ್ನೊಮ್ಮೆ ಸ್ವಾತಂತ್ರ್ಯ ಪಡೆಯುವ ಅಪೇಕ್ಷೆ ಬೇಡ. ಏನೇ ಆದರೂ ನಾವು ಸಂಘಟಿತರಾಗಬೇಕು. ನಮ್ಮಿಂದ ಸಂಘಟನೆ ಅಲ್ಲ. ಸಂಘಟನೆಯಿಂದ ನಾವು ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು ಎನ್ನುವುದಾಗಿ ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಹೇಳಿದರು.

ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿ ಇದರ ವತಿಯಿಂದ ದೇಶದ 78 ನೇ ಸ್ವಾತಂತ್ರ್ಯೋತ್ಸವದ ಮುಖ್ಯ ಧ್ವಜಾರೋಹಣ ಕಾರ್ಯಕ್ರಮವು ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ದೇವಾಡಿಗ ಭವನ ನೆರೂಲ್ ನವಿ ಮುಂಬಯಿ ಇಲ್ಲಿ ಬಹಳ ಅದ್ದೊರಿಯಿಂದ ಆಚರಿಸಲಾಯಿತು. ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಗಾನ ಹಾಡಿ ರಾಷ್ಟೀಯ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿದ ಸಂಘದ ಅಧ್ಯಕ್ಷರು ಈ ಮೇಲಿನ ಮಾತುಗಳನ್ನು ಹೇಳಿದರು. ತನ್ನ ಮಾತುಗಳನ್ನು ಮುಂದುವರಿಸುತ್ತಾ, ಶ್ರೀ ಪ್ರವೀಣ್ ದೇವಾಡಿಗರು ಸಂಘದ ಶತಮಾನೋತ್ಸವ ಆಚರಣೆಯ ಬಗ್ಗೆ ಮಾಹಿತಿ ನೀಡಿ ಎಲ್ಲರೂ ಒಮ್ಮತದ ಸಹಕಾರ ನೀಡಿದಲ್ಲಿ ನಮ್ಮ ಶತಮಾನೋತ್ಸವ ಆಚರಣೆ ವಿಜೃಂಭಿಸವುದಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ ದಾಸ್ ಮಾತನಾಡಿ ನಮ್ಮ ದೇಶದ ಸಂವಿದಾನದಲ್ಲಿ ನಮಗೆ ನೀಡಿದ ಸ್ವಾತಂತ್ರ್ಯವನ್ನು ನಾವು ದುರುಪಯೋಗ ಮಾಡಿಕೊಳ್ಳಬಾರದು. ಬರೆಯಲು ಬರುತ್ತದೆ ಎಂದು ನಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಿ ಏನೇನೊ ಅಲ್ಲ ಸಲ್ಲದ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಿದರೆ ಅದರಿಂದಾಗಿ ನಮ್ಮ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ನಾವು ನಮ್ಮ ನೇತಾರರನ್ನು ಅವಲಂಬಿಸಿ ಎಲ್ಲಾ ವಿಧಗಳಲ್ಲಿಯೂ ಸಂಘಟನೆಗೆ ಸಹಕರಿಸಬೇಕು ಎಂದು ಹೇಳಿ ಸಂಘದ ಶತಮಾನೋತ್ಸವದ ಗುರಿ ಮುಟ್ಟುವಲ್ಲಿ ಎಲ್ಲರೂ ಒಂದಾಗಬೇಕು ಎಂದು ಕರೆನೀಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಮಾತನಾಡಿ, ದೇಶದ ಪ್ರಧಾನಮಂತ್ರಿಯ ಇಂದಿನ ಭಾಷಣದ ಕುರಿತು ಚರ್ಚಿಸುತ್ತಾ ವಿಕಸಿತ ಭಾರತದಂತೆಯೇ ನಮ್ಮ ಸಮಾಜ, ಸಂಘವೂ ಬೆಳೆದು ವಿಕಾಸವಾಗಬೇಕು. ಅದಕ್ಕಾಗಿ ನಮ್ಮ ಸ್ವಾತಂತ್ರ್ಯ ಪಡೆಯಲು ನಮ್ಮ ಸೇನಾನಿಗಳು ಏಕತೆಯಿಂದ ಹೋರಾಟನಡೆಸಿ ಜಯಗಳಿಸಿಂದತೆಯೇ ನಾವು ಎಲ್ಲರೂ ಒಗ್ಗಟ್ಟಾಗಿದ್ದು ಸಂಘದ ಬೆಳವಣಿಗೆ, ಸಂಘದ ಶತಮಾನೋತ್ಸವವನ್ನು ಯಶಸ್ವಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ದುಡಿಯೋಣ ಎಂದು ಕರೆ ನೀಡಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಇವರು ಮಾತನಾಡಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಕೋರಿದರು. ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ದೇಶಕ್ಕಾಗಿ ಬಲಿದಾನ ಮಾಡಿದ ಸೇನಾನಿಗಳಿಗೆ ಗೌರವ ನೀಡಿ ಮಾತನಾಡುತ್ತಾ ಹೋರಾಟದ ಮೂಲಕ ನಮಗೆ ಸ್ವಾತಂತ್ರ್ಯ ದೊರಕಿದೆ. ಹೋರಾಟವಿಲ್ಲದೆ ಏನೂ ಪಡೆಯಲು ಸಾಧ್ಯವಿಲ್ಲ. ಅಂತೆಯೇ ನಮ್ಮ ಜೀವನದಲ್ಲಿಯೂ ಹೋರಾಟವನ್ನು ಮುಂದುವರಿಸನೇಕು. ಸಂಘದ ಶತಮಾನೋತ್ಸವ ಯಶಸ್ವಿಯಾಗಿಸಲು ನಮ್ಮೆಲ್ಲರ ಪ್ರಯತ್ನದ ಅಗತ್ಯವಿದೆ ಎಂದರು. ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ ಇವರು ಮಾತನಾಡಿ ನಾವು ನಾಗರಿಕರು ವಿಭಿನ್ನ, ಜಾತಿ, ಭಾಷೆ, ಸಮಾಜದವರಾಗಿದ್ದರೂ ನಾವೆಲ್ಲರೂ ಹಿಂದೂ ಧರ್ಮದವರು. ನಾವು ನಮ್ಮ ಹಿಂದೂ ಧರ್ಮ, ಸನಾತನ ಧರ್ಮವನ್ನು ಕಾಪಾಡಿ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು, ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಅದ್ಯಕ್ಷರುಗಳಾದ ಶ್ರೀ ರವಿ ಎಸ್. ದೇವಾಡಿಗ, ಶ್ರೀ ಶ್ರೀನಿವಾಸ್ ಪಿ. ಕರ್ಮರನ್, ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯಿಲಿ, ಸಮಿತಿ ಸದಸ್ಯರುಗಳಾದ ಶ್ರೀ ಸಿ.ಎ. ಶ್ರೀ ಜಗದೀಶ್ ದೇವಾಡಿಗ, ಶ್ರೀ ಜಯ ದೇವಾಡಿಗ, ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ಜಿ. ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ, ಸಾಂಸ್ಕ್ರತಿಕ ಸಮಿತಿ ಕಾರ್ಯಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ್ ಎಲ್ಲೂರು, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸೇರಿಗಾರ್, ಶ್ರೀಮತಿ ಸುನಂದಾ ಕರ್ಮರನ್, ಶ್ರೀಮತಿ ಉಮಾವತಿ ಗುಜರನ್, ಕುಮಾರಿ ತನ್ವಿ ಡಿ. ದೇವಾಡಿಗ, ವಿದ್ಯಾರ್ಥಿಗಳಾದ ಮಾಸ್ಟರ್ ಜೀವನ್ ಎನ್. ದೇವಾಡಿಗ, ಕುಮಾರಿ ಸನ್ನಿಧಿ ಎನ್. ದೇವಾಡಿಗ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿಗಳಾದ ಶ್ರೀಮತಿ ಸುರೇಖಾ ದೇವಾಡಿಗ, ಶ್ರೀ ಸುರೇಶ್ ದೇವಾಡಿಗ, ವ್ಯವಸ್ಥಾಪಕಿಯ ಸಮಿತಿ ಸದಸ್ಯರುಗಳಾದ ಶ್ರೀ ಪ್ರಭಾಕರ್ ದೇವಾಡಿಗ, ಶ್ರೀಮತಿ ಶುಭ ದೇವಾಡಿಗ, ಮೋಹನ ದಾಸ್ ಗುಜರನ್ ಮತ್ತು ಇತರ ವ್ಯವಸ್ಥಾಪಕಿಯ ಸಮಿತಿ ಸದಸ್ಯರು, ವಿವಿಧ ಪ್ರಾದೇಶಿಕ ಸಮಿತಿಗಳ ಸದಸ್ಯರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯಾಲಯ ದಾದರ್ ಪೂರ್ವದ ದೇವಾಡಿಗ ಸೆಂಟರ್ ಇಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ರಾಷ್ಟ್ರ ಧ್ವಜವನ್ನು ಹಾರಿಸಿ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ ದಾಸ್, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಸಂಘದ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಕಾರ್ಯಾಲಯದ ವ್ಯವಸ್ಥಾಪಕರು ಶ್ರೀ ಶಂಭು ದೇವಾಡಿಗ ಹಾಗೂ ಸಿಟಿ ವಲಯದ ಪ್ರಾದೇಶಿಕ ಸಮಿತಿಯ ಸದಸ್ಯರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು. ಬಳಿಕ ಎಲ್ಲರಿಗೂ ಸಿಹಿ ಹಂಚಲಾಯಿತು.