Estd.:5-4-1925
Regd.:13-3-1948
DEVADIGA SANGHA MUMBAI
(Regd. on 7-5-1953 under Bombay Public Trust Act, 1950 - Regd. No.3369-F-68 (BOM) and
Regd. on 13-3-1948 under the Societies Registration Act XXI, 1860 - Regd. No.1615)
New Member Registration
ದೇವಾಡಿಗ ಸಂಘ ಮುಂಬಯಿ: ನೂರನೇ ಸಂಸ್ಥಾಪನಾ ದಿನಾಚರಣೆ ಶತಮಾನೋತ್ಸವಕ್ಕೆ ಎಲ್ಲರೂ ಸೇರಿ ಶ್ರಮಿಸೋಣ: ಪ್ರವೀಣ್ ಎನ್. ದೇವಾಡಿಗ

ದೇವಾಡಿಗ ಸಂಘ ಮುಂಬಯಿ: ನೂರನೇ ಸಂಸ್ಥಾಪನಾ ದಿನಾಚರಣೆ
ಶತಮಾನೋತ್ಸವಕ್ಕೆ ಎಲ್ಲರೂ ಸೇರಿ ಶ್ರಮಿಸೋಣ: ಪ್ರವೀಣ್ ಎನ್. ದೇವಾಡಿಗ

ಮುಂಬಯಿ, ಎಪ್ರಿಲ್ 2024 : ದೇವಾಡಿಗ ಸಂಘ ಮುಂಬಯಿ ಇದರ ಶತಮಾನೋತ್ಸವ ವರ್ಷ ಆರಂಭವಾಗಿದ್ದು, ಪೂರ್ಣ ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಸಂಘವು ಹಮ್ಮಿಕೊಂಡಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಸಂಘದ ಪ್ರತೀ ಓರ್ವ ಸದಸ್ಯರ ಜವಾಬ್ದಾರಿಯಾಗಿದೆ. ಸಂಘದ ಶತಮಾನೋತ್ಸವ ಆಚರಣೆ ಪ್ರತಿಯೊಬ್ಬರ ಸ್ಮ್ರತಿ ಪಟಲದಲ್ಲಿ ಅಚ್ಚಳಿಯದೆ ಉಳಿಯುವಂತಹ ವಿಜೃಂಭಣೆಯ ಸಮಾರಂಭವನ್ನು ನಮಗೆ ಆಚರಿಸಬೇಕಾಗಿದೆ. ಅದರ ಪೂರ್ವಕವಾಗಿ ನಾವು ಹಾಕಿಕೊಂಡಿರುವ ಯೋಜನೆಗೆ ಎಲ್ಲಾ ಸದಸ್ಯರು ಧನಾತ್ಮಕವಾಗಿ ಚಿಂತನ ಮಂಥನ ನಡೆಸಿ ಸಹಕರಿಸಿದರೆ ನಮ್ಮ ಯೋಜನೆ ಎಷ್ಟು ವಿಶಾಲ ಆಯವ್ಯಯ ಇದ್ದರೂ ಅದನ್ನು ಸುಲಭವಾಗಿ ನಿಭಾಯಿಸಬಹುದು. ಅದಕ್ಕೆ ನಾವು ಸಮಯ ಸಮಯಕ್ಕೆ ಹಮ್ಮಿಕೊಂಡಿರುವ ಕಾರ್ಯಗಳಿಗೆ ಉದಾರ ಮನಿಸ್ಸಿನಿಂದ ಸದಸ್ಯರು ಕೈ ಚಾಚಬೇಕು. ಸಮಯಕ್ಕೆ ನಾವು ಬೆಲೆ ನೀಡಿದರೆ ಅದು ನಮಗೆ ಬೆಲೆ ನೀಡುತ್ತದೆ. ಎಂದು ಸಂಘದ ಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಹೇಳಿದರು.

ಮುಂಬಯಿಯ ಪ್ರತಿಷ್ಠಿತ ಸಂಘಗಳಲ್ಲಿ ಒಂದಾದ ಮತ್ತು ನೂರು ತೊಂಬತ್ತೊಂಬತ್ತು ವರ್ಷಗಳನ್ನು ಪೂರೈಸಿ ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಆಯೋಜಿಸಿದ ನೂರನೇ ಸಂಸ್ಥಾಪನಾ ದಿನ ಆಚರಣೆಯ ಅಧ್ಯಕ್ಷ ಸ್ಥಾನದಿಂದ ಶ್ರೀ ಸಂಘದ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ಈ ಮೇಲಿನ ಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಧರ್ಮಪಾಲ ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಶ್ರೀ ಹಿರಿಯಡ್ಕ ಮೋಹನ ದಾಸ್ ಶ್ರೀ ವಾಸು ದೇವಾಡಿಗ, ಶ್ರೀ ಕೆ. ಮೋಹನ ದಾಸ್, ಮಹಿಳಾ ವಿಭಾಗದ ಕಾರ್ಯಾಧಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರಫುಲ್ಲಾ ವಿ. ದೇವಾಡಿಗ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಘದ ಉಪಾಧ್ಯಕ್ಷೆ ಶ್ರೀಮತಿ ಮಾಲತಿ ಜೆ. ಮೊಯಿಲಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 100 ನೇ ಸಂಸ್ಥಾಪನಾ ದಿನದಂದು ಸಂಘದ ಸಂಸ್ಥಾಪಕರಿಗೆ ಗೌರವ ಶ್ರದ್ಧಾಂಜಲಿ ನೀಡಲಾಯಿತು ಮತ್ತು ಸಂಘದ ಶತಮಾನೋತ್ಸವದ ಲಾಂಛನ ಮತ್ತು ಶತಮಾನೋತ್ಸವ ಆಚರಣೆಯ ಕುರಿತ ನಿವೇದನಾ ಪತ್ರವನ್ನು ಬಿಡುಗಡೆಗೊಳಿಸಲಾಯ್ತು .

ಶ್ರೀ ಪ್ರವೀಣ್ ಎನ್. ದೇವಾಡಿಗ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, ಸದಸ್ಯರು ನಿರಂತರವಾಗಿ ಸಂಘದ ಜೊತೆಯೊಂದಿಗೆ ಸಂಪರ್ಕದಲ್ಲಿದ್ದುಕೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಂಘದೊಂದಿಗೆ ಯಾವುದೇ ಮುಚ್ಚು ಮರೆಯಿಲ್ಲದೆ ಹಂಚಿಕೊಳ್ಳಬೇಕು. ವ್ಯವಸ್ಥಾಪಕ ಮಂಡಳಿಯ ಯಾವುದೇ ಸದಸ್ಯರೊಂದಿಗೆ ಸಂಘದ ಸ್ಥಳೀಯ ಸಮಿತಿಗಳು, ಪದಾಧಿಕಾರಿಗಳು ಸದಸ್ಯರು ನಿರಂತರವಾಗಿ ಸಂಘ ಹಮ್ಮಿಕೊಂಡು ಬರುವ ಕಾರ್ಯಕ್ರಮಗಳನ್ನು ಅನುಸರಿಸುತ್ತಾ ತಮ್ಮತಮ್ಮ ಸೂಕ್ತ ಸೂಚನೆ ಮತ್ತು ಸಹಕಾರ ನೀಡಿ ಸಂಘವನ್ನು ಬಲಪಡಿಸುವಂತೆ ಅವರು ಕರೆನೀಡಿದರು.

ಸಂಘದ ಮಾಜಿ ಅಧ್ಯಕ್ಷರು, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಹಾಗೂ ಮತ್ತು ಸಂಘದ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ಯು. ದೇವಾಡಿಗ ಅವರು ಸಂಘಕ್ಕೆ ಹಿರಿಯರ ಕೊಡುಗೆಯನ್ನು ಸ್ಮರಿಸಿದರು. ದೇವಾಡಿಗ ಭವನ ನಿರ್ಮಾಣದ ದಿನಗಳಲ್ಲಿ ಪ್ರತಿಯೊಬ್ಬ ಸದಸ್ಯರು ನೀಡಿದ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಹಿರಿಯರ ದೂರದೃಷ್ಟಿ ಮತ್ತು ನಂತರದ ಪ್ರಯತ್ನಗಳು ,ಪ್ರಸ್ತುತವಾಗಿ ಜಾಗತೀಕರಣದ ಕಾರಣದಿಂದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬದಲಾವಣೆಯಿಂದಾಗಿ ಸಮುದಾಯವು ಬಹಳಷ್ಟು ಅಶಾಂತಿಯನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. ಆದರೂ ಜಾಗತಿಕವಾಗಿ ಸ್ಪರ್ಧೆಯನ್ನು ಎದುರಿಸಲು ಸಮಯ ಬೇಕಾಗುತ್ತದೆ. ನಾವು ಹಿರಿಯರಿಗೆ ಗೌರವವನ್ನು ನೀಡಬೇಕು ಮತ್ತು ಸಮಾಜದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಅದು ಯಾವುದೇ ಸಮಾಜದ ಪ್ರಗತಿಯ ಉತ್ತಮ ಸಂಕೇತವಾಗಿದೆ. ನಾವೂ ಸಹ ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಇತರ ಸಂಘಗಳಿಗೆ ತೋರಿಸಲು ಕನಿಷ್ಠ ಮೂರು ತಿಂಗಳಿಗೊಮ್ಮೆ ಯುವ ಘಟಕ ಅಥವಾ ಮಹಿಳಾ ವಿಭಾಗದಿಂದ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅವರು ಒತ್ತಿ ಹೇಳಿದರು. ಶತಮಾನೋತ್ಸವ ಆಚರಣೆಯ ಯೋಜನೆಗಳ ಬಗ್ಗೆ ಬೃಹತ್ಸಮಾವೇಶವನ್ನು ಯುವಕರು ಮತ್ತು ಮಹಿಳಾ ಸದಸ್ಯರನ್ನು ತೊಡಗಿಸಿಕೊಂಡು ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಕಾರ್ಯಪ್ರವೃತ್ತಾಗಬೇಕೆಂ ದು ವಿನಂತಿಸಿದರು.

ವಿಶ್ವ ದೇವಾಡಿಗ ಮಹಾಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ , ಮಾಜಿ ಅಧ್ಯಕ್ಷರು ಹಾಗೂ ಮತ್ತು ಸಂಘದ ಶತಮಾನೋತ್ಸವ ಸಮಿತಿಯ ಮುಖ್ಯ ಸಂಯೋಜಕರಾದ ಶ್ರೀ ಹಿರಿಯಡ್ಕ ಮೋಹನ್ ದಾಸ್ ಅವರು ಮಾತನಾಡಿ ನಮ್ಮ ಸಂಘವನ್ನು ಕೇಂದ್ರೀಕೃತ ಸದಸ್ಯತ್ವ ಅಭಿಯಾನದೊಂದಿಗೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಅವರು ಹಿಂದಿನ ದಿಗ್ಗಜರ ತ್ಯಾಗ ಮತ್ತು ಕೊಡುಗೆಯನ್ನು ಸ್ಮರಿಸಿದರು ಮತ್ತು ಎಲ್ಲಾ ಮಾಜಿ ಪದಾಧಿಕಾರಿಗಳಿಗೆ ಗೌರವ ಸಲ್ಲಿಸಿದರು. 1998ರಲ್ಲಿ ದೇವಾಡಿಗ ಸುಧಾಕರ ಸಂಘದಿಂದ ದೇವಾಡಿಗ ಸಂಘಕ್ಕೆ ಹೆಸರು ಬದಲಾವಣೆ, 2012ರಲ್ಲಿ 10 ಪ್ರಾದೇಶಿಕ ಸಮನ್ವಯ ಸಮಿತಿಗಳ ರಚನೆ ಮುಂತಾದ ಕೆಲವು ಕಾರ್ಯಕ್ರಮಗಳನ್ನು ಸದಸ್ಯರಿಗೆ ನೆನಪಿಸಿದರು. 7 ಸೆಪ್ಟೆಂಬರ್ 2014 ರಂದು ದೇವಾಡಿಗ ಭವನದಲ್ಲಿ ನಡೆದ ಮೊದಲ ಸಾಮೂಹಿಕ ಸತ್ಯನಾರಾಯಣ ಪೂಜೆ. 60 ನೇ 75 ನೇ 85 ನೇ ಮತ್ತು 90 ನೇ ವರ್ಷದ ಆಚರಣೆಗಳು ಅವಿಸ್ಮರಣೀಯವಾದುದೆಂದರು . ಸಂಘದ ಶತಮಾನೋತ್ಸವ ಸಂಸ್ಮರಣೆಗೆ 5 ಏಪ್ರಿಲ್ 2025 ರಂದು ಬಿಡುಗಡೆ ಮಾಡಲಿರುವ ಸ್ಮರಣ ಸಂಚಿಕೆ ಜಾಹೀರಾತು , ಶತಮಾನೋತ್ಸವ ಶಿಕ್ಷಣ ನಿಧಿ, ಶತಮಾನೋತ್ಸವ ಆಚರಣೆ ನಿಧಿ ಮತ್ತು ಪ್ರಾಯೋಜಕತ್ವ ಗಳಿಗಾಗಿ ಜಾಹೀರಾತುಗಳಿಂದ ಬಹು ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸದಸ್ಯರು ವಿಶೇಷ ಗಮನಹರಿಸಬೇಕಾಗಿ ವಿನಂತಿಸಿದರು . ವಿಶೇಷ ಮಹಾಸಭೆಯ ಅನುಮೋದನೆಯಂತೆ ದೇವಾಡಿಗ ಭವನ ನವೀಕರಣಕ್ಕೆ ರೂ.90.00 ಲಕ್ಷ ಮತ್ತು ದೇವಾಡಿಗ ಸೆಂಟರ್ ದಾದರ್ ಇದರ ನವೀಕರಣಕ್ಕೆ ರೂ. 20.00 ಲಕ್ಷ ಗಳನ್ನು ಬಳಸಲಾಗುವುದೆಂದರು .ಎಂದು ಅವರು ಹೇಳಿದರು. ಸಂಘದ ಶತಮಾನೋತ್ಸವದ ಆಚರಣೆಯ ಸಂದರ್ಭ ಸಂಘವು ಶತಮಾನೋತ್ಸವ ಶೈಕ್ಷಣಿಕ ನಿಧಿಯನ್ನು ಸ್ಥಾಪಿಸುವ ವಿಚಾರದಲ್ಲಿದ್ದು ಆ ಮುಖೇನ ಸಮಾಜದಲ್ಲಿನ ಸರ್ವ ವಿದ್ಯಾರ್ಥಿಗಳನ್ನು 2035 ಸುಮಾರಿಗೆ ಕನಿಷ್ಠ ಪಕ್ಷ ಪಧವೀರನಾಗಿಸುವುದು ಅಲ್ಲದೆ ಯುವಕರು ಮತ್ತು ಮಹಿಳೆಯರನ್ನು ಸಶಕ್ತ ಮತ್ತು ಸದೃಢ ನಾಗರಿಕನ್ನಾಗಿಸುವ ಮಹತ್ತರ ಯೋಜನೆಯನ್ನು ರೂಪಿಸಲಾಗುವುದೆಂದರು .ಅದಕ್ಕಾಗಿ ಸರ್ವ ಸಮಾಜ ಬಾಂಧವರು , ಹಿತೈಷಿಗಳಿಂದ, ದತ್ತಿ ಸಂಸ್ಥೆಗಳಿಂದ , ಕಾರ್ಪೊರೇಟ್ಗಳಿಂದ ಸಹಾಯಕೋರಲು ಸಹಕರಿಸಬೇಕಾಗಿ ಕೇಳಿಕೊಂಡರು.. ಸಂಘದ ಶತಮಾನೋತ್ಸವ ಆಚರಿಸುವ ಸೌಭಾಗ್ಯ ನಮ್ಮದು ಎಂದರು .

ಮಾಜಿ ಅಧ್ಯಕ್ಷರಾದ ಶ್ರೀ ಕೆ ಕೆ ಮೋಹನ್‌ದಾಸ್ ಅವರು ಈ ಸಂದರ್ಭದಲ್ಲಿ ಸದಸ್ಯರೊಂದಿಗೆ ಇರಲು ಆಹ್ವಾನಿಸಿ ಅವಕಾಶ ನೀಡಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಅವರು ಸಂಘದ ಬೆಳವಣಿಗೆಗೆ ಸದಸ್ಯರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಅವರು ತಮ್ಮ ಹಳೆಯ ಕ್ರಿಕೆಟ್ ದಿನಗಳು ಮತ್ತು ಕ್ರೀಡಾ ಘಟನೆಗಳನ್ನು ನೆನಪಿಸಿಕೊಂಡರು.

ಶ್ರೀ ವಾಸು ಎಸ್ ದೇವಾಡಿಗ, ಮಾಜಿ ಅಧ್ಯಕ್ಷರು ಮತ್ತು ಅಕ್ಷಯ ಸಹಕಾರಿ ಅಧ್ಯಕ್ಷರು. ಕ್ರೆಡಿಟ್ ಸೊಸೈಟಿ ಲಿಮಿಟೆಡ್ ,ಮಾತನಾಡುತ್ತ 50 ವರ್ಷಗಳಿಗೂ ಹೆಚ್ಚು ಕಾಲ ಸಂಘದ ಒಡನಾಟವನ್ನು ಹೊಂದಿ ಲ್ಯಾಂಡ್ ಮಾರ್ಕ್ ಘಟನೆಗಳ ಸಿಹಿ ನೆನಪುಗಳನ್ನು ನೆನಪಿಸಿಕೊಂಡರು . ಅವರು ಸದಸ್ಯತನ ನೋಂದಾಣಿಕೆಯಲ್ಲಿ ನಿಕಟ ಸಂಬಂಧ ಹೊಂದಿದ್ದರು. 1980 ರ ದಶಕಾಡಿಂದ ಸಂಘದ ಪ್ರತಿಯೊಂದು ಕ್ರೀಡಾ ಚಟುವಟಿಕೆಗಳಲ್ಲಿ ಚಾಲನೆ. ಹಿರಿಯ ಸದಸ್ಯರ ಮಾರ್ಗದರ್ಶನ ನೆರೂಲ್‌ನಲ್ಲಿರುವ ನಮ್ಮ ಹೆಮ್ಮೆಯ ದೇವಾಡಿಗ ಭವನ ಸೇರಿದಂತೆ ಪ್ರಸ್ತುತ ಬೆಳವಣಿಗೆ ಪ್ರಶಂಶನೀಯ ಇದು ನಮ್ಮ ಸದಸ್ಯರ ಕಲ್ಯಾಣಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಸಂಘದ 90 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ತಮ್ಮ ಅಧ್ಯಕ್ಷತನದ ದಿನಗಳನ್ನು ನೆನಪಿಸಿಕೊಂಡರು. ಅಂದು ಸಂಘಕ್ಕೆ ಹಾಗೂ ಸಮಾಜಕ್ಕೆ ವಿವಿಧ ಕ್ಷೇತ್ರಗಳಲ್ಲಿ ನೀಡಿದ ಅತ್ಯುತ್ತಮ ಸೇವೆ / ಸಹಕಾರ ಸಲ್ಲಿಸಿದ ಆಯ್ದ 90 ಸದಸ್ಯರನ್ನು ಸನ್ಮಾನಿಸಿದ್ದನ್ನು ನೆನಪಿಸಿದರು .

ಸಂಘದ ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಂದರ್ ಸಿ ಮೊಯ್ಲಿ, ಇವರು ಮಾತನಾಡಿ ಸದಸ್ಯರು 100 ನೇ ವಾರ್ಷಿಕೋತ್ಸವದ ಆಚರಣೆಗೆ ಸದಸ್ಯರು ತಮ್ಮಿಂದ ಸಾಧ್ಯವಾದಷ್ಟು ದೇಣಿಗೆ ನೀಡಿ , ಸಂಗ್ರಹಿಸಿ ಸಹಕರಿಸಬೇಕು ಎಂದು ವಿನಂತಿಸಿಕೊಂಡರು .

ಸಂಘದ ವೈದ್ಯಕೀಯ ಸಮಿತಿಯ ಮಾಜಿ ಕಾರ್ಯಧ್ಯಕ್ಷರಾದ ಶ್ರೀ ಜನಾರ್ಧನ್ ಎಸ್ ದೇವಾಡಿಗ ಇವರು ಮಾತನಾಡಿ ಸಂಘವು ಹಮ್ಮಿಕೊಂಡಿರುವ ಕಾರ್ಯಕ್ರಮಗನ್ನು ಸ್ವಾಗತಿಸಿದರು. ಸಂಘವು ಬಡವರ, ಶಿಕ್ಷಣ ಮತ್ತು ಅರೋಗ್ಯ ವಂಚಿತರ ಏಳಿಗೆಗಾಗಿ ಕೆಲಸ ಮಾಡುತ್ತಿದೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ನಿರಂತರವಾಗಲಿ ಅಲ್ಲದೆ ನಮ್ಮವರಿಗೆ ನಮ್ಮ ಸಂಘದ ಬಗ್ಗೆ / ನಮ್ಮ ಸ್ವಂತದ ಬಗ್ಗೆ ಸ್ವಾಭಿಮಾನ ಹೆಚ್ಚಲೆಂದು ಆಶಿಸಿದರು . ಶತಮಾನೋತ್ಸವದ ಸಂದರ್ಭದಲ್ಲಿ ಎಲ್ಲರೂ ತಮ್ಮಿಂದ ಸಾಧ್ಯವಾದಷ್ಟು ಸಹಕರಿಸುತ್ತಾರೆ ಎಂದು ಹೇಳಿದರು.

ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ಎಸ್ ದೇವಾಡಿಗ ಇವರು ಮಾತನಾಡಿ ಸಂಘದ ಸಂಸ್ಥಾಪಕರಿಗೆ ಶ್ರದ್ಧಾಂಜಲಿ ನೀಡುತ್ತಾ ಸಂಘದ ಸಂಸ್ಥಾಪಕರು ಈ ಸಂಘವೆಂಬ ಬೀಜ ಬಿತ್ತಿ ಬಹಳ ಶ್ರಮದಿಂದ ಬೆಳಿಸಿದಂತಹ ಈ ಸಂಘ ದೊಡ್ಡ ಹೆಮ್ಮರವಾಗಿ ಇದರ ತಂಪನ್ನು ಎಲ್ಲ ಸದಸ್ಯರಿಗೆ ನೀಡುತ್ತಿದೆ ಎಂದುವಿಶ್ಲೇಷಿಸಿ ಸಂಘದ ನೂರನೇ ಸಂಸ್ಥಾಪನಾ ದಿನದ ಶುಭ ಕೋರಿದರು ಮತ್ತು ಸಂಘದ ಶತಮಾನೋತ್ಸವಕ್ಕೆ ಸಾಧ್ಯವಾದಷ್ಟು ಸಹಕರಿಸುವುದಾಗಿ ಆಶ್ವಾಸನೆ ನೀಡಿದರು.

ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ ಇವರು ಮಾತನಾಡಿ ನಾವೆಲ್ಲ ಏಕತೆ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎನ್ನುವ ಉದ್ದೇಶದಿಂದ ನಮ್ಮ ಪೂರ್ವಜರು ಈ ಸಂಘವನ್ನು ಕಟ್ಟಿ ಬೆಳೆಸಿದರು. ಸಂಘದ ಸಂಸ್ಥಾಪಕರು ಬಹಳ ಶ್ರಮದಿಂದ ಕಟ್ಟಿ ಬೆಳೆಸಿದ ಈ ಸಂಘದ ಶತಮಾನೋತ್ಸವವನ್ನು ಆಚರಿಸುವಲ್ಲಿ ತಮ್ಮಿಂದ ಸಾಧ್ಯವಾದಷ್ಟು ಸಂಘಕ್ಕೆ ಸಹಕರಿಸುವುದಾಗಿ ಆಶ್ವಾಸನೆ ನೀಡಿದರು.

ಸಂಘದ ಸ್ಥಳೀಯ ಸಮಿತಿಗಳ ಸಂಯೋಜಕರಾದ ಶ್ರೀ ಜಯ ಎಲ್. ದೇವಾಡಿಗ ಇವರು ಮಾತನಾಡಿ ಸಂಘವು ಯಾವುದೇ ಪ್ರಚಾರ ಬಯಸದೆ ಸಮಾಜದ ಬಡಕುಟುಂಬಗಳಿಗೆ ಸಾಕಷ್ಟು ಅರೋಗ್ಯ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಸಾಕಷ್ಟು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸದಸ್ಯರು ಎಲ್ಲರೂ ಒಟ್ಟಾಗಿ ಸಂಘದ ಶತಮಾನೋತ್ಸವವನ್ನು ಅದ್ದೂರಿಯಿಂದ ಆಚರಿಸೋಣ ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗರು ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಸಭೆಯ ಉದ್ದೇಶ ಗಳ ವಿವರ ನೀಡಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.