Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ : ಪ್ರಜಾಪ್ರಭುತ್ವ ದಿನ ಆಚರಣೆ

ದೇವಾಡಿಗ ಸಂಘ ಮುಂಬಯಿ : ಪ್ರಜಾಪ್ರಭುತ್ವ ದಿನ ಆಚರಣೆ

   ನವಿ ಮುಂಬಯಿ : ಭಾರತದ 74ನೇ ಪ್ರಜಾಪ್ರಭುತ್ವ ದಿನವನ್ನು, ದೇವಾಡಿಗ ಸಂಘ ಮುಂಬಯಿ ಇದು ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಮುಂಜಾನೆ ಸಂಘದ ದಾದರ್ ಪೂರ್ವದ ದೇವಾಡಿಗ ಸೆಂಟರ್ ಇಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ಇವರು ಸಮಿತಿ ಸದಸ್ಯರು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿದರು ಮತ್ತು ಸಿಹಿ ತಿಂಡಿ ವಿತರಿಸಿದರು.

ಸಂಘದ ಮುಖ್ಯ ಕಾರ್ಯಕ್ರಮ ಸಂಘದ ಪ್ರಾದೇಶಿಕ ಸಂಸ್ಕೃತಿ ಕೇಂದ್ರ, ದೇವಾಡಿಗ ಭವನ ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಶ್ರೀಮತಿ ಪ್ರಮೀಳಾ ಪ್ರವೀಣ್ ದೇವಾಡಿಗ, ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಎಚ್. ಮೋಹನದಾಸ್, ಶ್ರೀ ಶ್ರೀನಿವಾಸ್ ಕರ್ಮರನ್, ಮಾಜಿ ಉಪಾಧ್ಯಕ್ಷರಾದ ಶ್ರೀ ಎಸ್. ಎಸ್. ರಾವ್, ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿ ಶ್ರೀಮತಿ ಸುರೇಖಾ ದೇವಾಡಿಗ, C. A. ಶ್ರೀ ಜಗದೀಶ್ ವಿ. ದೇವಾಡಿಗ ಮತ್ತು ಅವರ ಧರ್ಮಪತ್ನಿ ರೀನಾ ಜಗದೀಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಸಮಿತಿ ಸದಸ್ಯರಾದ ಶ್ರೀ ಜಯ ಎಲ್ ದೇವಾಡಿಗ, ಶ್ರೀ ಸುಂದರ್ ಸಿ. ಮೊಯ್ಲಿ, ಪ್ರಭಾಕರ್ ಎಸ್. ದೇವಾಡಿಗ, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಶ್ರೀಮತಿ ರಂಜನಿ ಮೊಯ್ಲಿ, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ, ಸದಸ್ಯರಾದ ಸುರೇಶ್ ದೇವಾಡಿಗ ಬಾರ್ಕುರ್, ಶ್ರೀ ಭೋಜ ಜಿ. ದೇವಾಡಿಗ, ಶ್ರೀಮತಿ ಶಾಂತಾ ಪಿ. ದೇವಾಡಿಗ, ಶ್ರೀಮತಿ ಧನವತಿ ದೇವಾಡಿಗ, ಶ್ರೀಮತಿ ವಿಮಲಾ ದೇವಾಡಿಗ, ಶ್ರೀಮತಿ ಅಂಬಿಕಾ ಜೆ. ದೇವಾಡಿಗ, ಕುಮಾರಿ ತನ್ವಿ ದೇವಾಡಿಗ, ಸಂಘದ ಮಾಜಿ ಕೋಶಾಧಿಕಾರಿ ಶ್ರೀ ದಯಾನಂದ ದೇವಾಡಿಗ, ದೇವಾಡಿಗ ಭವನದ ವ್ಯವಸ್ಥಾಪಕರು ಶ್ರೀ ಜಾರಪ್ಪ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು.

ಧ್ವಜಾರೋಹಣದ ಬಳಿಕ ಧ್ವಜವಂದನೆ, ರಾಷ್ಟ್ರಗೀತೆಯ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರು ಪ್ರಜಾಪ್ರಭುತ್ವ ದಿನದ ಮಹತ್ವವನ್ನು ತಿಳಿಸುತ್ತಾ ನಮ್ಮ ಪಾಸ್ಪೋರ್ಟ್ನಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಎಂದು ಬರೆದಿರುವದನ್ನು ನೆನಪಿಸಿದರು. ಅಲ್ಲದೆ ಸಂಘದಲ್ಲಿ ಎಲ್ಲರೂ ಐಕ್ಯತೆ ಮತ್ತು ಒಗ್ಗಟ್ಟಿನಲ್ಲಿದ್ದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ತಮ್ಮ ವಿಶಾಲ ದ್ರಿಷ್ಟಿಗಳಿಂದ ಸಂಘದ ಏಳಿಗೆಗಾಗಿ ದುಡಿಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಸಂಘದ ಮಾಜಿ ಅಧ್ಯಕ್ಷ ಶ್ರೀ ಹೆಚ್. ಮೋಹನದಾಸ್ ಮಾತಾನಾಡುತ್ತಾ ಇಂದು ಆಚರಿಸುತ್ತಿರುವ ಪ್ರಜಾಪ್ರಭುತ್ವದ ಸಂವಿಧಾನ ಒಂದು ಬೈಬಲ್ ಇದ್ದ ಹಾಗೆ. ದೇಶದ ಭಗವದ್ಗೀತೆ ಇದ್ದ ಹಾಗೆಎಂದರು. ಅಲ್ಲದೆ ಸಂಘವು ಶತಮಾನ ಆಚರಣೆಯತ್ತ ದಾಪುಕಾಲು ಹಾಕುತ್ತಿದ್ದು ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಸಂಘದ ಯೋಜನೆಗಳನ್ನು ಸಫಲವಾಗಿಸಬೇಕಾಗಿ ವಿನಂತಿಸಿಕೊಂಡರು.

ಸಂಘದ ಯುವ ವಿಭಾಗವು ಯುವಕರಿಗಾಗಿ ಆಯೋಜಿಸಿದ ವಿಚಾರ ಸಂಕೀರ್ಣದಲ್ಲಿ ಉದ್ಯೋಗ ಸಂದರ್ಶನ, ಯುವಕರಿಂದ ಸಂಸ್ಥೆಗಳ ಅಪೇಕ್ಷೆ, ಉದ್ಯೋಗ ಬೆಳವಣಿಗೆ, ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್ ವಿಷಯಗಳ ಬಗ್ಗೆ, ಶ್ರೀ ವಿಜಯ ದೇವಾಡಿಗ ಇವರು ಮಾರ್ಗದರ್ಶನ ನೀಡುದರು. ಈ ವಿಚಾರ ಸಂಕೀರ್ಣದ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರ ಅಧ್ಯಕ್ಷಸ್ಥಾನದಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಯುವ ವಿಭಾಗದ ಕಾರ್ಯಧ್ಯಕ್ಷ ಶ್ರೀ ಬ್ರಿಜೇಶ್ ನಿಟ್ಟೆಕರ್ ಮತ್ತು ಯುವ ವಿಭಾಗದ ಕಾರ್ಯದರ್ಶಿ ಕು. ತನ್ವಿ ದೇವಾಡಿಗ ಇವರ ಉಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಂಘದ ಅಧ್ಯಕ್ಷರು ಈಗಿನ ಯುವಕರ ಆಸಕ್ತಿಯ ವಿಷಯಗಳ ಕುರಿತು ಆತಂಕ ವ್ಯಕ್ತ ಪಡಿಸಿದರು. ಯುವಕರ ಆಸಕ್ತಿಯ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಸಿ ಸಂಘವು ಮುಂದಿನ ಯೋಜನೆ ಹಾಕಬೇಕಾಗುತ್ತದೆ. ಯುವಕರು ಸಂಘದ ಮುಖ್ಯ ಉದ್ದೇಶದತ್ತ ತಮ್ಮ ಗಮನ ಹರಿಸಬೇಕಾಗಿ ಕೇಳಿಕೊಂಡರು.

ಶ್ರೀ ಬ್ರಿಜೆಸ್ ನಿಟ್ಟೆಕರ್ ಇವರು ಈ ಸಂದರ್ಭದಲ್ಲಿ ಶ್ರೀ ವಿಜಯ್ ದೇವಾಡಿಗ ಇವರನ್ನು ಪುಷ್ಪ ಗುಚ್ಚ ನೀಡಿ ಗೌರವಿಸಿದರು. ಇದರ ಬಳಿಕ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ವಿಚಾರಮಂಥನ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಏನ್. ದೇವಾಡಿಗ ಇವರು ಅಧ್ಯಕ್ಷ ಸ್ಥಾನದಲ್ಲಿದ್ದು, ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಅಡ್ವೋಕೇಟ್ ಪ್ರಭಾಕರ್ ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ, ಜೊತೆ ಕೋಶಾಧಿಕಾರಿ ಶ್ರೀಮತಿ ಸುರೇಖಾ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಪ್ರಾದೇಶಿಕ ಸಮಿತಿಗಳ ಸಮನ್ವಯಕರು ಶ್ರೀ ಜಯ ಎಲ್ ದೇವಾಡಿಗ, ಯುವವಿಭಾಗ ಶ್ರೀ ಬ್ರಿಜೇಶ್ ದೀವಾಡಿಗ, ಇವರು ವೇದಿಕೆಯಲ್ಲಿ ಉಸ್ಥಿತರಿದ್ದು, ಜೊತೆ ಕಾರ್ಯದರ್ಶಿ ಪ್ರಭಾಕರ್ ದೇವಾಡಿಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಎಚ್. ಮೋಹನದಾಸ್, ಶ್ರೀ ಶ್ರೀನಿವಾಸ್ ಕರ್ಮರನ್, ಶ್ರೀ ವಾಸು ದೇವಾಡಿಗ, C. A. ಶ್ರೀ ಜೆ. ವಿ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಸಮಿತಿ ಸದಸ್ಯರಾದ ಶ್ರೀ ಜಯ ಎಲ್ ದೇವಾಡಿಗ, ಶ್ರೀ ಸುಂದರ್ ಸಿ. ಮೊಯ್ಲಿ, ಜೊತೆ ಕಾರ್ಯದರ್ಶಿ ಪ್ರಭಾಕರ್ ದೇವಾಡಿಗ, ನಿತೇಶ್ ದೇವಾಡಿಗ, ನವಿ ಮುಂಬಯಿ ಪಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ರಮೇಶ್ ದೇವಾಡಿಗ, ಚೆಂಬೂರು ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ನಿರ್ಮಲಾ ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರು ಶ್ರೀ ಭಾಲಚಂದ್ರ ದೇವಾಡಿಗ, ಥಾಣೆ ಸಮಿತಿಯ ಶ್ರೀ ಸದಾಶಿವ ಮೊಯ್ಲಿ, ಬೋರಿವಲಿ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಭಾಸ್ಕರ್ ದೇವಾಡಿಗ, ಭಾಂಡುಬ್ ಸಮಿತಿಯ ಕಾರ್ಯಧ್ಯಕ್ಷೆ ಶ್ರೀಮತಿ ಪ್ರಫುಲ್ಲಾ ದೇವಾಡಿಗ ಇವರು ಚರ್ಚೆಯಲ್ಲಿ ಭಾಗವಹಿಸಿದರು. ಎಲ್ಲರನ್ನೂ ಸಂಘದ ಪರವಾಗಿ ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ಜಾಗತಿಕ ದೇವಾಡಿಗ ಮಹಾ ಮಂಡಳದ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ ಅವರು ಮತ್ತು ಅವರ ಧರ್ಮಪತ್ನಿ ಸುಜಾತಾ ದೇವಾಡಿಗ ಇವರು ವಿಶೇಷ ಉಪಸ್ಥಿತರಿದ್ದು ಸಂಘದ ಪರವಾಗಿ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸದಸ್ಯರು ಅವರನ್ನು ಶಾಲು ಹೊದೇಸಿ ಮತ್ತು ಪುಷ್ಪಗುಚ್ಚ ನೀಡಿ ಸನ್ಮಾನಿಸಿದರು.

ಸಂಘದ ಮಾಜಿ ಅಧ್ಯಕ್ಷ ಶ್ರೀ ಹೆಚ್. ಮೋಹನದಾಸ್ ಇವರ ಜನ್ಮದಿನ ಅದೇ ದಿನ ಇದ್ದುರಿಂದ, ಅವರು ಮತ್ತು ಉಪಸ್ಥಿತ ಅವರ ಧರ್ಮಪತ್ನಿ, ಮಗ ಮತ್ತು ಸೊಸೆ ಇವರನ್ನು ಸಂಘದ ಹಾಗೂ ಉಪಸ್ಥಿತರ ಪರವಾಗಿ ಶಾಲು ಹೊದಿಸಿ ಮತ್ತು ಪುಷ್ಪಗುಚ್ಚ ನೀಡಿ ಶುಭಾಶಯ ಕೋರಲಾಯಿತು. ಅವರೊಂದಿಗೆ ನವದಂಪತಿಗಳಾದ ಶ್ರೀ ಪ್ರಮೋದ್ ಮೋಹನದಾಸ್ ಮತ್ತು ಶ್ರೀಮತಿ ವಸುಧಾ ಪ್ರಮೋದ್ ಇವರು ವಿಶೇಷವಾಗಿ ಉಸ್ಥಿತರಿದ್ದು, ಅವರು ಅಂದಿನ ಮಧ್ಯಾಹ್ನದ ಭೋಜನವನ್ನು ಪ್ರಯೋಜಿಸಿದ್ದರು. ಆ ಪ್ರಯುಕ್ತ ಸಂಘದ ಪರವಾಗಿ ಪ್ರಮೋದ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಜೊತೆಯಲ್ಲಿ, ದೇವಾಡಿಗ ಸಮಾಜ ಬಂಧವರ ಕುಲದೈವ ಶ್ರೀ ಬಗ್ಗುಪಂಜುರ್ಲಿ ಮೂಲಕ್ಷೇತ್ರ ಬಗ್ಗುಮುಂಡ, ಕಲ್ಮಾಡಿ, ಉಡುಪಿ ಇಲ್ಲಿಯ ಈ ಮೂಲಕ್ಷೇತ್ರದ ಮೇಲಚ್ಚಾವಣಿ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ, ಕಾರ್ಯಧ್ಯಕ್ಷರಾದ ಶ್ರೀ ವಿಜಯ ಕೊಡವೂರು, ಪ್ರಧಾನಕಾರ್ಯದರ್ಶಿ ಶ್ರೀ ಗಣೇಶ್ ದೇವಾಡಿಗ, ಮತ್ತು ಕೋಷಧಿಕಾರಿ ಶ್ರೀ A. ಸುರೇಶ ಸೇರಿಗಾರ ಇವರು ಉಪಸ್ಥಿತರಿದ್ದು ಅವರೆಲ್ಲರನ್ನು ಸಂಘದ ಪರವಾಗಿ ಗೌರವಿಸಲಾಯಿತು.