Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
Devadiga Sangha Mumbai:Devadiga Bhavan's 14th Inauguration Day Celebration

Devadiga Sangha Mumbai: Devadiga Bhavan's 14th Inauguration Day Celebration

ದೇವಾಡಿಗ ಸಂಘ ಮುಂಬಯಿ: ದೇವಾಡಿಗ ಸಾಂಸ್ಕೃತಿಕ ಕೇಂದ್ರದ 14ನೇ ವಾರ್ಷಿಕೋತ್ಸವ

ನವಿಮುಂಬಯಿ: ಮುಂಬಯಿಯ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾದ ದೇವಾಡಿಗ ಸಂಘದ ನವಿಮುಂಬಯಿ ನೆರೂಲ್ ಇಲ್ಲಿಯ ದೇವಾಡಿಗ ಭವನ, ದೇವಾಡಿಗ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರದ 14ನೇ ವಾರ್ಷಿಕೋತ್ಸವವನ್ನು ಭಜನೆ, ಧಾರ್ಮಿಕ ಕಾರ್ಯಗಳೊಂದಿಗೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ನವಿಮುಂಬಯಿ ಪರಿಸರದ ಸದಸ್ಯರು ಭಾಗವಹಿಸಿದರು.

ದೇವಾಡಿಗ ಸಂಘದ ಈ ಬಹುಉದ್ದೇಶಿಯ ಕಟ್ಟಡದ ಉದ್ಘಾಟನೆಯನ್ನು ಫೆಬ್ರವರಿ 24, 2007ರಲ್ಲಿ ಉದ್ಘಾಟಿಸಲಾಗಿತ್ತು . ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವಿಲಾಸ್ ರಾವ್ ದೇಶಮುಖ್, ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಹಾಗೂ ಮಾಜಿ ಕೇಂದ್ರೀಯ ಮಂತ್ರಿ ಶ್ರೀ ವೀರಪ್ಪ ಮೊಯಿಲಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ದೇವಾಡಿಗ ಭವನವನ್ನು ಉದ್ಘಾಟಿಸಲಾಗಿತ್ತು. ಇದರ ನೆನಪಿಗಾಗಿ ಪ್ರತಿವರ್ಷ ಧಾರ್ಮಿಕ ಕಾರ್ಯಕ್ರಮವನ್ನು ಒಳಗೊಂಡ ಸಮಾರಂಭದ ಮೂಲಕ ಸಮಾಜದ ಈ ಕಟ್ಟಡದ ನಿರ್ಮಾಣಕ್ಕಾಗಿ ದುಡಿದವರ ಮತ್ತು ಅದಕ್ಕಾಗಿ ಸಹಾಯ ಮಾಡಿದವರನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿತ್ತು.


ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಪಿ. ಕರ್ಮರನ್, ಸಂಘದ ಮಾಜಿ ಕೋಶಾಧಿಕಾರಿ ಶ್ರೀ ದಯಾನಂದ ದೇವಾಡಿಗ, ಸಂಘದ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ನವಿಮುಂಬಯಿ ಸ್ಥಳೀಯ ಸಮಿತಿಯ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾವತಿ ದೇವಾಡಿಗ, ಇನ್ನೋರ್ವ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಅಂಬಿಕಾ ದೇವಾಡಿಗ, ಸ್ಥಳೀಯ ಸಮಿತಿ ಕಾರ್ಯದರ್ಶಿ ಶ್ರೀ ಚಂದ್ರಶೇಖರ ದೇವಾಡಿಗ ಮೊದಲಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಸಂಯೋಜಕರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗರು ಈ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಘದ ಈ ಭವನದ ನಿರ್ಮಾಣಕ್ಕೆ ದುಡಿದವರನ್ನು ನೆನಪಿಸಿಕೊಂಡರು. "ನಮ್ಮ ಸಮಾಜ ಆರ್ಥಿಕವಾಗಿಯೂ ಮತ್ತು ಜನಸಂಖ್ಯೆಯಲ್ಲಿಯೂ ಬಹಳ ಕಿರಿಯ ಸಮಾಜವಾಗಿದ್ದು ವಿಶಾಲ ಹೃದಯಿಗಳದ್ದಾಗಿದೆ. ಸಣ್ಣ ಪುಟ್ಟ ಪಾನ್ ಅಂಗಡಿಯವರು, ಹೋಟೆಲು ಕಾರ್ಮಿಕರು, ಬೀದಿ ವ್ಯಾಪಾರಿಗಳು ಅಲ್ಲದೆ ಉದ್ಯೋಗಪತಿಗಳು, ಕಂಪನಿ ಮಾಲೀಕರು ಹೀಗೆ ಪ್ರತಿವೊಬ್ಬ ಸಮಾಜದ ವ್ಯಕ್ತಿ ತನ್ನಿಂದ ಸಾಧ್ಯವಾಗುವ ಮಟ್ಟಿಗೆ ಈ ಕಟ್ಟಡದ ನಿರ್ಮಾಣಕ್ಕೆ ಸಹಾಯ ನೀಡಿದ್ದಾರೆ. ಅಲ್ಲದೆ, ಅಂದಿನ ವ್ಯವಸ್ಥಾಪಕ ಮಂಡಳಿ, ಅದರ ಹಿಂದಿನ ಆಡಳಿತದ ವ್ಯವಸ್ಥಾಪಕ ಮಂಡಳಿಗಳ ಪರಿಶ್ರಮದಿಂದ ಈ ಭವ್ಯ ದೇವಾಡಿಗ ಭವನದ ನಿರ್ಮಾಣವಾಗಿದ್ದು ಅದನ್ನು ಪ್ರಗತಿ ಪಥದಲ್ಲಿ ಕೊಂಡೊಯ್ದು ಅದರಿಂದ ದೇವಾಡಿಗ ಸಮಾಜಕ್ಕೂ ಜೊತೆಯಲ್ಲಿ ಅನ್ಯ ಸಮಾಜಕ್ಕೂ ಇದರ ಉಪಯೋಗಪಡೆಯುವಂತಾಗಬೇಕು. ಭವನವನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು.

ಈ ದೇವಾಡಿಗ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರದಲ್ಲಿ ಎರಡು ವಿಶಾಲವಾದ ಮದುವೆ ಸಭಾಗ್ರಹ, ಅರೋಗ್ಯ ಕೇಂದ್ರ, ಗ್ರಂಥಾಲಯ, ಕಾರ್ಯಾಲಯ, ಭಜನಾ ಮಂದಿರ ಮೊದಲಾದ ಸೌಲಭ್ಯವಿದ್ದು ಎಲ್ಲಾ ಸಮಾಜದವರಿಗೂ ಲಭ್ಯವಾಗಿದೆ.


ಈ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಭೋಜ ದೇವಾಡಿಗ, ಶ್ರೀಮತಿ ಆಶಾ ದೇವಾಡಿಗ, ಶ್ರೀಮತಿ ಶೋಭಾ ದೇವಾಡಿಗ, ಶ್ರೀಮತಿ ಶಾಂತ ದೇವಾಡಿಗ, ಶ್ರೀ ಹರಿಪ್ರಸಾದ್ ಶೆಟ್ಟಿ, ಕುಮಾರಿ ತನ್ವಿ ದೇವಾಡಿಗ, ಶ್ರೀಮತಿ ಸುಂದರಿ ದೇವಾಡಿಗ, ಶ್ರೀಮತಿ ಧನವತಿ ದೇವಾಡಿಗ, ಶ್ರೀಮತಿ ಭಾಗ್ಯಶ್ರೀ ದೇವಾಡಿಗ, ಮಗು ಭ್ರುವಿ, ಮಾಸ್ಟರ್ ರೋಹನ್, ಕರಣ್, ಕೌಸ್ತಬ್, ರಾಜೇಶ್ ದೇವಾಡಿಗ ಮೊದಲಾದವರು ಭಾಗವಹಿಸಿದರು. ಅರ್ಚಕ ಶ್ರೀ ಕರ್ಮರನ್ ಇವರು ತೀರ್ಥ ಪ್ರಸಾದ ವಿತರಿಸಿದರು. ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ ಮತ್ತು ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಇವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ಅನ್ನಪ್ರಸಾದದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.