Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ಪ್ರಜಾಪ್ರಭುತ್ವ ದಿನ ಆಚರಣೆ

ದೇವಾಡಿಗ ಸಂಘ ಮುಂಬಯಿ: ಪ್ರಜಾಪ್ರಭುತ್ವ ದಿನ ಆಚರಣೆ

   ನವಿ ಮುಂಬಯಿ, ಜ. 26: ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿಯ ವತಿಯಿಂದ ಭಾರತದ 76ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಮತ್ತು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಸಂಘದ ಮುಖ್ಯ ಕಾರ್ಯಾಲಯ ದೇವಾಡಿಗ ಸೆಂಟರ್ ದಾದರ್ ಪೂರ್ವ ಇಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ರಾಷ್ಟ್ರದ ಭಾವುಟ ಹಾರಿಸಿ ಧ್ವಜ ವಂದನೆ ಸಲ್ಲಿಸಿದರು. ಬಳಿಕ ಎಲ್ಲರೂ ಸೇರಿ ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನ ಹಾಡಿದರು. ಈ ಸಂದರ್ಭದಲ್ಲಿ ಸಂಘದ ಸಿಟಿ ವಲಯ ಪ್ರಾದೇಶಿಕ ಸಮಿತಿಯ ಸದಸ್ಯರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶ್ರೀ ನರೇಶ್ ದೇವಾಡಿಗರು ಮಾತನಾಡಿ ಸಂಘದ ಶತಮಾನೋತ್ಸವ ವರ್ಷದ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲರೂ ಸಹಕರಿಸಬೇಕಾಗಿ ಕೇಳಿಕೊಂಡು ಎಲ್ಲರಿಗೂ ಪ್ರಜಾಪ್ರಭುತ್ವ ದಿನದ ಶುಭಾಶಯ ನೀಡಿದರು.

ಸಂಘದ ಮುಖ್ಯ ಧ್ವಜಾರೋಹಣ ಕಾರ್ಯಕ್ರಮವು ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ದೇವಾಡಿಗ ಭವನ ನೆರೂಲ್ ನವಿ ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ದೇಶದ ಭಾವುಟ ವನ್ನು ಹಾರಿಸಿ ಧ್ವಜ ವಂದನೆ ಸಲ್ಲಿಸಿದರು ಮತ್ತು ಸಂಘದ ಎಲ್ಲಾ ಸದಸ್ಯರಿಗೆ ದೇಶದ ೭೬ನೇ ಗಣತಂತ್ರ ದಿನದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಂಘದ ವ್ಯವಸ್ಥಾಪಕಿಯ ಸಮಿತಿ ಸದಸ್ಯರು, ಪ್ರಾದೇಶಿಕ ಸಮಿತಿ ಸದಸ್ಯರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಎಲ್ಲರೂ ಸೇರಿ ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನ ಹಾಡಿದರು. ಈ ಸಂದರ್ಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರು, ಸಂಘದ ಶತಮಾನೋತ್ಸವ ಆಚರಣೆಯ ಬಗ್ಗೆ ಎಲ್ಲರ ಗಮನ ಸೆಳೆದರು. ಸಂಘದ ಶತಮಾನೋತ್ಸವದ ತಯಾರಿ ಮಂದಗತಿಯಲ್ಲಿ ನಡೆಯುತ್ತಿದ್ದು ನಿರ್ದಿಷ್ಟ ಗುರಿಮುಟ್ಟಲು ಸದಸ್ಯರ ಹೆಚ್ಚಿನ ಸಹಕಾರ ಅಗತ್ಯ ಇದೆ ಎಂದು ಒತ್ತಿ ಹೇಳಿದರು. ಶತಮಾನೋತ್ಸವದ ದಿನ ಬಹಳ ವೇಗದಲ್ಲಿ ಸಮೀಪಿಸುತ್ತಿದ್ದು ಇನ್ನು ಸದಸ್ಯರು ಚುರುಕಿನಿಂದ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.

ಸಂಘದ ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನ ದಾಸ್ ಇವರು ಮಾತನಾಡಿ ಸಂಘದ ಶತಮಾನೋತ್ಸವ ಆಚರಣೆ ಉತ್ತಮ ರೀತಿಯಲ್ಲಿ ನಡೆಯುತ್ತದೆ ಎಂದು ಆಶಯ ವ್ಯಕ್ತಪಡಿಸಿ ಸದಸ್ಯರು ಎಲ್ಲರೂ ಒಮ್ಮತದಿಂದ ಮುಂದೆ ಬಂದು ಕೈ ಜೋಡಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಪಿ. ಕರ್ಮರನ್, ಶ್ರೀ ರವಿ ಎಸ್. ದೇವಾಡಿಗ, ಉಪಾಧ್ಯಕ್ಷರುಗಳಾದ ಶ್ರೀ ನರೇಶ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಮೊಯ್ಲಿ, ಗೌ.ಪ್ರ. ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಅಡ್ವೋಕೇಟ್ ಶ್ರೀ ಪ್ರಭಾಕರ್ ದೇವಾಡಿಗ, ಜೊತೆ ಖಜಾಂಚಿ ಶ್ರೀಮತಿ ಸುರೇಖಾ ದೇವಾಡಿಗ, ಸದಸ್ಯರಾದ ಶ್ರೀ ರಘು ಮೊಯ್ಲಿ, CA ಶ್ರೀ ಜಗದೀಶ್ ದೇವಾಡಿಗ, ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆಯರಾದ ಶ್ರೀಮತಿ ಪ್ರತಿಭಾ ದೇವಾಡಿಗ ಮತ್ತು ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವೋಕೇಟ್ ಬ್ರಿಜೇಶ್ ನಿಟ್ಟೇಕರ್, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್, ಶ್ರೀಮತಿ ಉಮಾವತಿ ಗುಜರನ್, ಶ್ರೀಮತಿ ಸುನಂದಾ ಕರ್ಮರನ್, ಶ್ರೀಮತಿ ಸುಜಯ ದೇವಾಡಿಗ, ಶ್ರೀ ಹೇಮನಾಥ ದೇವಾಡಿಗ, ಮಾಸ್ಟರ್ ಜೀವನ್ ಎನ್. ದೇವಾಡಿಗ ಮೊದಲಾದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ, ಜೊತೆ ಖಜಾಂಚಿ ಶ್ರೀ ಸುರೇಶ್ ಆರ್. ದೇವಾಡಿಗ, ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ಶ್ರೀ ಜಯ ಎಲ್. ದೇವಾಡಿಗ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸೇರಿಗಾರ್, ಚೆಂಬೂರು ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ರಾಮಣ್ಣ ದೇವಾಡಿಗ, ಶ್ರೀಮತಿ ನಿರ್ಮಲಾ ಆರ್. ದೇವಾಡಿಗ ಶ್ರೀ ಸದಾಶಿವ ದೇವಾಡಿಗ, ನವಿ ಮುಂಬಯಿ ವಲಯದ ಶ್ರೀ ನಾಗರಾಜ್ ದೇವಾಡಿಗ, ಸಚಿನ್ ದೇವಾಡಿಗ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಶ್ರೀ ದೀಕ್ಷಿತ್ ದೇವಾಡಿಗ, ಶ್ರೀಮತಿ ದೀಕ್ಷಾ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ ಮತ್ತು ಶ್ರೀಮತಿ ಲತಾ ಆನಂದ್ ಸೇರಿಗಾರ್, ಮಾಜಿ ಕಾರ್ಯಧ್ಯಕ್ಷೆಯಾರಾದ ಶ್ರೀಮತಿ ಜಯಂತಿ ಮೊಯಿಲಿ ಮತ್ತು ಶ್ರೀಮತಿ ರಂಜನಿ ಮೊಯ್ಲಿ, ಕ್ರೀಡಾ ಸಮಿತಿಯ ಶ್ರೀಮತಿ ಶುಭ ದೇವಾಡಿಗ, ಕುಮಾರಿ ರಕ್ಷಾ ದೇವಾಡಿಗ ಸಿಟಿ ವಲಯದ ಮಾಜಿ ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ಗೀತಾ ದೇವಾಡಿಗ, ನವಿ ಮುಂಬಯಿ ಮಹಿಳಾ ವಿಭಾಗದ ಶ್ರೀಮತಿ ಧನವತಿ ದೇವಾಡಿಗ, ಶ್ರೀಮತಿ ಮಲ್ಲಿಕಾ ದೇವಾಡಿಗ, ಮಾಸ್ಟರ್ ಶ್ರೇಯಾಂಸ್ ದೇವಾಡಿಗ ಮೊದಲಾದವರು ಭಾಗವಹಿಸಿದರು.

ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿದರು. ಗಣರಾಜ್ಯೋತ್ಸವದ ಅಂಗವಾಗಿ ಎಲ್ಲರಿಗೂ ಮಿಠಾಯಿ ವಿತರಣೆಯ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.