Estd.:5-4-1925
Regd.:7-3-1948
DEVADIGA SANGHA MUMBAI
(Regd. on 7-3-1948 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ:ದೇವಾಡಿಗ ಸಮಾಜದವರಿಂದ ಗಣರಾಜ್ಯೋತ್ಸವ ಆಚರಣೆ

ದೇವಾಡಿಗ ಸಂಘ ಮುಂಬಯಿ:ದೇವಾಡಿಗ ಸಮಾಜದವರಿಂದ ಗಣರಾಜ್ಯೋತ್ಸವ ಆಚರಣೆ

ದಾದರ್ ಪೂರ್ವದಲ್ಲಿರುವ ಸಂಘದ ಕೇಂದ್ರೀಯ ಕಾರ್ಯಾಲಯದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ನಾರಾಯಣ್ ಇವರು ಸಂಘದ ಇತರ ಸಮಿತಿ ಸದಸ್ಯರೊಂದಿಗೆ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರ ಗೀತೆ ಹಾಡುವುದರ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಮಯದಲ್ಲಿ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಜತೆ ಕೋಶಾಧಿಕಾರಿ ಶ್ರೀಮತಿ ಸುರೇಖಾ ಹೆಚ್. ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಚಂದ್ರ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಶ್ರೀ ಶ್ರೀಧರ್ ಶೇರಿಗಾರ್, ಶ್ರೀ ಹೇಮನಾಥ್ ಎನ್. ದೇವಾಡಿಗ, ಶ್ರೀ ರಮೇಶ್ ಮೊಯಿಲಿ, ಶ್ರೀ ನಿತೇಶ್ ದೇವಾಡಿಗ ಹಾಗೂ ವ್ಯವಸ್ಥಾಪಕರಾದ ಶ್ರೀ ಶಂಭು ದೇವಾಡಿಗ ಉಪಸ್ಥಿತರಿದ್ದರು.

ಅದೇ ಸಮಯದಲ್ಲಿ ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ನೆರೂಲ್ ನವಿ ಮುಂಬಯಿ ಇಲ್ಲಿಯ ದೇವಾಡಿಗ ಭವನದಲ್ಲಿಯೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪಿ. ಕರ್ಮರನ್ ಇವರು ರಾಷ್ಟ್ರಧ್ವಜ ಹಾರಿಸಿ, ವಂದಿಸಿದರು. ಈ ಸಮಯದಲ್ಲಿ ನವಿ ಮುಂಬಯಿ ಪರಿಸರದ ದೇವಾಡಿಗ ಬಾಂಧವರು ಉಪಸ್ಥಿತರಿದ್ದರು. ಸದಸ್ಯರು ರಾಷ್ಟ್ರಗಾನ ಮತ್ತು ರಾಷ್ಟ್ರಗೀತೆ ಹಾಡಿ ಜಯಘೋಷ ಕರೆದರು.
ಕಾರ್ಯಕ್ರಮದ ಔಚಿತ್ಯವನ್ನು ಸಾಧಿಸಿ, ಸಮಾಜ ಬಾಂಧವರು ರಾಷ್ಟ್ರದ ಏಕಾತ್ಮತೆ ಮತ್ತು ಅಖಂಡತೆ ಬದ್ಧವಾದ ದೇಶಪ್ರೇಮವನ್ನು ಬೆಳೆಸಿ ಸಂಘದ ಎಲ್ಲ ಚಟುವಟಿಕೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುವಂತೆ ಶ್ರೀ ಕರ್ಮರನ್ ರವರು ಕರೆ ನೀಡಿದರು

ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ದೇಶಕ್ಕಾಗಿ ಹುತಾತ್ಮರಾದ ನೇತಾರರಿಗೆ ಶ್ರದ್ಧಾಂಜಲಿ ನೀಡುತ್ತಾ ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆಗೆ ಬೆಳಕು ಚೆಲ್ಲಿದರು, ಅಲ್ಲದೆ ಎಲ್ಲರೂ ಸಂಘದ ಏಳಿಗೆಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಸಂಘದ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಮಾಜಿ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಇವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಖಜಾಂಚಿ ಶ್ರೀ ದಯಾನಂದ್ ದೇವಾಡಿಗ, ಕೇಂದ್ರದ ವ್ಯವಸ್ಥಾಪಕರಾದ ಶ್ರೀ ಜಾರಪ್ಪ ದೇವಾಡಿಗ, ಸ್ಥಳೀಯ ಸಮಿತಿ ಸದಸ್ಯರಾದ ಶ್ರೀ ಭೋಜ ದೇವಾಡಿಗ, ಶ್ರೀ ಸುರೇಶ್ ದೇವಾಡಿಗ, ಹರಿಶ್ಚಂದ್ರ ದೇವಾಡಿಗ, ಸ್ಥಳೀಯ ಮಹಿಳಾ ಸಮಿತಿ ಸದಸ್ಯರಾದ ಶ್ರೀಮತಿ ವನಿತಾ ದೇವಾಡಿಗ, ಶ್ರೀಮತಿ ಸುನಂದ ಕರ್ಮರನ್, ಶ್ರೀಮತಿ ಶಾಂತ ದೇವಾಡಿಗ, ಶ್ರೀಮತಿ ಧನು ದೇವಾಡಿಗ, ಶ್ರೀಮತಿ ಹೇಮಾವತಿ ದೇವಾಡಿಗ, ಯುವ ವಿಭಾಗದ ಮಾಸ್ಟರ್ ರೋಹನ್ ದೇವಾಡಿಗ, ಕುಮಾರಿ ತನ್ವಿ ದೇವಾಡಿಗ, ಶ್ರೀಮತಿ ಗೀತಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯರಾದ ಶ್ರೀ ಮೋಹನ್ದಾಸ್ ಗುಜರನ್ ಮತ್ತು ಶ್ರೀಮತಿ ಗುಜರನ್ ಇವರು ವಿಶೇಷ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನವಿ ಮುಂಬಯಿಯ ಪ್ರಸಿದ್ಧ ಶ್ರೀ ಉದಯ ಭಟ್ ಇವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ಆಯೋಜಿಸಲಾಗಿತ್ತು. ಶ್ರೀಮತಿ ನಂದಿನಿ ಮತ್ತು ಶ್ರೀ ಸುರೆಶ್ ದೇವಾಡಿಗ ಬಾರಕೂರು ದಂಪತಿಗಳು ಪೂಜಾ ವಿಧಿಗಳನ್ನು ಪೂರೈಸಿದರು. ಕೊನೆಯಲ್ಲಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ವಂದಿಸಿದರು.