Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: 73 ನೇ ಗಣರಾಜ್ಯೋತ್ಸವ ಆಚರಣೆ

ದೇವಾಡಿಗ ಸಂಘ ಮುಂಬಯಿ: 73 ನೇ ಗಣರಾಜ್ಯೋತ್ಸವ ಆಚರಣೆ

ನವಿ ಮುಂಬೈ: ಮುಂಬಯಿಯ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ದೇವಾಡಿಗ ಸಂಘವು ಭಾರತದ 73 ನೇ ಗಣರಾಜ್ಯೋತ್ಸವವನ್ನು ಇಲ್ಲಿಯ ಸಂಘದ ದೇವಾಡಿಗ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಇವರು ರಾಷ್ಟ್ರಧ್ವಜವನ್ನು ಹಾರಿಸಿ ಸೇರಿದ ಸದಸ್ಯರೊಂದಿಗೆ ಧ್ವಜಕ್ಕೆ ವಂದನೆಯನ್ನು ಸಲ್ಲಿಸಿ ಸಮಸ್ತರೂ ಸೇರಿ ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಗಾನ ವನ್ನು ಹಾದಿ ಜಯಘೋಷ ಹಾಕಿದರು.

ಈ ಸಂದರ್ಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ, ಶ್ರೀ ರವಿ ದೇವಾಡಿಗರು ಗಣರಾಜ್ಯೋತ್ಸವ ದಿನದ ಶುಭಾಶಯಗಳನ್ನು ನೀಡಿ, ನಮ್ಮ ದೇಶ ಸ್ವಾತಂತ್ರ್ಯ ಪಡೆದು ಬಳಿಕ ಪ್ರಜಾಪ್ರಭುತ್ವ ಪಡೆಯಲು ಕಾರಣರಾದ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದ ವೀರ ಯೋಧರರಿಗೆ ಮತ್ತು ನೇತಾರಿಗೆ ಶ್ರಧಾಂಜಲಿ ಕೋರಿದರು. "ನಮ್ಮ ಹಿಂದಿನವರು ರಾಷ್ಟ್ರದ ಸ್ವಾತಂತ್ತ್ರ್ಯಕ್ಕಾಗಿ ತಮ್ಮ ಪ್ರಾಣ ತೊರೆದುದರ ಪರಿಣಾಮವಾಗಿ ಇಂದು ನಮ್ಮ ದೇಶದ ನಾಗರಿಕರು ಸ್ವತಂತ್ರವಾಗಿ ತಮ್ಮ ಜೀವನ ನಡೆಸಲು ಸಾಧ್ಯವಾಗಿದೆ. ರಾಷ್ಟ್ರ ಪ್ರೇಮ, ರಾಷ್ಟ್ರದ ಅಖಂಡತೆ ಕಾಪಾಡಿಕೊಂಡು, ಅದನ್ನು ಬೆಳುಸತ್ತಾ, ರಾಷ್ಟ್ರಕ್ಕಾಗಿ ತಮ್ಮ ಪ್ರಾಣಗಳನ್ನ ಬಲಿದಾನ ಮಾಡಿದವರನ್ನ ನೆನೆಪಿಸಿಕೊಂಡು ಅವರಿಗೆ ಗೌರಬವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ" ಎಂದು ಅವರು ಹೇಳಿದರು.

ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರವಿ ದೇವಾಡಿಗರು, ಕೊರೋನಾ ಸೋಂಕಿನ ಅಲೆ ಇನ್ನೂ ಮುಂದುವರಿದಿದ್ದು, ಸರಕಾರದ ನಿರ್ಬಂಧನೆಗಳನ್ನು ಪಾಲಿಸಿಕೊಂಡು ನಾಗರಿಕರು ತಮ್ಮ ಅರೋಗ್ಯ ಮತ್ತು ಸಂಕಷ್ಟಗಳನ್ನು ಕಾಪಾಡಿಕೊಂಡು ಜೀವನ ನಡೆಸುತ್ತಿದ್ದು ಭವಿಷ್ಯದಲ್ಲಿ ಈ ಖಾಯಿಲೆ ನಿರ್ಮೂಲವಾಗಿ ಜನಜೀವನ ಆದಷ್ಟು ಬೇಗ ಸಾಮಾನ್ಯವಾಗುವಂತಾಗಲಿ ಎಂದು ಆಶಿಸಿದರು. ಸಂಘದ ಸದಸ್ಯರು ತಮ್ಮ ಎಲ್ಲಾ ತಮ್ಮ ಜೀವನ ನಡೆಸುತ್ತಾ ಸಂಘದ ಚಟುವಟಿಕೆಗಳಲ್ಲಿ ಸದಾ ಭಾಗಿಗಳಾಗಿ, ರಾಷ್ಟೀಯ ಕಾರ್ಯಕ್ರಮಗಲ್ಲಿ ಸಕ್ರಿಯವಾಗಿ ತಮನ್ನು ತೊಡಗಿಸಿಕೊಂಡು ಮಕ್ಕಳನ್ನೂ ಪ್ರೇರಿಸಬೇಕು ಎಂದು ಹೇಳಿದರು..

ಈ ಸಂದರ್ಭದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಹಕರಿಸಿದ ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಮಾತನಾಡಿ, ನಾಡಿನ ಜನರಿಗೆ ಗಣಪ್ರಾಜ್ಯೋತ್ಸವದ ಶುಭಾಶಯ ಕೋರಿದರು. ನಮ್ಮ ದೇಶವು ದೇಶದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಪ್ರಜಾಪ್ರಭುತ್ವ ದಿನ ಅಥವಾ ಗಣತಂತ್ರ ದಿನವಾಗಿ ಆಚರಿಸುತ್ತಿದ್ದು, ಈ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರುವುದು ನಮ್ಮ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಪ್ರತಿವರ್ಷದಂತೆ, ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸಿದ್ದು, ಶ್ರೀಮತಿ ವನಿತಾ ಮಾತು ಶ್ರೀ ರವಿ ದೇವಾಡಿಗ ದಂಪತಿಗಳು ಪೂಜಾ ಕೈಂಕರ್ಯವನ್ನು ನಡೆಸಿ ಶ್ರೀ ಸತ್ಯನಾರಾಯಣ ಕಥೆಗಳಲ್ಲಿ ಭಾಗವಹಸಿ ಪೂಜೆ ಸಲ್ಲಿಸಿದರು ಮತ್ತು ಸದಸ್ಯರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಮಾಜಿ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಸೇರಿಗಾರ್, ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀ ಸುರೇಶ್ ದೇವಾಡಿಗ ಬಾರ್ಕೂರು, ಮಹಿಳಾ ವಿಭಾಗದ ಶ್ರೀಮತಿ ವನಿತಾ ರವಿ ದೇವಾಡಿಗ, ಶ್ರೀಮತಿ ಸುಂದರಿ ಮೊಯಿಲಿ, ಯುವ ವಿಭಾಗದ ಶ್ರೀ ಹರೀಶ್ ದೇವಾಡಿಗ, ದೇವಾಡಿಗ ಭವನದ ವ್ಯವಸ್ಥಾಪಕರಾದ ಶ್ರೀ ಜಾರಪ್ಪ ಮೊಯಿಲಿ ಮೊದಲಾದವರು ಭಾಗವಹಿಸಿದರು.