Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ:ಅದ್ದೂರಿಯ ಗಣತಂತ್ರ ದಿನ ಆಚರಣೆ

ದೇವಾಡಿಗ ಸಂಘ ಮುಂಬಯಿ:ಅದ್ದೂರಿಯ ಗಣತಂತ್ರ ದಿನ ಆಚರಣೆ

    ನವಿ ಮುಂಬಯಿ, ಜ. ೨೬: ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿ ದೇಶದ ೭೫ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಮತ್ತು ವಿವಿಧ ಕಾರ್ಯಕರಮಗಳಿಂದಿಗೆ ಆಚರಿಸಲಾಯಿತು. ಸಂಘದ ಮುಖ್ಯ ಕಾರ್ಯಾಲಯ ದೇವಾಡಿಗ ಸೆಂಟರ್ ದಾದರ್ ಪೂರ್ವ ಇಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ರಾಷ್ಟ್ರ ಧ್ವlಜಾರೋಹಣ ಗೈದು ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಸಂಘದ ಸಿಟಿ ವಲಯದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಭಾಲಚಂದ್ರ ದೇವಾಡಿಗ, ಮುಂಬಯಿ ಆಕಾಶವಾಣಿ ಪ್ರಸಿದ್ಧಿಯ ಶ್ರೀಮತಿ ಸುಶೀಲ ದೇವಾಡಿಗ, ಕಾರ್ಯಾಲಯದ ವ್ಯವಸ್ಥಾಪಕರು ಶ್ರೀ ಶಂಭು ದೇವಾಡಿಗ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು. ಶ್ರೀ ನರೇಶ್ ದೇವಾಡಿಗರು ಎಲ್ಲರಿಗೂ ಶುಭಾಶಯ ನೀಡಿದರು ಬಳಿಕ ರಾಷ್ಟ್ರಗೀತೆ ಹಾಡಿ ಕಾರ್ಯಕ್ರಮ ಸಂಪನ್ನಗೊಂಡಿತು .

ಮುಖ್ಯ ಧ್ವಜಾರೋಹಣ ಕಾರ್ಯಕ್ರಮವು ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ದೇವಾಡಿಗ ಭವವನ ನೆರೂಲ್ ನವಿ ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಧ್ವಜಾರೋಹಣ ಗೈದರು ಬಳಿಕ ಸದಸ್ಯರೆಲ್ಲರೂ ಸೇರಿ ರಾಷ್ಟ್ರ ಗೀತೆ ಮತ್ತು ರಾಷ್ಟ್ರಗಾನ ಹಾಡಿದರು. ಈ ಕಾರ್ಯಕ್ರಮಕ್ಕೆ ಸಂಘದ ಆಡಳಿತ ಸಮಿತಿ ಸದಸ್ಯರು, ಪ್ರಾದೇಶಿಕ ಸಮಿತಿ ಸದಸ್ಯರು ವಿಶೇಷವಾಗಿ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಸದಸ್ಯರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರು, ಡಾ. ಬಿ. ಆರ್ ಅಂಬೇಡ್ಕರ್ ಇವರ ಅಧ್ಯಕ್ಷತೆಯಲ್ಲಿ ರಚನೆಯಾದ ಭಾರತದ ಸಂವಿಧಾನದ ಬಗ್ಗೆ ತಿಳುವಳಿಕೆ ನೀಡಿ ದೇಶದ ಆಡಳಿತ ಯಾವ ರೀತಿಯಲ್ಲಿ ನಡೆಯಬೇಕು, ಅದರ ಮಹತ್ವವೇನು, ಭಾರತದ ನಾಗರಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಅಧಿಕಾರಗಳ ಬಗ್ಗೆ ಅರಿವು ಮೂಡಿಸಿದರು. ಈ ಸಂವಿಧಾನದಿನದಾಗಿ ದೇಶದ ನ್ಯಾಯಾವಸ್ಥೆ, ನಮ್ಮ ಅಸ್ಥಿತ್ವಕ್ಕೆ ಕಾರಣವಾಗಿದ್ದು ಇದರ ಜೋಪಾಸನೆ, ರಕ್ಷಣೆ ನಾವೆಲ್ಲರೂ ಮಾಡಬೇಕು ಇದು ನಮ್ಮ ಕರ್ತವ್ಯ, ಎಂದರು. ಅಲ್ಲದೆ ಭಾರತದ ಏಕತೆ, ಅಖಂಡತೆ, ಸರ್ವ ಧರ್ಮ ಸಮಭಾವದ ಭಾವನೆ ಮತ್ತು ಸಾರ್ವಬ್ಹೌಮತೆಯನ್ನು ಕಾಪಾಡಿಕೊಳ್ಳುವುದು ಬರುವುದು ಆದ್ಯ ಕರ್ತವ್ಯ ಎಂದು ಹೇಳುತ್ತಾ ಎಲ್ಲರಿಗೂ ಪ್ರಜಾಪ್ರಭುತ್ವ ದಿನದ ಶುಭ ಕೋರಿದರು. ಸಂಘದ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ್ ಎಲ್ಲೂರು ಮಾತಾಡುತ್ತಾ, ಡಾ. ಬಿ. ಆರ್ ಅಂಬೇಡ್ಕರ್ ಇವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನೆಯಾದ ರೀತಿ ಮತ್ತು ಅದರ ಭಾರತದಲ್ಲಿ ಅದರ ಅನುಷ್ಠಾನದ ರೀತಿಯಯನ್ನು ವಿವರಿಸಿ ಎಲ್ಲರಿಗೂ ಶುಭ ಕೋರಿದರು. ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಬಾಕರ್ ದೇವಾಡಿಗರು ಮಾತನಾಡಿ; ದೇಶದ ಪ್ರಜಾಸತ್ತೆ ಇದರ ಬಗ್ಗೆ ಮಾತನಾಡಿ ಭಾರತೀಯ ನಾಗರಿಕರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ದೇಶದ ಏಕತೆ, ಅಖಂಡತೆ, ಸಾರ್ವಬ್ಹೌಮತೆಯನ್ನು ಕಾಪಾಡಿಕೊಳ್ಳುವಂತೆ ಸಂಘ ಸಂಸ್ಥೆಗಳಲ್ಲಿಯೂ ಎಲ್ಲರೂ ಒಗ್ಗಟ್ಟಿನಿಂದ ಸೇವೆನೀಡುತ್ತಾ ಸಂಘದ ಏಳಿಗೆಯೇ ಸದಸ್ಯರ ಏಳಿಗೆ ಅದಕ್ಕಾಗಿ ಸಂಘದ ಚಟುವಟಿಕೆಗಳಲ್ಲಿ ಸಹಭಾಗಿಯಾಗಿ ಸಂಘವನ್ನು ಬೆಳೆಸಬೇಕು ಎಂದು ಹೇಳಿದರು. ಮತ್ತು ಸೇರಿದ ಎಲ್ಲಾ ಬಾಂಧವರಿಗೆ ಅಭಿನಂದನೆ ಸಲ್ಲಿಸಿ ವಂದನೆ ಸಲ್ಲಿಸಿದರು. ಸಂಘದ ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ,, ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಮೊಯಿಲಿ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ ಮೊದಲಾದವರು ಶುಭ ಕೋರಿದರು. ಗಣರಾಜ್ಯೋತ್ಸವದ ಅಂಗವಾಗಿ ಎಲ್ಲರಿಗೂ ಸಿಹಿ ವಿತರಿಸಿದರು.