Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ:ಸಂಭ್ರಮದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

ದೇವಾಡಿಗ ಸಂಘ ಮುಂಬಯಿ:ಸಂಭ್ರಮದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ದೇವಾಡಿಗ ಸಂಘವು ಪ್ರತಿವರ್ಷದಂತೆ ಕೊರೋನಾದ ನಡುವೆಯೂ ಭಾರತದ 74ನೇ ಸ್ವಾತಂತ್ರ್ಯೋತ್ಸವವನ್ನು ನೆರೂಲಿನ ದೇವಾಡಿಗ ಭವನದಲ್ಲಿ ಆಗೋಸ್ಟ್ 15 ರಂದು ಬೆಳಿಗ್ಗೆ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ತೆಂಗಿನಕಾಯಿ ಒಡೆದು ತ್ರಿವರ್ಣ ದ್ವಜ ಹಾರಿಸಿ ಸಮಯಕ್ಕೆ ಸರಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿಸಮಿತಿ ಸದ್ಯಸರು, ಪ್ರಾದೇಶಿಕ ಸಮಿತಿ ಸದ್ಯಸರು, ಮತ್ತು ಸದ್ಯಸರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ಶ್ರೀ ರವಿ ದೇವಾಡಿಗರು ಮಾತನಾಡುತ್ತಾ ಅಭಿನಂದಿಸಿ ಶುಭಕೋರಿ ಸಾವಿರಾರು ಮುಖಂಡರು ಮತ್ತು ಪ್ರಜೆಗಳ ಬಲಿದಾನದಿಂದಾಗಿ ನಮಗೆ ಒದಗಿದ ಈ ದೇಶವನ್ನು ನಾಗರಿಕರು ಪ್ರೀತಿಸಬೇಕು ಮತ್ತು ದೇಶದ ಕೀರ್ತಿ ಉನ್ನತಕ್ಕೆ ಏರುವ ದಿಶೆಯಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕೋರೋನದಂತಹ ಮಹಾಮಾರಿ ರೋಗವು ಇಡೀ ಪ್ರಪಂಚವನ್ನೇ ತಲ್ಲಣಿಸಿದ್ದು ನಾಗರಿಕರು ತಮ್ಮ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ತಮ್ಮ ಆರೋಗ್ಯ, ತಮ್ಮ ಮನೆ, ಆಮೇಲೆ ಸಮಾಜ ಸಂಘ ಸಂಸ್ಥೆಗಳು ಮತ್ತು ದೇಶದ ಕಾಳಜಿ ವಹಿಸಬೇಕೆಂದು ಅವರು ಕರೆ ನೀಡಿದರು ಅಲ್ಲದೆ ಕೊರೋನದಿಂದ ಸಂಘದ ಉತ್ಪನ್ನಕ್ಕೆ ಹೊಡೆತ ಬಿದ್ದಿದ್ದು ಇದರಿಂದ ಚೇತರಿಸಿಕೊಳ್ಳಲು ಸದ್ಯಸರು ನೆರವಾಗಬೇಕಾಗಿ ಆಶಿಸಿದರು.

ಈ ಸಂದರ್ಭದಲ್ಲಿ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷರಾದ ನ್ಯಾಯವಾದಿ ಪ್ರಭಾಕರ್ ದೇವಾಡಿಗರು ಮಾತನಾಡುತ್ತಾ ದೇಶದ ಸ್ವಾತಂತ್ರಕ್ಕಾಗಿ ಬಲಿದಾನ ನೀಡಿದವರಿಗೆ ಶ್ರದ್ದಾಂಜಲಿ ನೀಡಿ ಸ್ವಾತಂತ್ರದ ಹಿನ್ನೆಲೆ ಮತ್ತು ಸ್ವಾತಂತ್ರ ದಿನಾಚರಣೆಯ ಅವಶ್ಯಕತೆಯ ಕುರಿತು ಮಾತನಾಡುತ್ತಾ, ದೇಶದ ರಕ್ಷಣೆ ಪ್ರತೀ ನಾಗರಿಕರ ಕರ್ತವ್ಯ ಎಂದು ಹೇಳಿದರು. ಭಾರತದ ಸಂವಿದಾನವು ಪ್ರತಿಯೊಬ್ಬ ನಾಗರಿಕರಿಗೆ ಸಂಪೂರ್ಣ ಸ್ವಾತಂತ್ರ ನೀಡಿದಂತೆ ಅದರ ದುರುಪಯೋಗ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು ಹಾಗೂ ದೇಶದ ಯೋಜನೆಗಳ ಲಾಭ ಪ್ರತೀ ನಾಗರಿಕರು ಪಡೆಯಬೇಕು ಎಂಬುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾದ್ಯಕ್ಷ ರಾದ ಶ್ರೀಯುತ ಪಿ ವಿ. ಎಸ್. ಮೊಯಿಲಿ, ಸಂಘದ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ಸಂಘದ ಮಾಜಿ ಕೋಶದಿಕಾರಿ ಶ್ರೀ ದಯಾನಂದ್ ದೇವಾಡಿಗ, ನವಿಮುಂಬಯಿ ವಲಯದ ಉಪಾಕಾರ್ಯಾದ್ಯಕ್ಷರಾದ ಶ್ರೀ ಸುರೇಶ್ ದೇವಾಡಿಗ ಬಾರ್ಕೂರ್, ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ದೇವಾಡಿಗ ಮೊದಲಾದವರು ಸ್ವಾತಂತ್ರ್ಯೋತ್ಸವದ ಕುರಿತು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಎಲ್ಲರಿಗೂ ಸಿಹಿತಿಂಡಿ ವಿತರಿಸುವುದೊಂದಿಗೆ ಕಾರ್ಯಕರ್ಮವು ಮುಕ್ತಾಯಗೊಂಡಿತು.

ದೇವಾಡಿಗ ಸಂಘ ಮುಂಬಯಿ ಪ್ರತಿವರ್ಷದಂತೆ ಕೊರೋನಾದ ನಡುವೆಯೂ ಭಾರತದ 74ನೇ ಸ್ವಾತಂತ್ರ್ಯೋತ್ಸವವನ್ನು ದಾದರ್ ನ ದೇವಾಡಿಗ ಸೆಂಟರ್ನಲ್ಲೂ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಶ್ರೀಯತ ಗೋಪಾಲ್ ಮೊಯಿಲಿಯವರು ಆಗೋಸ್ಟ್ 15 ರಂದು ಬೆಳಿಗ್ಗೆ ರಾಷ್ಟ್ರಧ್ವಜವನ್ನು ಹಾರಿಸಿ ಆಚರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರೆಲ್ಲರೂ ದ್ವಜಕ್ಕೆ ವಂದಿಸಿ ರಾಷ್ಟ್ರಗೀತೆ ಹಾಡಿ ಭಾರತ ಮಾತೆಗೆ ಜಯಘೋಷವಿತ್ತರು. ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಯುತ ವಿಶ್ವನಾಥ್ ದೇವಾಡಿಗ, ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷ ಶ್ರೀಯುತ ಬಾಲಚಂದ್ರ ದೇವಾಡಿಗ, ಮಾಜಿ ಕಾರ್ಯಾದ್ಯಕ್ಷ ಶ್ರೀಯುತ ಹೇಮನಾಥ್ ದೇವಾಡಿಗ, ಮ್ಯಾನೇಜರ್ ಶ್ರೀ ಶಂಭು ದೇವಾಡಿಗ, ಶ್ರೀ ರಮೇಶ್ ಮೊಯಿಲಿ, ಮತ್ತು ಶ್ರೀ ಶಂಕರ್ ದೇವಾಡಿಗರು ಉಪಸ್ಥಿತರಿದ್ದರು.