Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: 77 ನೇ ಸ್ವಾತಂತ್ರ್ಯೋತ್ಸವ ಆಚರೆಣೆ. ಯುವಕರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅತ್ಯಗತ್ಯ: ಪ್ರವೀಣ್ ಎನ್. ದೇವಾಡಿಗ

ದೇವಾಡಿಗ ಸಂಘ ಮುಂಬಯಿ: 77 ನೇ ಸ್ವಾತಂತ್ರ್ಯೋತ್ಸವ ಆಚರೆಣೆ. ಯುವಕರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅತ್ಯಗತ್ಯ: ಪ್ರವೀಣ್ ಎನ್. ದೇವಾಡಿಗ

ನವಿ ಮುಂಬಯಿ, ಆ. 15 : ನಮ್ಮ ಸಂಘವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಯುವಕರನ್ನು ಸಂಘದ ಕಡೆಗೆ ಆಕರ್ಷಿಸುವ ಸಲುವಾಗಿ ಸಂಘವು ಯುವ ಸಮಾವೇಶದ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣದ ಕುರಿತು ಸಂಘದ ಯೋಜನೆಯನ್ನು ಈಗಾಗಲೇ ನಿರೂಪಿಸಲಾಗಿದೆ. ಶಿಕ್ಷಣ ಸಂಸ್ಥೆಯ ಸ್ಥಾಪನೆ ನಮ್ಮ ದೊಡ್ಡ ಯೋಜನೆ. ಈ ಯೋಜನೆಯನ್ನು ಗುರಿ ಮುಟ್ಟಿಸುವಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ. ಅದರ ಬದಲಾಗಿ ಬೇರೆ ಏನು ಮಾಡಬಹುದು ಎನ್ನುವುದಾಗಿಯೂ ಚಿಂತನೆ ನಡೆಯಿತ್ತಿದೆ. ಈ ಮೈಲುಗಲ್ಲು ಯೋಜನೆಗಳನ್ನು ಸಾಕ್ಷಾತ್ಕರಿಸುವ ದೃಷ್ಟಿಯಲ್ಲಿ ಸಂಘವು ಮುಂದುವರಿಯುತ್ತಿದೆ. ಇದಕ್ಕಾಗಿ ಯುವಕರ ಸಹಕಾರ ಅತ್ಯಗತ್ಯ. ನಾವು ಸಮಯವನ್ನು ಗೌರವಿಸಬೇಕು, ಇಲ್ಲವಾದರೆ ಸಮಯವು ನಮ್ಮನ್ನು ಗೌರವಿಸುದಿಲ್ಲ ಎಂದು ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಸದಸ್ಯರನ್ನು ಉದ್ದೇಶಿಸಿ ಹೇಳಿದರು.
ದೇಶದ 77 ನೇ ಸ್ವಾತಂತ್ರ್ಯೋತ್ಸವ ಆಚರೆಣೆಯ ಸಂದರ್ಭದಲ್ಲಿ ನೆರೂಲ್ನಲ್ಲಿರುವ ದೇವಾಡಿಗ ಭವನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಮಾತನಾಡಿದ ಅವರು ಈ ಮೇಲಿನಂತೆ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯ ನೀಡಿದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಪಿ. ಕರ್ಮರನ್ ಮಾತನಾಡಿ ನಮ್ಮ ದೇಶಕ್ಕಾಗಿ ಹೇಗೆ ಸ್ವಾತಂತ್ರ್ಯ ಸೇನಾನಿಗಳು ಮತ್ತು ಮುಖಂಡರು ತಮ್ಮ ಪ್ರಾಣ ಕಳೆದುಕೊಂಡರೋ, ಅದೇ ರೀತಿಯಲ್ಲಿ ನಮ್ಮ ಹಿರಿಯರು ಕೂಡ ತಮ್ಮ ತ್ಯಾಗದಿಂದಾಗಿ ಸಂಘವನ್ನು ಕಟ್ಟಿ ಬೆಳೆಸಿ ಇಷ್ಟು ಎತ್ತರಕ್ಕೆ ಏರುವಲ್ಲಿ ದೃಢವಾದ ನಿಲುವನ್ನು ಹೊಂದಿದ್ದರು, ಅದರಿಂದಾಗಿ ನಮ್ಮ ಸಂಘ ಪ್ರಗತಿ ಹೊಂದುತ್ತಾ ದೇವಾಡಿಗ ಭವನವನ್ನು ನಿರ್ಮಿಸಿ ನಮ್ಮ ಸಂಘದ ಅಸ್ತಿತ್ವತ್ವನ್ನು ಮೆರೆಯುವಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಅವರಿಗೆ ಕ್ರತಜ್ನತೆನ್ನು ನೀಡಿ ಅವರ ತ್ಯಾಗವನ್ನು ನೆನಪಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ನೆನೆಪಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಮೊಯ್ಲಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಬ್ರಿಜೆಶ್ ನಿಟ್ಟೇಕರ್, ಶ್ರೀ ಹೇಮನಾಥ್ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ್ ಎಲ್ಲೂರು, ಸಾಂಸ್ಕ್ರತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾದ ಶ್ರೀಮತಿ ಜಯಂತಿ ಎಂ. ದೇವಾಡಿಗ, ಸಂಘದ ಜೊತೆ ಕೋಶಾಧಿಕಾರಿ ಶ್ರೀಮತಿ ಸುರೇಖಾ ದೇವಾಡಿಗ, ಶ್ರೀ ಹೇಮನಾಥ ದೇವಾಡಿಗ ಮೊದಲಾದವರು ವಿಧ ವಿಧದಲ್ಲಿ ಸ್ವಾತ್ರ್ಯೋತ್ಸವದ ಮತ್ತು ಸಂಘದ ಭವಿಷ್ಯದ ಬಗ್ಗೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹೆಚ್. ಮೋಹನದಾಸ್ ಮಾತನಾಡುತ್ತಾ ಸಂಘವನ್ನು ಸ್ಥಾಪಿಸಿದ ಸಂಘದ ಹಿರಿಯರನ್ನು ನೆನೆಯುತ್ತಾ, ಸಂಘದ ಬೆಳವಣಿಗೆ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಆದರೆ ಸಂಘದ ಯುವಕರ ಸಬಲೀಕರಣ ಕುರಿತು ಚಿಂತೆ ವ್ಯಕ್ತ ಪಡಿಸಿದರು. "ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗರು ನಮ್ಮ ಸಂಘದ ಪಿ.ಟಿ. ಉಷಾ ಇದ್ದ ಹಾಗೆ, ಅಂದರೆ ಮಹಿಳಾ ಸಬಲೀಕರಣ ಆಗುತ್ತಿದ್ದು ಯುವಕರ ಸಬಲೀಕರಣ ಆಗಬೇಕಾಗಿದೆ" ಎಂದು ಹೇಳಿದರು.
ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರು ಮಾತನಾಡಿ, ದೇಶಕ್ಕಾಗಿ ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರನ್ನು ನೆನೆದು, ನಾಗರಿಕರು ದೇಶದ ಹಿತ ದೃಷ್ಟಿಯಲ್ಲಿ ಕೆಲಸ ಮಾಡುತ್ತಾ ದೇಶದ ಭದ್ರತೆಗಾಗಿ ಸದಾ ತತ್ಪರತೆಯಲ್ಲಿ ಇರಬೇಕೆಂದು ಹೇಳಿದರು ಮತ್ತು ಸಂಘದಲ್ಲಿ ಎಲ್ಲರೂ ಒಮ್ಮತದಿಂದ ಸಂಘದ ಬೆಳವಣಿಗೆಗೆ ಸದಸ್ಯರು ಕೈ ಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಸಂಘದ ಜೊತೆ ಕೋಶಾಧಿಕಾರಿ ಶ್ರೀ ಸುರೇಶ್ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರಾದ ಶ್ರೀಮತಿ ಜಯಂತಿ ಮೊಯ್ಲಿ. ಶ್ರೀಮತಿ ರಂಜನಿ ಮೊಯ್ಲಿ, ಮಾಜಿ ಯುವ ಕಾರ್ಯಾಧ್ಯಕ್ಷ ಶ್ರೀ ಹರೀಶ್ ದೇವಾಡಿಗ, ವ್ಯವಸ್ಥಾಪಕ ಮಂಡಳಿಯ ಶ್ರೀ ಜಗದೀಶ್ ವಿ. ದೇವಾಡಿಗ, ಸಿಟಿ ವಲಯದ ಕಾರ್ಯಧ್ಯಕ್ಷರಾದ ಶ್ರೀ ಭಾಲಚಂದ್ರ ದೇವಾಡಿಗ, ಮಾಜಿ ಜೊತೆ ಕೋಶಾಧಿಕಾರಿ ಶ್ರೀ ದಯಾನಂದ್ ದೇವಾಡಿಗ, ನವಿ ಮುಂಬಯಿ ವಲಯದ ಮಾಜಿ ಕಾರ್ಯಾಧ್ಯಕ್ಷರು ಶ್ರೀ ಆನಂದ್ ಸೇರಿಗಾರ, ಸದಸ್ಯರಾದ ಶ್ರೀಮತಿ ಶಾಂತ ಪಿ. ದೇವಾಡಿಗ, ಶ್ರೀಮತಿ ಸುನಂದಾ ಕರ್ಮರನ್,ಶ್ರೀ ಶಂಕರ್ ದೇವಾಡಿಗ ಯುವ ವಿಭಾಗದ ಕುಮಾರಿ ತನ್ವಿ ದೇವಾಡಿಗ, ದೇವಾಡಿಗ ಭವನದ ಪ್ರಬಂಧಕರಾದ ಶ್ರೀ ಜಾರಪ್ಪ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಸಂಘದ ದಾದರ್ ಕಚೇರಿಯಲ್ಲಿಯೂ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನದಾಸ್, ಸಂಘದ ಗೌ. ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಬ್ರಿಜೆಶ್ ನಿಟ್ಟೇಕರ್, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ರಂಜನಿ ಮೊಯ್ಲಿ ಸಿಟಿ ವಲಯದ ಕಾರ್ಯಧ್ಯಕ್ಷರಾದ ಶ್ರೀ ಭಾಲಚಂದ್ರ ದೇವಾಡಿಗ, ಶ್ರೀ ರಮೇಶ್ ಮೊಯ್ಲಿ ಇವರ ಉಪಸ್ಥಿತಿಯಲ್ಲಿ ಮತ್ತು ಸಂಘದ ಕಚೇರಿಯ ಪ್ರಬಂಧಕರಾದ ಶ್ರೀ ಶಂಭು ದೇವಾಡಿಗ ಇವರ ಸಹಕಾರದೊಂದಿಗೆ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯ ಮಾಡಿದರು.